PHOTOS: ಪ್ರಯಾಗ್ರಾಜ್ನಲ್ಲಿ ಇಂದಿನಿಂದ ಆರಂಭವಾದ ಕುಂಭಮೇಳದ ಝಲಕ್
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ಇಂದು ಕುಂಭಮೇಳ ಆರಂಭಗೊಂಡಿದೆ. ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿದ್ದಾರೆ. ಗಂಗಾ,ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಗಂಗಾ ಆರತಿ ನೆರವೇರಿಸಿದರು. ಕುಂಭಮೇಳಕ್ಕಾಗಿ ಸೇನೆ ತಾತ್ಕಾಲಿಕ ಸೇತುವೆ ಹಾಗೂ ಗುಡಿಸಲುಗಳನ್ನು ನಿರ್ಮಿಸಿದೆ. ಅವುಗಳ ಫೋಟೋ ಝಲಕ್ ಇಲ್ಲಿದೆ.