ನಿವೃತ್ತಿಹೊಂದಿದ ರಾಷ್ಟ್ರಪತಿಗಳ ಅಂಗರಕ್ಷಕ ಕುದುರೆ Virat; ಪ್ರೀತಿಯಿಂದ ಬೀಳ್ಕೊಟ್ಟ ಪ್ರಧಾನಿ
ದೇಶದಲ್ಲಿ ಬುಧವಾರ 73ನೇ ಗಣರಾಜ್ಯೋತ್ಸವವನ್ನು (Republic Day) ಸಂಭ್ರಮದಿಂದ ಆಚರಿಸಲಾಗಿದೆ ಕರೋನವೈರಸ್ ಸಾಂಕ್ರಾಮಿಕದ ಮಧ್ಯೆ, ರಾಜಪಥ್ನಲ್ಲಿ (RajPath) ಬೆಳಿಗ್ಗೆ ಮೆರವಣಿಗೆಯನ್ನು ಆಯೋಜಿಸಲಾಗಿತು. ಈ ಸಮಯದಲ್ಲಿ, ಭಾರತದ ಮಿಲಿಟರಿ ಶಕ್ತಿಯಿಂದ ಸಾಂಸ್ಕೃತಿಕ, ಸಾಂಪ್ರದಾಯಿಕ ಪರಂಪರೆ ಅನಾವರಣಗೊಂಡಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸೇನೆ ಮತ್ತು ಸಶಸ್ತ್ರ ಪಡೆಗಳ ಗೌರವ ವಂದನೆ ಸ್ವೀಕರಿಸಿದರು. ಇನ್ನು ಇದೇ ದಿನ ರಾಷ್ಟ್ರಪತಿಗಳ ಅಂಗರಕ್ಷಕರ ಭಾಗವಾಗಿದ್ದ ವಿರಾಟ್ (Virat) ಎಂಬ ಕುದುರೆ ಕೂಡ ನಿವೃತ್ತಿಯಾಗಿದೆ . ( (Pic- President of India)
13 ಬಾರಿ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಿದ ರಾಷ್ಟ್ರಪತಿ ಅಂಗರಕ್ಷಕ ಕುದುರೆ ಇಂದು ನಿವೃತ್ತಿ ಹೊಂದಿದೆ. ಗಣರಾಜ್ಯೋತ್ಸವ ಪರೇಡ್ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕುದುರೆಯನ್ನು ಸನ್ಮಾನಿಸಿ ಬಿಳ್ಕೊಟ್ಟರು
2/ 5
ವಿರಾಟ್ ಕುದರೆಯ ಅರ್ಹತೆ ಮತ್ತು ಸೇವೆಗಾಗಿ ಹಲವು ಬಾರಿ ಗೌರವಿಸಲಾಗಿದೆ. ವಿರಾಟ್ ರಾಷ್ಟ್ರಪತಿಗಳ ಅಂಗರಕ್ಷಕನ ಪ್ರಮುಖ ಸದಸ್ಯ ಆಗಿ ಕಾರ್ಯ ನಿರ್ವಹಿಸಿದೆ. ವಿರಾಟ್ ಅನ್ನು ಅಧ್ಯಕ್ಷರ ಅಂಗರಕ್ಷಕನ ಚಾರ್ಜರ್ ಎಂದೂ ಕರೆಯುತ್ತಾರೆ.
3/ 5
ವಿರಾಟ್ ತುಂಬಾ ಎತ್ತರದ ಕುದುರೆ ಆಗಿದ್ದು, ಈ ವರ್ಷ ಸೇನಾ ದಿನದ ಸಂದರ್ಭದಲ್ಲಿ ವಿರಾಟ್ಗೆ ಸೇನಾ ಮುಖ್ಯಸ್ಥರ ಕಮೆಂಡೇಶನ್ ಕಾರ್ಡ್ ಅನ್ನು ಸಹ ನೀಡಿ ಗೌರವಿಸಲಾಗಿದೆ.
4/ 5
ವಿರಾಟ್ ಅವರು 2003 ರಲ್ಲಿ ಹೇಂಪುರದ ರಿಮೌಂಟ್ ತರಬೇತಿ ಶಾಲೆಯಿಂದ ಅಧ್ಯಕ್ಷರ ಅಂಗರಕ್ಷಕರಾಗಿ ನೇಮಕವಾಯಿತು. ಇದು ಹೊನೊವೆರಿಯನ್ ತಳಿಯ ಕುದುರೆ. ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್ ಮತ್ತು ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ವಿರಾಟ್ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ
5/ 5
ವಿರಾಟ್ ಎಲ್ಲಾ ಕುದುರೆಗಳಿಗಿಂತ ಭಿನ್ನ. ವಿರಾಟ್ ಮೇಲೆ ಸವಾರಿ ಮಾಡುವ ಮೂಲಕ ಪರೇಡ್ನಲ್ಲಿ ನಾಲ್ಕು ಬಾರಿ ರಾಷ್ಟ್ರಪತಿಗಳಿಗೆ ನಮನ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಇದು ಹೆಮ್ಮೆಯ ವಿಷಯ ಎಂದಿದ್ದಾರೆ.