Rashmi Thackeray: ಉದ್ಧವ್ ಠಾಕ್ರೆ ಹೆಂಡತಿಯನ್ನು ರಾಬ್ರಿದೇವಿಗೆ ಹೋಲಿಕೆ; ಬಿಜೆಪಿ ನಾಯಕನ ವಿರುದ್ಧ ಪ್ರಕರಣ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರ ಪತ್ನಿಯನ್ನು ಬಿಹಾರದ ಮಾಜಿ ಸಿಎಂ ರಾಬ್ರಿ ದೇವಿಗೆ (Rabri Devi ) ಹೋಲಿಸಿ ಮಹಾರಾಷ್ಟ್ರ ಬಿಜೆಪಿ ನಾಯಕರು (BJP) ಟ್ವೀಟ್ ಮಾಡಿದ್ದಾರೆ. ಈ ಹಿನ್ನಲೆ ಪುಣೆ ಪೊಲೀಸರು ಸೈಬಲ್ ಸೆಲ್ ಟ್ವೀಟ್ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಬಿಜೆಪಿ ಸಾಮಾಜಿಕ ಮಾಧ್ಯಮ ಸೆಲ್ ಉಸ್ತುವಾರಿ ಜಿತೇನ್ ಗಜಾರಿಯಾ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೆಂಡತಿ ರಶ್ಮಿ ಠಾಕ್ರೆ ಅವರ ಫೋಟೋವನ್ನು ಟ್ವೀಟ್ ಮಾಡಿದ ಗಜಾರಿಯಾ ಅವರನ್ನು ಮರಾಠಿ ರಾಬ್ರಿ ದೇವಿ ಎಂದು ಕರೆದಿದ್ದಾರೆ. ಈ ಹಿನ್ನಲೆ ಪ್ರಕರಣ ದಾಖಲಾಗಿದೆ.
2/ 5
ಕುತ್ತಿಗೆ ಮತ್ತು ಬೆನ್ನುನೋವಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯಿಂದಾಗಿ, ಸಿಎಂ ಉದ್ಧವ್ ಠಾಕ್ರೆ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲಿಲ್ಲ. ಅಂದಿನಿಂದ ರಶ್ಮಿ ಠಾಕ್ರೆ ಮುಖ್ಯಮಂತ್ರಿಯಾಗಬಹುದು ಎಂಬ ಊಹಾಪೋಹ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
3/ 5
ಈ ಗಾಳಿ ಸುದ್ದಿಯ ನಡುವೆ ಜನವರಿ 4 ರಂದು ಜಿತೇನ್ ಗಜಾರಿಯಾ ಅವರು ರಶ್ಮಿ ಠಾಕ್ರೆ ಅವರ ಚಿತ್ರದ ಜೊತೆಗೆ ಮರಾಠಿ ರಾಬ್ರಿ ದೇವಿ ಎಂ ಶೀರ್ಷಿಕೆ ಅಡಿ ಪೋಸ್ಟ್ ಮಾಡಿದ್ದರು.
4/ 5
ಗುಜಾರಿಯಾ ಈಗಾಗಲೇ ಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಪೋಸ್ಟ್ ಅನ್ನು ಅಪ್ಲೋಡ್ ಮಾಡಿದ ಆರೋಪ ಹೊಂದಿದ್ದಾರೆ. ಈ ಸಂಬಂಧ ಸೆಕ್ಷನ್ 153A, 500, 505(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ
5/ 5
ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಕೂಡ ಈ ಟ್ವೀಟ್ ಕುರಿತು ಕಿಡಿ ಕಾರಿದ್ದು, ಬಿಜೆಪಿ ಅವರಿಗೆ ಉದ್ಧವ್ ಮತ್ತು ಆದಿತ್ಯ ಠಾಕ್ರೆ ವಿರುದ್ಧ ಏನು ಮಾಡಲು ಸಾಧ್ಯವಾಗಿಲ್ಲ ಇದೇ ಕಾರಣಕ್ಕೆ ಬಿಜೆಪಿ ಐಟಿ ಸೆಲ್ ರಶ್ಮಿ ಠಾಕ್ರೆ ಹೆಸರನ್ನು ಎಳೆದು ತಂದಿದ್ದಾರೆ ಎಂದು ಆರೋಪಿಸಿದ್ದಾರೆ.