Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

Punjab Cabinet : ಅದ್ಭುತ ಗೆಲುವಿನೊಂದಿಗೆ ಪಂಜಾಬ್ ನಲ್ಲಿ ಆಪ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಪಂಜಾಬ್ ಸಿಎಂ ಭಗವಂತ್ ಮಾನ್ ಸಂಪುಟಕ್ಕೆ ಇಂದು 10 ಸಚಿವರು ಸೇರ್ಪಡೆಯಾಗಿದ್ದಾರೆ. ಶಾಸಕರು ಚಂಡೀಗಢದ ರಾಜಭವನದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಾಮಾಜಿಕ ಸಮತೋಲನ ನಿಟ್ಟಿನಲ್ಲಿ ಸಚಿವ ಸಂಪುಟ ರಚನೆ ನಡೆದಂತಿದೆ.

First published:

  • 19

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಪಂಜಾಬ್ ಆಮ್ ಆದ್ಮಿ ಪಕ್ಷದ ಹತ್ತು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭನ್ವರಿಲಾಲ್ ಪುರೋಹಿತ್ ಅವರು 10 ಮಂದಿಗೆ ಪ್ರಮಾಣ ವಚನ ಬೋಧಿಸಿದರು.

    MORE
    GALLERIES

  • 29

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಡಾ. ದಲ್ಜಿತ್ ಕೌರ್, ಹರ್ಪಾಲ್ ಸಿಂಗ್ ಚೀಮಾ, ಹರ್ಭಜನ್ ಸಿಂಗ್, ಡಾ. ವಿಜಯ್ ಸಿಂಗ್ಲಾ, ಗುರ್ಮೀತ್ ಸಿಂಗ್, ಬ್ರಾಮ್ ಶಂಕರ್ ಕಟಾರುಚಕ್, ಹರ್ಜೋತ್ ಸಿಂಗ್ ಬೈನ್ಸ್, ಲಾಲ್ಜಿತ್ ಸಿಂಗ್ ಭುಲ್ಲರ್ ಮತ್ತು ಕುಲದೀಪ್ ಸಿಂಗ್ ಧಲಿವಾಲ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    MORE
    GALLERIES

  • 39

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಇಬ್ಬರು ರೈತರು, ಮೂವರು ವಕೀಲರು, ಇಬ್ಬರು ವೈದ್ಯರು, ಸಮಾಜ ಸೇವಕ, ಎಂಜಿನಿಯರ್ ಮತ್ತು ಉದ್ಯಮಿಯಾಗಿರುವ ಶಾಸಕರಿಗೆ ಸಂಪುಟದಲ್ಲಿ ಆದ್ಯತೆ ನೀಡಲಿದೆ ಎಂದು ಆಪ್ ಈಗಾಗಲೇ ಹೇಳಿಕೆಯಲ್ಲಿ ತಿಳಿಸಿದೆ.

    MORE
    GALLERIES

  • 49

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಪ್ರಸ್ತುತ ಕ್ಯಾಬಿನೆಟ್ ಮಂತ್ರಿಗಳಾಗಿ ಆಯ್ಕೆಯಾಗಿರುವ ಶಾಸಕರು ಪಂಜಾಬ್ನ ವಿವಿಧ ಭಾಗಗಳನ್ನು ಪ್ರತಿನಿಧಿಸುತ್ತಿದ್ದಾರೆ. ಹತ್ತರಲ್ಲಿ ಐವರು ಮಾಲ್ವಾದಿಂದ, ನಾಲ್ವರು ಮಜಾದಿಂದ ಮತ್ತು ಒಬ್ಬರು ದೋಬಾ ಪ್ರದೇಶದ ಶಾಸಕರಾಗಿದ್ದಾರೆ.

    MORE
    GALLERIES

  • 59

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸಂಪುಟದಲ್ಲಿ ಹತ್ತು ಆಮ್ ಆದ್ಮಿ ಪಕ್ಷದ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಾಮಾಣಿಕ ಆಡಳಿತ ನೀಡಲು ಶ್ರಮಿಸುವಂತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ಅಭಿನಂದಿಸಿದ್ದಾರೆ.

    MORE
    GALLERIES

  • 69

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಪಂಜಾಬ್ ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಪ್ ಭರ್ಜರಿ ಗೆಲುವು ಸಾಧಿಸಿದೆ. ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದದೆ. ಮೊನ್ನೆ ಭಗವಂತ್ ಮಾನ್ ಅವರು ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

    MORE
    GALLERIES

  • 79

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಪಂಜಾಬ್ ಸರ್ಕಾರದ ಒಟ್ಟು 17 ಕ್ಯಾಬಿನೆಟ್ ಹುದ್ದೆಗಳಲ್ಲಿ 10 ಸಚಿವ ಸ್ಥಾನಗಳನ್ನು ತುಂಬಲಾಗಿದೆ. ಇನ್ನುಳಿದ ಏಳು ಹುದ್ದೆಗಳು ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ.

    MORE
    GALLERIES

  • 89

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಸಿಎಂ ಮಾನ್ ಪುತ್ರಿ ಶೀರತ್ ಕೌರ್ ಮತ್ತು ಪುತ್ರ ದಿಲ್ಶನ್ ಮಾನ್ ಕೂಡ ಪ್ರಮಾಣ ವಚನ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹತ್ತು ಮಂದಿಗೆ ಇಲಾಖೆಗಳ ಹಂಚಿಕೆಯ ವಿವರ ಇನ್ನಷ್ಟೇ ತಿಳಿಯಬೇಕಿದೆ.

    MORE
    GALLERIES

  • 99

    Punjab Cabinet: ಪಂಜಾಬ್ ಸಂಪುಟಕ್ಕೆ 10 ಮಂದಿ ಸೇರ್ಪಡೆ: ರೈತರು, ವಕೀಲರಿಗೆ ಮಣೆ ಹಾಕಿದ ಸಿಎಂ ಮಾನ್

    ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇವೆ ಎಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖಂಡರು ಹೇಳಿದ್ದಾರೆ. ಆಪ್ ನಾಯಕರು ತಮಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು.

    MORE
    GALLERIES