Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

Rahul Gandhi: ಲೋಕಸಭೆ ಸದಸ್ಯತ್ವ ಕಳೆದುಕೊಂಡ ಬಳಿಕ ರಾಹುಲ್ ಗಾಂಧಿ ತಮಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಏಪ್ರಿಲ್ 23 ರೊಳಗೆ ಸರ್ಕಾರದಿಂದ ಮಂಜೂರು ಮಾಡಲಾದ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ಸಚಿವಾಲಯ ಅವರಿಗೆ ನೋಟಿಸ್ ನೀಡಿತ್ತು.

First published:

  • 17

    Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

    ನವದೆಹಲಿ: ಲೋಕಸಭೆ ಸದಸ್ಯತ್ವ ಕಳೆದುಕೊಂಡ ಬಳಿಕ ರಾಹುಲ್ ಗಾಂಧಿ ತಮಗೆ ನೀಡಿದ್ದ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಏಪ್ರಿಲ್ 23 ರೊಳಗೆ ಸರ್ಕಾರದಿಂದ ಮಂಜೂರು ಮಾಡಲಾದ 12 ತುಘಲಕ್ ಲೇನ್ ಬಂಗಲೆಯನ್ನು ಖಾಲಿ ಮಾಡುವಂತೆ ಲೋಕಸಭೆಯ ಸಚಿವಾಲಯ ಅವರಿಗೆ ನೋಟಿಸ್ ನೀಡಿತ್ತು.

    MORE
    GALLERIES

  • 27

    Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

    ಈ ಕಾರಣದಿಂದ ಮಾಜಿ ಕಾಂಗ್ರೆಸ್ ಅಧ್ಯಕ್ಷ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ಈಗಾಗಲೇ ಸಿದ್ಧತೆ ನಡೆಸುತ್ತಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ರಾಹುಲ್​ ಮನೆ ಖಾಲಿ ಮಾಡಲು ಪ್ಯಾಕಿಂಗ್​ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಈಗಾಗಲೆ ಮೇಲಿನ ಹಲವು ಕೋಣೆಗಳಲ್ಲಿನ ಎಲ್ಲಾ ಸಾಮಾನುಗಳನ್ನು ಪ್ಯಾಕ್ ಮಾಡಲಾಗಿದೆ.

    MORE
    GALLERIES

  • 37

    Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

    ಇನ್ನು ರಾಹುಲ್ ಗಾಂಧಿಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್​ ಜಾರಿ ಮಾಡಿದ ಬೆನ್ನಲ್ಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ರಾಹುಲ್​ಗೆ ತಮ್ಮ ಬಂಗಲೆ ನೀಡುವುದಾಗಿ ತಿಳಿಸಿದ್ದರು. ದೆಹಲಿಯ ಮಹಿಳಾ ನಾಯಕರು ತಮ್ಮ 4 ಅಂತಸ್ತಿನ ಮನೆಯನ್ನೇ ರಾಹುಲ್ ಗಾಂದಿಗೆ ಬರೆದುಕೊಡುವುದಾಗಿ ಆಫರ್ ನೀಡಿದ್ದರು.

    MORE
    GALLERIES

  • 47

    Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

    ಆದರೆ ರಾಹುಲ್ ಗಾಂಧಿ ಯಾವುದಕ್ಕೂ ಪ್ರತಿಕ್ರಿಯಿಸಿರಲಿಲ್ಲ. ಆದರೆ ಏಪ್ರಿಲ್​ 23ರ ನಂತರ ಎಲ್ಲಿಗೆ ಹೋಗಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿತ್ತು. ಇದೀಗ ಕಾಂಗ್ರೆಸ್ ನಾಯಕ ತಮ್ಮ ತಾಯಿಯ ಮನೆ ಸೇರಲಿದ್ದಾರೆ ಎನ್ನಲಾಗುತ್ತಿದೆ.

    MORE
    GALLERIES

  • 57

    Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

    ರಾಹುಲ್ ಗಾಂಧಿ ತಮ್ಮ ಬಂಗಲೆಯನ್ನು ಖಾಲಿ ಮಾಡಿ ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ವಾಸಿಸಲು ಹೋಗಲಿದ್ದಾರೆ. ಅವರ ಎಲ್ಲಾ ವಸ್ತುಗಳನ್ನು ಸಹ ಅಲ್ಲಿಗೆ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.

    MORE
    GALLERIES

  • 67

    Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

    ಈ ನಡುವೆ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಕಚೇರಿಗಾಗಿ ಜಾಗ ಹುಡುಕಲಾಗುತ್ತಿದೆ ಎಂಬ ಸುದ್ದಿ ಕೂಡ ತಿಳಿದುಬಂದಿದೆ. ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಜಯ ಸಾಧಿಸಿದರೆ, ಅವರ ಸದಸ್ಯತ್ವ ಮರಳಲಿದೆ. ಆಗ ಮತ್ತೆ ಸರ್ಕಾರಿ ಸೌಲಭ್ಯ ಪಡೆಯಲಿದ್ದಾರೆ.

    MORE
    GALLERIES

  • 77

    Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡುತ್ತಿರುವ ರಾಹುಲ್​ ಗಾಂಧಿ! ಇಲ್ಲಿಗೆ ಹೋಗಿ ಇರ್ತಾರಂತೆ ಕಾಂಗ್ರೆಸ್ ನಾಯಕ

    ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ವರ್ಷಗಳ ಹಿಂದಿನ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಈ ನಿರ್ಧಾರದ ನಂತರ, ಜನಪ್ರತಿನಿಧಿ ಕಾಯಿದೆ 1951 ರ ಪ್ರಕಾರ, ಅವರು ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

    MORE
    GALLERIES