ಗುಜರಾತಿನ ಉಮಂಗ್ ಕಂಪನಿಯಿಂದ ಸಸಿಗಳನ್ನು ತರುವ ರೈತರು, ಪಾಲಿಹೌಸ್, ಶೆಡ್ ನೆಟ್ ಹೌಸ್ ಮತ್ತು ಪ್ಲಾಸ್ಟಿಕ್ ಮಲ್ಚಿಂಗ್ ಮೂಲಕ ಸಿದ್ಧಪಡಿಸಲಾದ ಒಂದು ಬಿಘಾ(0.3 ಎಕರೆ) ಅಂದರೆ 100 ರಿಂದ 150 ಅಡಿ ಜಾಗದಲ್ಲಿ ಗಿಡಗಳನ್ನು ನೆಡುತ್ತಾರೆ. ತಿಂಗಳ ನಂತರ ಬೆಳೆಗಳು ಕೈಗೆ ಸಿಗುತ್ತವೆ. ಗುಜರಾತಿನ ಉಮಂಗ್ ಕಂಪನಿಯೇ ರೈತರ ಟೊಮ್ಯಾಟೋವನ್ನು ಖರೀದಿಸುವುದರಿಂದ ಈ ರೈತರಿಗೆ ತಮ್ಮ ಬೆಳೆಯನ್ನು ಮಾರಾಟ ಮಾಡುವ ಚಿಂತೆಯಿಲ್ಲ. ಕಂಪನಿ ಈ ಟೊಮ್ಯಾಟೋಗಳಿಂದ ಬೀಜಗಳನ್ನು ತಯಾರಿಸುತ್ತದೆ.
ಹೊಸ ತಂತ್ರಜ್ಞಾನದಲ್ಲಿ ಬೆಳೆದಿರುವ ಒಂದು ಗಿಡದಿಂದ 22 ಬಾರಿ ಟೊಮ್ಯಾಟೋ ಕೊಯ್ಲು ಮಾಡಲಾಗುತ್ತದೆ. ಒಂದು ಬಿಘಾಗೆ(0.3 ಎಕರೆ) 40 ರಿಂದ 50 ಸಾವಿರ ವೆಚ್ಚವಾಗುತ್ತದೆ. ಈ ವರ್ಷ ಧುಲ್ಸಿಂಗ್ ತಮ್ಮ ಜಮೀನಿನಲ್ಲಿ 12 ಬಾರಿ ಟೊಮ್ಯಾಟೊ ಫಸಲು ಪಡೆದಿದ್ದಾರೆ. ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಟೊಮೆಟೋ ಮಾರಾಟ ಮಾಡಿದ್ದಾರೆ. ಗುಜರಾತಿನ ಉಮಂಗ್ ಕಂಪನಿಗೆ ಟೊಮ್ಯಾಟೋ ಮಾರುತ್ತಾರೆ.