ಪ್ರಿನ್ಸ್ ಫಿಲಿಪ್ ಅವರ ಅಪರೂಪದ ಫೋಟೋಗಳು 1947ರ ಜುಲೈ 31 ರ ಫೋಟೊ ಇದು. ದಿ. ಫಿಲಿಪ್ ಮೌಂಟ್ಬ್ಯಾಟನ್ ಅವರ ವಿವಾಹವು ರಾಣಿ ಎಲಿಜಬೆತ್ ಅವರೊಂದಿಗೆ ನವೆಂಬರ್ 20 ರಂದು ಏರ್ಪಾಡಾಗಿತ್ತು. ಈ ಚಿತ್ರವೂ ಇಂಗ್ಲೆಂಡ್ನ ಕೋರ್ಷಮ್ ಟ್ರೈನಿಂಗ್ ಸೆಂಟರ್ನಲ್ಲಿ ಕ್ರಿಕೆಟ್ ಅಭ್ಯಾಸದ ಸಮಯದಲ್ಲಿ ತೆಗೆದ ಚಿತ್ರವಾಗಿದೆ. ಹಾಗೂ ಗ್ರೀಸ್ನ ಪ್ರಿನ್ಸ್ ಫಿಲೀಪ್ ಮೆಲ್ಬೋರ್ನ್ನಲ್ಲಿ ನೌಕವಲಯಕ್ಕೆ ಭೇಟಿ ನೀಡಿದ್ದ ಸಂದರ್ಭವಾಗಿದ್ದು ಇದು 1945 ರ ಆಗಸ್ಟ್ 29 ರಂದು ತೆಗೆದ ಫೋಟೋ ಆಗಿದೆ.
ಜೋರ್ಡಾನ್ನ ರಾಜ ಕಿಂಗ್ ಹೂಸೈನ್ ಜೊತೆ ತೆಗೆದ ಫೋಟೋ ಜೋರ್ಡಾನ್ನ ರಾಜ ಕಿಂಗ್ ಹೂಸೈನ್ ಮತ್ತು ಅವರ ಪತ್ನಿ ಡಯಾನಾ ಹನಿಮೂನ್ನಲ್ಲಿ ಗ್ರೇಟ್ ಬ್ರಿಟನ್ನಲ್ಲಿ ಪೋಸ್ ನೀಡಿದ್ದು ಹೀಗೆ. ಇವರ ಜೊತೆಗೆ ಬ್ರಿಟಿಷ್ ರಾಣಿ ಎಲಿಜಬೆತ್, ಬ್ರಿಟನ್ ರಾಜ ಫಿಲಿಪ್ , ಬ್ರಿಟನ್ ಯುವರಾಜ ಚಾರ್ಲ್ಸ್, ಪ್ರಿನ್ಸ್ ಆಫ್ ವೇಲ್ಸ್ ಮತ್ತು ರಾಯಲ್ ಕುಟುಂಬದ ರಾಣಿ ಆ್ಯನ್ನೆ ಇದ್ದಾರೆ. ಜೂನ್ 19, 1955 ರಲ್ಲಿ ತೆಗೆದ ಚಿತ್ರವಿದು.
ರಾಯಲ್ ಕುಟುಂಬಗಳ ಕ್ರೀಡೋತ್ಸವ ಬ್ರಿಟನ್‌ನ ರಾಜಕುಮಾರ ಫಿಲಿಪ್, ಡ್ಯೂಕ್ ಆಫ್ ಎಡಿನ್‌ಬರ್ಗ್, ಬ್ರಿಟನ್‌ನ ರಾಣಿ ಎಲಿಜಬೆತ್ II, ಬ್ರಿಟನ್‌ನ ರಾಜಕುಮಾರ ಚಾರ್ಲ್ಸ್, ಪ್ರಿನ್ಸ್ ಆಫ್ ವೇಲ್ಸ್ ಮತ್ತು ಬ್ರಿಟನ್‌ನ ರಾಜಕುಮಾರಿ ಆ್ಯನ್ನೆ, ರಾಜಕುಮಾರಿ ರಾಯಲ್ ಅವರು ಸೆಪ್ಟೆಂಬರ್ 2, 2017 ರಂದು ಮಧ್ಯ ಸ್ಕಾಟ್ಲೆಂಡ್‌ನ ಬ್ರೇಮರ್‌ನಲ್ಲಿ ನಡೆಯುವ ವಾರ್ಷಿಕ ಗ್ಯಾದರಿಂಗ್ನಲ್ಲಿ ಕಾಣಿಸಿಕೊಂಡಿದ್ದು ಹೀಗೆ. ಬ್ರೇಮರ್ ಗ್ಯಾದರಿಂಗ್ ಸಾಂಪ್ರದಾಯಿಕ ಇವೆಂಟ್ ಆಗಿದ್ದು, 1848 ರಲ್ಲಿ ರಾಣಿ ವಿಕ್ಟೋರಿಯಾ ನಂತರ ಈ ಕ್ರೀಡಾಕೂಟದಲ್ಲಿ ರಾಯಲ್ ಕುಟುಂಬಗಳು ಭಾಗವಹಿಸುತ್ತಿವೆ.
ರಾಜ ಮನೆತನದ ಸಾಂಪ್ರದಾಯಿಕ ಕ್ರಿಸ್‌ಮಸ್ ಆಚರಣೆ ಡಿಸೆಂಬರ್ 25, 2017 ರಂದು ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್‌ನ ಸೇಂಟ್ ಮೇರಿ ಮ್ಯಾಗ್ಡಲೀನ್ ಚರ್ಚ್‌ನಲ್ಲಿ ಡಚೆಸ್ ಆಫ್ ಕೇಂಬ್ರಿಡ್ಜ್ ನ ಬ್ರಿಟನ್‌ನ ಕ್ಯಾಥರೀನ್, ಬ್ರಿಟನ್‌ನ ರಾಜಕುಮಾರ ಫಿಲಿಪ್, ಡ್ಯೂಕ್ ಆಫ್ ಎಡಿನ್‌ಬರ್ಗ್ ಮತ್ತು ಅಮೆರಿಕದ ನಟಿ ಮತ್ತು ಬ್ರಿಟನ್‌ನ ರಾಜಕುಮಾರ ಹ್ಯಾರಿ ಪತ್ನಿ ಮೇಘನ್ ಮರ್ಕೆಲ್ ರಾಯಲ್ ಫ್ಯಾಮಿಲಿಯ ಸಾಂಪ್ರದಾಯಿಕ ಕ್ರಿಸ್‌ಮಸ್ ದಿನ ಕಾಣಿಸಿಕೊಂಡಿದ್ದು ಹೀಗೆ.
ಪ್ರಿನ್ಸ್ ಫಿಲಿಪ್ ಕೊನೆಯುಸಿರೆಳೆದ ಆ ದಿನ " ಶ್ರೀಯುತ ರಾಣಿ ಎಲಿಜಬೆತ್ ಅವರು ತಮ್ಮ ಪತಿ, ಶ್ರೀಯುತ ಪ್ರಿನ್ಸ್ ಫಿಲಿಪ್ , ಡ್ಯೂಕ್ ಆಫ್ ಎಡಿನ್ ಬರ್ಗ್ ಇಹಲೋಕ ತ್ಯಜಿಸಿದ ವಿಷಯವನ್ನು ದುಃಖ ತಪ್ತರಾಗಿ ಘೋಷಣೆ ಮಾಡಿದರು. ಡ್ಯೂಕ್ ಆಫ್ ಎಡಿನ್‌ಬರ್ಗ್ ಪ್ರಿನ್ಸ್ ಫಿಲಿಪ್ ಇಂದು ಬೆಳಗ್ಗೆ ವಿಂಡ್ಸರ್ ಕ್ಯಾಸಲ್‌ನಲ್ಲಿ ಕೊನೆಯುಸಿರೆಳೆದರು'' ಎಂದು ರಾಯಲ್ ಫ್ಯಾಮಿಲಿಯು ಟ್ವಿಟ್ಟರ್ನಲ್ಲಿ ತಿಳಿಸಿದೆ.