ಕೋವಿಡ್ -19 ಸಂಕಷ್ಟದ ಸಮಯದಲ್ಲಿ ನೈರ್ಮಲ್ಯ ಕಾರ್ಯಕರ್ತರು ನೀಡಿದ ಕೊಡುಗೆಯನ್ನು ಗುರುತಿಸಲು ಡಿಎಂಕೆ ಶಾಸಕ ಈ ಪಾರ್ಟಿಯನ್ನು ಆಯೋಜಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ಇದೇ ವೇಳೆ ಶಾಸಕರು ಸ್ವಚ್ಛತಾ ಕಾರ್ಯಕರ್ತರಿಗೆ ಔತಣಕೂಟ ಏರ್ಪಡಿಸಿದ್ದಕ್ಕಾಗಿ ಕಾರ್ಮಿಕರಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸ್ವೀಕರಿಸಿದ್ದಾರೆ. ನಮ್ಮ ಜೀವನದಲ್ಲಿ ನಾವು ಸ್ಟಾರ್ ಹೋಟೆಲ್ ಹೇಗಿರಲಿದೆ ಎಂದು ನೋಡಿರಲಿಲ್ಲ. ಶಾಸಕರ ಈ ಪ್ರಯತ್ನವನ್ನು ನಾವು ಪ್ರಶಂಸಿಸುತ್ತೇವೆ ಎಂದು ಸ್ವಚ್ಛತಾ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.