ಉಜ್ವಲಾ ಯೋಜನೆಯಡಿ ನೋಂದಣಿಯಾದ BPL ಕಾರ್ಡ್ದಾರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. (ಸಾಂದರ್ಭಿಕ ಚಿತ್ರ)
2/ 7
ಮುಂದಿನ ವರ್ಷ, ಅಂದರೆ 2023ರ ಏಪ್ರಿಲ್ 1 ರಿಂದ BPL ಕಾರ್ಡ್ದಾರರಿಗೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಒದಗಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ. (ಸಾಂದರ್ಭಿಕ ಚಿತ್ರ)
3/ 7
ಬಡತನ ರೇಖೆಗಿಂತ ಕೆಳಗಿನ ಎಲ್ಲ ಕುಟುಂಬಗಳಿಗೂ 500 ರೂಪಾಯಿಗೆ ಸಿಲಿಂಡರ್ ಗ್ಯಾಸ್ ಒದಗಿಸುವುದಾಗಿ ಅವರು ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
4/ 7
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಅವರು ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ಇಡೀ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಬೆಲೆ ಏರಿಕೆಯ ಭೀತಿಯಲ್ಲಿ ಮಧ್ಯಮ ಮತ್ತು ಬಡ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. (ಸಾಂದರ್ಭಿಕ ಚಿತ್ರ)
6/ 7
ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳಗಳಿಂದ (ಸಿಬಿಐ) ಜನರು ಭಯಭೀತರಾಗಿದ್ದರು. ಆದರೆ ಈಗ ಈ ಏಜೆನ್ಸಿಗಳು ಮೇಲಿಂದ ಮೇಲೆ ಯಾವ ಆದೇಶ ಬರುತ್ತದೆ ಎಂದು ಯೋಚಿಸುತ್ತಿವೆ ಎಂದು ಅವರು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. (ಸಾಂದರ್ಭಿಕ ಚಿತ್ರ)
7/ 7
ಒಟ್ಟಾರೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಬಿಪಿಎಲ್ ಕಾರ್ಡ್ದಾರರಿಗೆ 500 ರೂಪಾಯಿಗೆ ಸಿಲಿಂಡರ್ ಗ್ಯಾಸ್ ನೀಡುವುದಾಗಿ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)