Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

ಪುಣೆ: ಪೊಲೀಸರು ಅಂದ್ರೆ ನಂಬಿಕೆ ಅಂತೀವಿ. ಪೊಲೀಸರು ಅಂದ್ರೆ ರಕ್ಷಣೆ ಅಂತೀವಿ. ಆದರೆ ರಕ್ಷಣೆ ನೀಡಬೇಕಾದ ಆರಕ್ಷಕರೇ ಜನರ ಮನೆಗೆ ನುಗ್ಗಿ ಬೆದರಿಕೆ ಹಾಕಿದರೆ ಹೇಗಾಗ್ಬೇಡ? ಇಲ್ಲಿಯೂ ಅಂತಹದ್ದೇ ಘಟನೆ ಘಟನೆ ನಡೆದಿದೆ.

First published:

  • 17

    Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

    ಹೌದು.. ಪೊಲೀಸ್‌ ಸಬ್‌ ಇನ್‌ಸ್‌ಪೆಕ್ಟರ್‌ವೊಬ್ಬ ಮಹಿಳೆಯ ಮನೆಗೆ ನುಗ್ಗಿ ಆಕೆಯ ಪತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿರುವ ಆತಂಕಕಾರಿ ಘಟನೆ ಪುಣೆಯಲ್ಲಿ ನಡೆದಿದೆ.

    MORE
    GALLERIES

  • 27

    Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

    ಫೆಬ್ರವರಿ 19 ರಂದು ಬೆಳಿಗ್ಗೆ 10 ಗಂಟೆಗೆ ಪುಣೆಯ ಕೊತ್ರೂಡ್‌ನ ಶಾಸ್ತ್ರಿ ನಗರದ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಪಿಎಸ್‌ಐ ವರ್ತನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

    MORE
    GALLERIES

  • 37

    Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

    ಮೂಲಗಳ ಪ್ರಕಾರ, ಆರೋಪಿ ಪೊಲೀಸ್‌ ಎಸ್‌ಐ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇತ್ತೀಚೆಗೆ ಗಂಡನ ಭಯದಿಂದ ಆಕೆ ಆತನನ್ನು ನಿರ್ಲಕ್ಷ್ಯ ಮಾಡುತ್ತಿದ್ದರಿಂದ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ತಿಳಿದು ಬಂದಿದೆ.

    MORE
    GALLERIES

  • 47

    Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

    ಆರೋಪಿ ಪಿಎಸ್‌ಐ ಅನ್ನು ನಾಗೇಶ ಜಾರ್ಡೆ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಕೊತ್ತೂರು ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

    MORE
    GALLERIES

  • 57

    Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

    ಮಹಿಳೆಯ ಗಂಡ 43 ವರ್ಷದ ವ್ಯಕ್ತಿ ಪಿಎಸ್‌ಐ ವಿರುದ್ಧ ದೂರು ನೀಡಿದ್ದು, ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರಿಂದ ಅದನ್ನು ಕೊನೆಗಾಣಿಸುವಂತೆ ಆತ ಪಿಎಸ್‌ಐಗೆ ತಿಳಿಸಿದ್ದ. ಇದರಿಂದ ಆತ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾನೆ.

    MORE
    GALLERIES

  • 67

    Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

    ಪೊಲೀಸ್‌ ಸಬ್‌ ಇನ್‌ಸ್‌ಪೆಕ್ಟರ್‌ ಮಹಿಳೆಯ ಮನೆಗೆ ನುಗ್ಗಿ ದೂರುದಾರ (ಗಂಡ), ಆತನ ತಾಯಿ ಮತ್ತು ಮಕ್ಕಳನ್ನು ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ. ಪತ್ನಿಗೆ ಏನಾದರೂ ಹೇಳಿದರೆ ತಕ್ಕ ಪಾಠ ಕಲಿಸುವುದಾಗಿ ಬೆದರಿಸಿದ್ದಾನೆ ಎಂದು ದೂರಲಾಗಿದೆ.

    MORE
    GALLERIES

  • 77

    Threaten: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ನುಗ್ಗಿ ಗಂಡನಿಗೆ ಬೆದರಿಕೆ; ಪಿಎಸ್‌ಐ ಅಮಾನತು

    ಪ್ರಕರಣ ಸಂಬಂಧ ಹೆಚ್ಚುವರಿ ಸಿಪಿ ಡಾ.ಜಲೀಂದರ್ ಸುಪೇಕರ್ ಅವರು ಆರೋಪಿ ನಾಗೇಶ್‌ ಜಾರ್ಡೆಯನ್ನು ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಿದ್ದಾರೆ.

    MORE
    GALLERIES