ಈ ನಾಯಿಯ ಯೋಗಕ್ಷೇಮವನ್ನು ನೋಡಿಕೊಳ್ಳಲು ಪಂಜಾಬ್ ಪೊಲೀಸ್ ಇಲಾಖೆ ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಗತ್ಯಕ್ಕೆ ತಕ್ಕಂತೆ ಆಹಾರ, ನೀರು, ಕೂಲರ್, ವಿಶೇಷ ಊಟ ಮತ್ತು ಔಷಧಗಳಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಹೆಡ್ ಕಾನ್ಸ್‌ಟೇಬಲ್ ಕುಲ್ಬೀರ್ ಸಿಂಗ್ ನಾಯಿಯ ಆರೈಕೆ ಮಾಡಿದ್ದು, ಕ್ಯಾನ್ಸರ್‌ನಂತಹ ಗುಣಪಡಿಸಲಾಗದ ಕಾಯಿಲೆಯನ್ನು ಎದುರಿಸಲು ಸಿಮ್ಮಿಗೆ ನೆರವಾಗಿದ್ದಾರೆ.