PHOTOS: ಕಾರುಗಳ ತಪಾಸಣೆ, ಆತ್ಮಹತ್ಯೆ ಬೆದರಿಕೆ, ಎಳೆದಾಟ, ಹೋರಾಟ; ಶಬರಿಮಲೆ ಸುತ್ತಮುತ್ತ ಹೈಡ್ರಾಮಾ
ಇಂದು ಶಬರಿಮಲೆಯಲ್ಲಿ ಇಂದು ವಿಶೇಷ ಮಾಸಿಕ ಪೂಜೆ ನಡೆಯುತ್ತದೆ. ಸುಪ್ರೀಂಕೋರ್ಟ್ನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರೂ ಪ್ರವೇಶಿಸಬಹುದು ಎಂಬ ತೀರ್ಪು ಹೊರಬಿದ್ದಿರುವ ಹಿನ್ನೆಲೆಯಲ್ಲಿ ಈ ಬಾರಿ ಅನೇಕ ಮಹಿಳೆಯರೂ ಶಬರಿಮಲೆಯನ್ನು ಪ್ರವೇಶಿಸಲು ಹೊರಟಿದ್ದರಿಂದ ಕೇರಳದ ಕೆಲ ಹಿಂದುತ್ವ ಪ್ರತಿಪಾದಕ ಸಂಘಟನೆಗಳು, ಶಿವಸೇನೆ ಕಾರ್ಯಕರ್ತರು ವಾಹನದಲ್ಲಿ ಮಹಿಳೆಯರಿದ್ದಾರಾ? ಎಂದು ಅಲ್ಲಲ್ಲಿ ಅಡ್ಡಗಟ್ಟಿ ತಪಾಸಣೆ ನಡೆಸಿದ್ದಾರೆ. ದೇಗುಲದ ಬಳಿ ಬಂದ ಮಹಿಳೆಯರನ್ನು ಎಳೆದು ಹೊರಹಾಕಿದ್ದಾರೆ. ಕೆಲವು ಮಹಿಳಾ ಕಾರ್ಯಕರ್ತೆಯರು ಆತ್ಮಹತ್ಯೆ ಮಾಡಿಕೊಳ್ಳಲೂ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ವಹಿಸಲಾಗಿತ್ತು. ಇಲ್ಲಿವೆ ಈ ದಿನ ಶಬರಿಮಲೆ ಸುತ್ತಮುತ್ತ ಕಂಡುಬಂದ ದೃಶ್ಯಗಳು...