Maharashtra: ಗರ್ಭಿಣಿ ಮಹಿಳಾ ಅರಣ್ಯ ಸಿಬ್ಬಂದಿ ಮೇಲೆ ಅಮಾನುಷ ಹಲ್ಲೆ

ಗರ್ಭಿಣಿ ಎಂಬುದನ್ನು ನೋಡದೇ ಮಹಿಳಾ ಅರಣ್ಯ ಸಿಬ್ಬಂದಿ (woman forest guard) ಮತ್ತು ಆಕೆಯ ಗಂಡನನ್ನು ಹಳ್ಳಿಯ ಮಾಜಿ ಸರಪಂಚ್​ ಮತ್ತು ಆತನ ಹೆಂಡತಿ ಅಮಾನುಷವಾಗಿ ಥಳಿಸಿರುವ ಘಟನೆ ಮಹಾರಾಷ್ಟ್ರ ಸತಾರಾ (Satara) ಜಿಲ್ಲೆಯಲ್ಲಿ ನಡೆದಿದೆ. ಮಹಿಳಾ ಸಿಬ್ಬಂದಿ ಮೂರು ತಿಂಗಳ ಗರ್ಭಿಣಿ ಆಗಿದ್ದು, ಆಕೆಯನ್ನು ತಳ್ಳಿ ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ವಿಡಿಯೋಗಳು ವೈರಲ್​ ಆಗಿದೆ. ಇನ್ನು ವಿಡಿಯೋ ವೈರಲ್​ ಆಗುತ್ತಿದ್ದಂತೆ ಆರೋಪಿ ದಂಪತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

First published: