ರೈಲುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಎನ್ನುವುದು ಇಂದು-ನಿನ್ನೆಯ ದೂರಲ್ಲ. ಹಲವು ಕಾಲದಿಂದ ಕೇಳಿ ಬರುತ್ತಿರುವ ಇಂತಹದೊಂದು ದೂರನ್ನು ಪರಿಗಣಿಸಿ ಈ ಹಿಂದೆ ರೈಲ್ವೆ ರೈಲ್ವೆ ಸಚಿವ ಪಿಯೂಶ್ ಗೋಯಲ್ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
2/ 13
ಅದರಂತೆ ನಿಗದಿತ ಸಮಯಕ್ಕೆ ರೈಲು ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಯು ನಾನಾ ಕ್ರಮಗಳಿಗೆ ಮುಂದಾಗಿದೆ. ಅದರಲ್ಲೊಂದು ರೈಲು ತಡವಾದರೆ, ಅದಕ್ಕೆ ಕಾರಣವಾಗುವ ಅಧಿಕಾರಿಗಳ ಬಡ್ತಿ ವಿಳಂಬ.
3/ 13
ಕಳೆದ ವರ್ಷ ರೈಲ್ವೆ ಇಲಾಖೆ ಹೊರಡಿಸಿದ ಆದೇಶದಲ್ಲಿ ಅಧಿಕಾರಿಗಳು ಸಮಯದ ನಿಮಮವನ್ನು ಪಾಲಿಸಬೇಕೆಂದು ತಿಳಿಸಲಾಗಿತ್ತು. ಅಲ್ಲದೆ ರೈಲು ತಡಮಾಡುವ ಅಧಿಕಾರಿಗಳ ಬಡ್ತಿಯನ್ನು ತಡೆ ಹಿಡಿಯಲಾಗುವುದು ಎಂದು ತಿಳಿಸಿದ್ದರು. ಇದೀಗ ಭಾರತೀಯ ರೈಲ್ವೆ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ.
4/ 13
ರೈಲ್ವೆ ಹಳಿಗಳ ಮೇಲಿನ ಹೊಸ ರಾಜ ಎಂದು ಬಣ್ಣಿಸಲಾಗಿರುವ ತೇಜಸ್ ಎಕ್ಸ್ಪ್ರೆಸ್ ಟ್ರೈನ್ ತಡವಾದರೆ ಪ್ರಯಾಣಿಕರಿಗೆ ಪರಿಹಾರ ಹಣವನ್ನು ನೀಡುವುದಾಗಿ ರೈಲ್ವೆ ಸಚಿವಾಲಯ ಮಂಗಳವಾರ ಘೋಷಿಸಿದೆ.
5/ 13
ಲಕ್ನೋದಿಂದ ನವದೆಹಲಿಗೆ ಶುಕ್ರವಾರ ಕಾರ್ಯಾಚರಣೆ ಆರಂಭಿಸಲಿರುವ ತೇಜಸ್ ಎಕ್ಸ್ಪ್ರೆಸ್ಗೆ ಮಾತ್ರ ಸದ್ಯ ನಿಬಂಧನೆ ಅನ್ವಯಿಸಲಿದ್ದು, ಈ ರೈಲಿನ ಪ್ರಯಾಣಿಕರು ಟ್ರೈನ್ ವಿಳಂಬವಾದರೆ ಪರಿಹಾರ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ. ಅಂದರೆ..
6/ 13
ತೇಜಸ್ ಎಕ್ಸ್ಪ್ರೆಸ್ ರೈಲು ಒಂದು ಗಂಟೆ ತಡವಾದರೆ ಪ್ರಯಾಣಿಕರಿಗೆ ತಲಾ 100 ರೂಪಾಯಿಯಂತೆ ಪರಿಹಾರ ಸಿಗಲಿದೆ. ಹಾಗೆಯೇ 2 ಗಂಟೆ...
7/ 13
ಎರಡು ಗಂಟೆ ತಡವಾಗಿ ರೈಲು ಬಂದರೆ 250 ರೂ. ಅನ್ನು ಪರಿಹಾರ ಮೊತ್ತವನ್ನಾಗಿ ನೀಡಲಿದೆ ಎಂದು ಐಆರ್ಸಿಟಿಸಿ ತಿಳಿಸಿದೆ. ಇದಲ್ಲದೆ...
8/ 13
ತೇಜಸ್ ಎಕ್ಸ್ಪ್ರೆಸ್ ಟಿಕೆಟ್ ಬುಕ್ಕಿಂಗ್ ಮೇಲೆ ಪ್ರಯಾಣಿಕರಿಗೆ 25 ಲಕ್ಷ ರೂಪಾಯಿ ಮೌಲ್ಯದ ಪೂರಕ ಪ್ರಯಾಣ ವಿಮಾ ಸುರಕ್ಷತೆಯನ್ನು ನೀಡಲಿದೆ. ಅದೇ ರೀತಿ...
9/ 13
ಈ ವಿಮೆಯಲ್ಲಿ ಪ್ರಯಾಣದ ವೇಳೆ ಮನೆ ಕಳ್ಳತನ / ದರೋಡೆ ನಡೆದರೆ ಒಂದು ಲಕ್ಷ ರೂ. ವಿಮಾ ಮೊತ್ತ ಪರಿಹಾರವಾಗಿ ಸಿಗಲಿದೆ ಎಂದು ತಿಳಿಸಿದೆ.
10/ 13
ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಪ್ರಯಾಣಿಕರು ಆನ್ಲೈನ್ನಲ್ಲಿ ಒದಗಿಸಿದ ಲಿಂಕ್ನಲ್ಲಿ ವಿಮಾ ಕಂಪನಿಯೊಂದಿಗೆ ಕ್ಲೈಮ್ ಮಾಡಬೇಕಾಗುತ್ತದೆ.
11/ 13
ಅಗತ್ಯ ದಾಖಲೆಗಳನ್ನು ಸಲ್ಲಿಸಿದಾಗ, ವಿಮಾ ಕಂಪನಿಯು 2-3 ದಿನಗಳಲ್ಲಿ ನಿಮ್ಮ ಪ್ರಯಾಣ ಸುರಕ್ಷಾ ವಿಮೆಯನ್ನು ಪಾವತಿಸಲಿದೆ.
12/ 13
2017-2018ನೇ ಸಾಲಿನಲ್ಲಿ ಶೇ.30ರಷ್ಟು ರೈಲುಗಳು ತಡವಾಗಿ ಬಂದಿವೆ. ಶೇ.49 ರಷ್ಟು ಅಧಿಕಾರಿಗಳ ವಿರುದ್ದ ಅಶಿಸ್ತಿನ ದೂರು ದಾಖಲಾಗಿದೆ. ಹೀಗಾಗಿ ಐಆರ್ಸಿಟಿಸಿ ತೇಜಸ್ ಎಕ್ಸ್ಪ್ರೆಸ್ ಪ್ರಯಾಣಿಕರಿಗೆ ವಿಳಂಬ ಪರಿಹಾರ ಮೊತ್ತ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.
13/ 13
ಒಟ್ಟಿನಲ್ಲಿ ರೈಲ್ವೆ ಸಚಿವಾಲಯದ ಹೊಸ ನಿಯಮ ಇತರೆ ರೈಲುಗಳಿಗೂ ಅನ್ವಯಿಸಿದರೆ, ರೈಲುಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ದೂರುಗಳು ಕಡಿಮೆಯಾಗಬಹುದು ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.