Rajiv Gandhi: ಇಂದು ರಾಜೀವ್ ಗಾಂಧಿ 75ನೇ ಜನ್ಮದಿನಾಚರಣೆ; ಕಾಂಗ್ರೆಸ್​ ನಾಯಕರಿಂದ ಮಾಜಿ ಪ್ರಧಾನಿ ಸಮಾಧಿಗೆ ಪುಷ್ಪನಮನ

ಇಂದು ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿ ಅವರ 75ನೇ ಜನ್ಮದಿನಾಚರಣೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಮಗ ರಾಜೀವ್ ಗಾಂಧಿ ಪೈಲಟ್ ಆಗುವ ಕನಸು ಕಂಡವರು. ನಂತರ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸುವ ಪರಿಸ್ಥಿತಿ ಎದುರಾಯಿತು. ಇಟಲಿ ಮೂಲದ ಸೋನಿಯಾ ಅವರನ್ನು ಮದುವೆಯಾದ ರಾಜೀವ್ ಗಾಂಧಿ ಅಮೇಥಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದರು. ಬಳಿಕ ತಾಯಿ ಇಂದಿರಾ ಗಾಂಧಿ ಅವರ ಮರಣಾ ನಂತರ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ತಮಿಳುನಾಡಿನ ಪೆರಂಬೂರಿನಲ್ಲಿ ಎಲ್​ಟಿಟಿಇ ಆತ್ಮಾಹುತಿ ಬಾಂಬ್ ದಾಳಿಗೆ ಬಲಿಯಾದ ರಾಜೀವ್ ಗಾಂಧಿ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗಲೇ ಮರಣ ಹೊಂದಿದರು. ಅವರ ಮಕ್ಕಳಾದ ಪ್ರಿಯಾಂಕಾ, ರಾಹುಲ್ ಗಾಂಧಿ ಕೂಡ ಪ್ರಸ್ತುತ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇಂದು ರಾಜೀವ್ ಗಾಂಧಿ ಅವರ 75ನೇ ಜನ್ಮ ದಿನಾಚರಣೆ. ವೀರಭೂಮಿಯಲ್ಲಿರುವ ಅವರ ಸಮಾಧಿಗೆ ಬೆಳಗ್ಗೆಯಿಂದ ಕಾಂಗ್ರೆಸ್​ ನಾಯಕರು, ಕುಟುಂಬಸ್ಥರು ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ.

  • News18
  • |
First published: