Free Electricity: ಎಲ್ಲರಿಗೂ ಫ್ರೀ ಕರೆಂಟ್! ತಿಂಗಳಿಗೆ 300 ಯುನಿಟ್ ವಿದ್ಯುತ್ ಉಚಿತ ಯೋಜನೆ ಜಾರಿಗೊಳಿಸಿದ ಭಗವಂತ್ ಮಾನ್
ಪಂಜಾಬ್ನಲ್ಲಿ ಅಕ್ರಮವಾಗಿ ಹಣ ಕೂಡಿಟ್ಟಿರುವ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗುವುದು ಎಂದು ಸಿಎಂ ಭಗವಂತ ಮಾನ್ ಹೇಳಿದ್ದಾರೆ. ತಮ್ಮ ಸರ್ಕಾರ ಪಂಜಾಬ್ ಮತ್ತು ಪಂಜಾಬಿಗಳ ಪರವಾಗಿ ಕೆಲಸ ಮಾಡುತ್ತದೆ ಎಂದು ಪಂಜಾಬ್ ಸಿಎಂ ಘೋಷಿಸಿದ್ದಾರೆ.
ಭರಪೂರ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಜನರಿಗೆ ಸಿಹಿಯನ್ನು ನೀಡಿದೆ. ಪಂಜಾಬ್ ನಲ್ಲಿ ಈಗಾಗಲೇ ಹಲವಾರು ವಿನೂತನ ಯೋಜನೆಗಳೊಂದಿಗೆ ಘೋಷಿಸಿದ್ದ ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದ ಸರ್ಕಾರ ಇಂದಿನಿಂದ ಮತ್ತೊಂದು ಯೋಜನೆಗೆ ಚಾಲನೆ ನೀಡಿದ್ದಾರೆ.
2/ 8
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಂದು ಹೊಸ ಇತಿಹಾಸ ಬರೆಯುತ್ತಿದೆ. ಚುನಾವಣಾ ಪ್ರಚಾರದ ಅಂಗವಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿರುವುದು ಮತ್ತೊಮ್ಮೆ ಸುದ್ದಿ ಮಾಡಿದೆ. ಇಂದಿನಿಂದ (ಜುಲೈ 1) ವಸತಿ ಗೃಹಗಳಲ್ಲಿ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ಬಳಸಬಹುದು. ಸುಮಾರು 300 ಯೂನಿಟ್ವರೆಗೆ ಕರೆಂಟ್ ಬಿಲ್ ಬರುವುದಿಲ್ಲ.
3/ 8
ವಿಧಾನಸಭೆ ಚುನಾವಣೆಗೂ ಮುನ್ನ ಆಮ್ ಆದ್ಮಿ ಪಕ್ಷ ಹಲವು ಭರವಸೆಗಳನ್ನು ನೀಡಿತ್ತು. ಅವುಗಳ ಪೈಕಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇಂದಿನಿಂದ ಪಂಜಾಬ್ ಜನರಿಗೆ ಉಚಿತ ವಿದ್ಯುತ್ ಒದಗಿಸಲಿದೆ.
4/ 8
ಬಹುತೇಕ 300 ಯೂನಿಟ್ಗಳವರೆಗೆ ಉಚಿತ ಕರೆಂಟ್ ಅನ್ನು ಬಳಸಬಹುದು. ಈ ಬಗ್ಗೆ ಸಿಎಂ ಭಗವಂತ್ ಮಾನ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಸರ್ಕಾರ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.
5/ 8
ಭಗವಂತ್ ಮಾನ್ ಪಂಜಾಬ್ನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳು ಭರವಸೆ ನೀಡಿ ವರ್ಷಗಳೇ ಕಳೆದರೂ ಜಾರಿಯಾಗಿಲ್ಲ. ಆದರೆ ತಮ್ಮ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.
6/ 8
ಇದೇ ವೇಳೆ ಆಪ್ ನಾಯಕ ಹಾಗೂ ಸಂಸದ ಗೌರವ್ ಚಡ್ಡಾ ಅವರು ಉಚಿತ ವಿದ್ಯುತ್ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ದೆಹಲಿಯ ನಂತರ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿರುವ ದೇಶದ ಎರಡನೇ ರಾಜ್ಯ ಪಂಜಾಬ್ ಎಂದು ಅವರು ಹೇಳಿದ್ದಾರೆ.
7/ 8
ಪಂಜಾಬ್ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ನೀಡಿದ ಭರವಸೆ ಸಾಕಾರಗೊಂಡಿದೆ ಎಂದು ಗೌರವ್ ಹೇಳಿದ್ದಾರೆ. ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಅವರು ಈ ಯೋಜನೆಯ ಅನುಷ್ಠಾನದಿಂದ ಪಂಜಾಬ್ ಸರ್ಕಾರದ ಬೊಕ್ಕಸಕ್ಕೆ 1,800 ಕೋಟಿ ರೂ.ಗಳ ಹೊರೆ ಬೀಳಲಿದೆ ಎಂದು ತಿಳಿಸಿದ್ದಾರೆ.
8/ 8
ಪಂಜಾಬ್ನಲ್ಲಿ ಅಕ್ರಮವಾಗಿ ಹಣ ಕೂಡಿಟ್ಟಿರುವ ರಾಜಕಾರಣಿಗಳು ಹಾಗೂ ಭ್ರಷ್ಟ ಅಧಿಕಾರಿಗಳಿಂದ ಹಣ ವಸೂಲಿ ಮಾಡಲಾಗುವುದು ಎಂದು ಸಿಎಂ ಭಗವಂತ ಮಾನ್ ಹೇಳಿದ್ದಾರೆ. ತಮ್ಮ ಸರ್ಕಾರ ಪಂಜಾಬ್ ಮತ್ತು ಪಂಜಾಬಿಗಳ ಪರವಾಗಿ ಕೆಲಸ ಮಾಡುತ್ತದೆ ಎಂದು ಪಂಜಾಬ್ ಸಿಎಂ ಘೋಷಿಸಿದ್ದಾರೆ.