Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

ಬೇಸಿಗೆಯಲ್ಲಿ ಬಿಸಿಗಾಳಿ ಬೀಸುವುದು ಸಹಜ, ಆದರೆ ಮಳೆ ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮಳೆಗಾಗಿ ಜನರು ಪ್ರಾಣಿ ಪಕ್ಷಿಗಳ ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾರೆ.

First published:

  • 17

    Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

    ಪಶ್ಚಿಮ ಬಂಗಾಳವು ಬಿಸಿಲಿನ ಝಳದಿಂದ ಉರಿಯುತ್ತಿದೆ. ಹಲವು ತಿಂಗಳಿನಿಂದ ಮಳೆಯಾಗದ ಕಾರಣ, ಅಲ್ಲಿನ ಜನರು ಬಿಸಿಲಿನಿಂದ ಕಂಗೆಟ್ಟಿದ್ದಾರೆ. ಹವಾಮಾನ ಇಲಾಖೆ ಕೂಡ ಮುಂದಿನ ಕೆಲವು ದಿನಗಳವರೆಗೆ ದಕ್ಷಿಣ ಬಂಗಾಳದ ಹಲವು ಜಿಲ್ಲೆಗಳಲ್ಲಿ ಬಿಸಿಗಾಳಿ ಎಚ್ಚರಿಕೆ ಸಹ ನೀಡಲಾಗಿದೆ.

    MORE
    GALLERIES

  • 27

    Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

    ಬಂಗಾಳದ ಹಲವು ಕಡೆ ಮಳೆಯಿಲ್ಲದೆ ಭೂಮಿ ಬಿರುಕು ಬಿಟ್ಟಿದೆ. ಹೀಗಾಗಿ ಅಲ್ಲಿನ ಜನರು ಕಪ್ಪೆಗಳಿಗೆ ಮದುವೆ ಮಾಡಿಸಿ ವರುಣದೇವನನ್ನು ಮೆಚ್ಚಿಸುವ ಪ್ರಯತ್ನ ನಡೆದಿದೆ. ಹೂಗ್ಲಿಯ ಆರಂಬಾಗ್​ನಲ್ಲಿ ಈ ವಿವಾಹ ಮಾಡಲಾಗಿದೆ. ಮಂತ್ರಗಳ ಪಠಣದೊಂದಿಗೆ ಹಿಂದೂ ಸಂಪ್ರದಾಯಗಳನ್ನು ಅನುಸರಿಸಿ ವಿವಾಹಗಳನ್ನು ಸಡಗರದಿಂದ ಆಚರಿಸಲಾಗುತ್ತದೆ.

    MORE
    GALLERIES

  • 37

    Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

    ಬೇಸಿಗೆಯಲ್ಲಿ ಬಿಸಿಗಾಳಿ ಬೀಸುವುದು ಸಹಜ, ಆದರೆ ಮಳೆ ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮಳೆ ಬಂದರೆ ಬೆಟ್ಟ ಗುಡ್ಡಗಳು ಹಸಿರಿನಿಂದ ಕಂಗೊಳಿಸುತ್ತವೆ, ಬೇಸಿಗೆಯಲ್ಲಿ ದಣಿದ ಪ್ರಾಣಿಗಳಿಗೆ ಉಸಿರು ಬಂದಂತಾಗುತ್ತದೆ. ಆದರೆ ಇಡೀ ಬೈಶಾಖ(ಏಪ್ರಿಲ್-ಮೇ) ತಿಂಗಳಿನಲ್ಲಿಯೂ ಮಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹಾಗಾಗಿ ಮಳೆಗಾಗಿ ಜನರು ಪ್ರಾಣಿ ಪಕ್ಷಿಗಳ ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಾರೆ.

    MORE
    GALLERIES

  • 47

    Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

    ನಾಡಿಯಾದ ಶಾಂತಿಪುರ ಹರಿಪುರ ಪಂಚಾಯತ್‌ನ ಸರ್ದಾರ್ ಪಾರಾ ಪ್ರದೇಶದಲ್ಲಿ ಕಪ್ಪೆಗಳಿಗೆ ಮದುವೆ ಮಾಡಿಸುವ ಪುರಾತನ ಪದ್ಧತಿ ಚಾಲ್ತಿಯಲ್ಲಿದೆ. ಮಳೆಗಾಗಿ ಪ್ರಾರ್ಥಿಸಿ ಈ ರೀತಿಯ ವಿಶೇಷ ವಿವಾಹಗಳನ್ನು ನಡೆಸಲಾಗುತ್ತದೆ.

