ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತವಾಗಿದ್ದ 34 ವರ್ಷದ ಮಹಿಳೆಯನ್ನು ಬಿಡುಗಡೆ ಮಾಡುವಂತೆ ಮುಂಬೈ ಸೆಷನ್ ನ್ಯಾಯಾಲಯ ಬಿಡುಗಡೆ ಮಾಡಿದೆ. ಲೈಂಗಿಕ ವೃತ್ತಿಯನ್ನು ಸಾರ್ವಜನಿಕ ಸ್ಥಳಗಳನ್ನು ತೊಡಗಿಸಿಕೊಂಡು ಇತರರಿಗೆ ಕಿರಿ ಕಿರಿ ಉಂಟು ಮಾಡಿದರೆ ಅದು ಅಪರಾಧವಾಗುತ್ತದೆ, ಖಾಸಗಿಯಾಗಿ ಲೈಂಗಿಕ ವೃತ್ತಿ ಮಾಡಿದರೆ ಅದು ಆರೋಪವಲ್ಲ ಎಂದು ಕೋರ್ಟ್ ಉಲ್ಲೇಖಿಸಿದೆ.
ಸಂತ್ರಸ್ತೆಯು ವಯಸ್ಕರಾಗಿದ್ದಾರೆ. ಅವರು ಭಾರತದ ಪ್ರಜೆ. ಹೀಗಾಗಿ ಸಂವಿಧಾನ ಬದ್ಧ ಇಷ್ಟ ಬಂದ ಹಾಗೆ ಜೀವಿಸುವ ಹಕ್ಕುಗಳನ್ನು ಹೊಂದಿದ್ದಾರೆ. ಸಂತ್ರಸ್ತೆಯನ್ನು ಯಾವುದೇ ಕಾರಣ ಇಲ್ಲದೆ ಬಂಧಿಸಿದರೆ ಆಕೆಯ ಸ್ವತಂತ್ರವಾಗಿ ಓಡಾಡುವ ಹಾಗೂ ವಾಸಿಸುವ ಮತ್ತು ನೆಲೆಯೂರುವ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ ಮತ್ತು ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್ ಹೇಳಿದೆ.