Rahul Gandhi: ಕೇರಳದ ಮೀನುಗಾರರ ಜೊತೆ ಸಮುದ್ರದಲ್ಲಿ ಈಜಿ, ಮೀನು ಹಿಡಿದ ರಾಹುಲ್ ಗಾಂಧಿ!
Rahul Gandhi Swimming: ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ಕೊಲ್ಲಂ ಜಿಲ್ಲೆಯ ಸಮುದ್ರದಲ್ಲಿ ಈಜಾಡಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಮೀನುಗಾರರ ಜೊತೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ಮೀನುಗಾರರೊಂದಿಗೆ ಬಲೆ ಬೀಸಿ, ಮೀನು ಹಿಡಿದಿದ್ದಾರೆ. ಬಳಿಕ ಸಮುದ್ರಕ್ಕೆ ಹಾರಿ ಈಜಿದ್ದಾರೆ.
ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ಕೊಲ್ಲಂ ಜಿಲ್ಲೆಯ ಸಮುದ್ರದಲ್ಲಿ ಈಜಾಡಿರುವ ವಿಡಿಯೋ ವೈರಲ್ ಆಗಿದೆ.
2/ 11
ಕೊಲ್ಲಂನ ಮೀನುಗಾರರ ಜೊತೆ ಮಾತುಕತೆ ನಡೆಸಲು ತೆರಳಿದ್ದ ರಾಹುಲ್ ಗಾಂಧಿ ಅವರ ಜೀವನಶೈಲಿ, ವ್ಯಾಪಾರದ ಬಗ್ಗೆ ಮಾಹಿತಿ ಪಡೆದರು.
3/ 11
ನಿನ್ನೆ ತಂಗಸ್ಸೆರಿ ಸಮುದ್ರದ ದಡಕ್ಕೆ ಬಂದ ಅವರು ಬೋಟಿನ ಮೇಲೆ ನಿಂತು ಮೀನುಗಾರರ ಜೊತೆ ಬಲೆ ಬೀಸಿ, ಮೀನು ಹಿಡಿದಿದ್ದಾರೆ. ಬಳಿಕ ಮೀನುಗಾರರು ಮೀನು ಹಿಡಿಯಲು ನೀರಿಗೆ ಹಾರುತ್ತಿದ್ದಂತೆ ರಾಹುಲ್ ಗಾಂಧಿ ಕೂಡ ನೀರಿಗೆ ಜಿಗಿದಿದ್ದಾರೆ.
4/ 11
ನೋಡನೋಡುತ್ತಿದ್ದಂತೆ ಬೋಟಿನಿಂದ ಮೀನುಗಾರರ ಜೊತೆ ಸಮುದ್ರಕ್ಕೆ ಜಿಗಿದ ರಾಹುಲ್ ಗಾಂಧಿ ಸಮುದ್ರದಲ್ಲಿ ಈಜಾಡಿದರು.
5/ 11
ಕೊಲ್ಲಂ ಜಿಲ್ಲೆಯ ತಂಗಸ್ಸೆರಿ ಸಮುದ್ರದಲ್ಲಿ ರಾಹುಲ್ ಗಾಂಧಿ ಈಜಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದಿವೆ. ಮೀನುಗಾರರೊಂದಿಗೆ ಸಮುದ್ರದಲ್ಲಿ 10 ನಿಮಿಷಗಳ ಕಾಲ ಅವರು ಈಜಿದ್ದಾರೆ.
6/ 11
ರಾಹುಲ್ ಗಾಂಧಿ ಈಜುವುದರಲ್ಲಿ ಪರಿಣತಿ ಹೊಂದಿದ್ದು, 10 ನಿಮಿಷಗಳ ಕಾಲ ಸಮುದ್ರದಲ್ಲಿ ಈಜಾಡಿದರು.
7/ 11
ಆದರೆ, ಬೋಟಿನ ಮೇಲೆ ನಿಂತು ನೋಡುತ್ತಿದ್ದ ಕಾರ್ಯಕರ್ತರು, ಸ್ಥಳೀಯ ಕಾಂಗ್ರೆಸ್ ನಾಯಕರು ಮಾತ್ರ ರಾಹುಲ್ ಗಾಂಧಿ ದಡಕ್ಕೆ ಬರುವವರೆಗೂ ಆತಂಕದಿಂದ ಚಡಪಡಿಸುತ್ತಿದ್ದರು.
8/ 11
ಕೇರಳದ ಕೊಲ್ಲಂನ ಸಮುದ್ರದ ನೀರಿನಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯ ಈಜಾಟ
9/ 11
ನೀಲಿ ಬಣ್ಣದ ಟಿ-ಶರ್ಟ್ ಹಾಗೂ ಪ್ಯಾಂಟ್ನಲ್ಲಿಯೇ ರಾಹುಲ್ ಗಾಂಧಿ ಸಮುದ್ರಕ್ಕೆ ಹಾರಿದರು.
10/ 11
ದಡಕ್ಕೆ ಬಂದ ನಂತರ ಸುಮಾರು 2 ಗಂಟೆಗಳ ಕಾಲ ಅವರು ಮೀನುಗಾರರ ಜೊತೆ ಸಂವಾದ ನಡೆಸಿದರು.
11/ 11
ಕೇರಳದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಹುಲ್ ಗಾಂಧಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಹೀಗಾಗಿ, ರಾಜ್ಯಾದ್ಯಂತ ಪ್ರವಾಸ ಮಾಡಿ, ಅಲ್ಲಿನ ಜನರೊಂದಿಗೆ ಬೆರೆತು ಗಮನ ಸೆಳೆಯುತ್ತಿದ್ದಾರೆ.