    MORE
    GALLERIES

  • 57

    Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

    ಗ್ರಾಮದಲ್ಲಿ ಬಹಳ ಹಿಂದೆಯೇ ಇಂತಹ ಸಂಪ್ರದಾಯಗಳು ನಡೆದುಕೊಂಡು ಬರುತ್ತಿವೆ. ಹಿಂದೂ ಸಂಪ್ರದಾಯದಂತೆ ಮಂತ್ರಗಳನ್ನು ಪಠಿಸುವ ಮೂಲಕ ಕಪ್ಪೆಗಳಿಗೆ ವಿವಾಹವನ್ನು ಸಡಗರದಿಂದ ಆಚರಿಸಲಾಗುತ್ತದೆ. ಹೀಗೆ ಮಾಡಿದಾಗ ಮುಂದಿನ 24 ಗಂಟೆಗಳಲ್ಲಿ ಖಂಡಿತ ಮಳೆಯಾಗಲಿದೆ ಎಂದು ಬುಡಕಟ್ಟು ಪ್ರದೇಶದ ನಿವಾಸಿ ಕಮಲ್ ಫಕೀರ್ ಹೇಳಿದ್ದಾರೆ.

    MORE
    GALLERIES

  • 67

    Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

    ಮಳೆಯ ದೇವರು ವರುಣದೇವನನ್ನು ಒಲಿಸಿಕೊಳ್ಳಲು ಈ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯ ಕಾಳಿ ದೇವಸ್ಥಾನದಲ್ಲಿ ನಡೆಯುವ ಮದುವೆ ಸಮಾರಂಭದಲ್ಲಿ ಹೆಣ್ಣು ಕಪ್ಪೆ ಮತ್ತು ಗಂಡು ಕಪ್ಪೆ ವಧು-ವರರಂತೆ ಸಿದ್ಧಪಡಿಸಿ ಮೆರವಣಿಗೆಯ ಜೊತೆಗೆ ಕರೆತರಲಾಗುತ್ತದೆ. ನಂತರ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

    MORE
    GALLERIES

  • 77

    Frog Wedding: ಮಳೆಗಾಗಿ ನಡೆಯಿತು ಕಪ್ಪೆಗಳ ಮದುವೆ! ಮಂಡೂಕ ದಂಪತಿಗೆ ಆಶೀರ್ವದಿಸುತ್ತಾನಾ ವರುಣ ದೇವ?

    ಇನ್ನು ತಜ್ಞರ ಪ್ರಕಾರ, ಕಪ್ಪೆಯನ್ನು ಫಲವತ್ತತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪಂಚಕ್ಕೆ ಕಾಲಿಡುವ ದಿನದಿಂದಲೂ ಕಪ್ಪೆಗಳ ನೀರಿನಲ್ಲಿ ಜನ್ಮ ತಾಳಿ, ನೀರಿನಲ್ಲೇ ಕೊನೆಯಾಗುತ್ತವೆ. ಅಲ್ಲದೆ ಕಪ್ಪೆ ನೀರಿನಲ್ಲಿ ಮೊಟ್ಟೆಗಳನ್ನು ಇಡುವ ಏಕೈಕ ಪ್ರಾಣಿಯಾಗಿದೆ. ದೇಶ ವಿದೇಶಗಳ ವಿವಿಧ ಸ್ಥಳಗಳಲ್ಲಿ ಕಪ್ಪೆಗಳ ಪ್ರತಿಮೆಗಳೂ ಇವೆ. ಹಲವೆಡೆ ಕಪ್ಪೆಗಳನ್ನು ಪೂಜಿಸುತ್ತಾರೆ ಎಂಬ ಮಾತು ಕೂಡ ಇದೆ. ವರುಣದೇವನನ್ನು ಒಲಿಸಿಕೊಳ್ಳಲು ಈ ಉಪಕ್ರಮದಲ್ಲಿ ಸ್ಥಳೀಯ ನಾಯಕ ತಪಸ್ ಬಿಸ್ವಾಸ್​ ಆರಂಭಾಗ್ ಮಾಜಿ ಮೇಯರ್ ಸ್ವಪನ್ ನಂದಿ, ಇಬ್ಬರು ಕೌನ್ಸಿಲರ್‌ಗಳಾದ ವಿಶ್ವನಾಥ್ ಚಟರ್ಜಿ ಮತ್ತು ಪ್ರದೀಪ್ ಸಿನ್ಹರಾಯ್, ಯುವ ನಾಯಕಿ ಪ್ರಿಯಾಂಕಾ ದಾಸ್ ಉಪಸ್ಥಿತರಿದ್ದರು.

    MORE
    GALLERIES