PM Kisan: ರೈತರಿಗಾಗಿ ಪ್ರತಿ ತಿಂಗಳು 3000 ರೂ ಪಿಂಚಣಿ ಸೇವೆ: ಮಾಡಬೇಕಿರುವುದು ಇಷ್ಟೇ !
Pradhan Mantri Kisan Maandhan Yojana | ರೈತರ ಬದುಕು ಇನ್ನಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ರೈತಾಪಿ ವರ್ಗ ಕೂಡ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆ ಮೂಲಕ 60 ವರ್ಷ ತುಂಬಿದ ರೈತರು ಕೂಡ ನೌಕರರಂತೆ ಪಿಂಚಣಿ ಪಡೆಯಬಹುದಾಗಿದೆ (ಪ್ರಾತಿನಿಧಿಕ ಚಿತ್ರಗಳು)
1. ರೈತರಿಗೆ ಶುಭ ಸುದ್ದಿ: ಕೇಂದ್ರ ಸರ್ಕಾರ ರೈತರಿಗೆಂದು ವಿಶೇಷವಾಗಿ ಆರಂಭಿಸಿರುವ ಯೋಜನೆಯಿದಾಗಿದೆ. ಕಿಸಾನ್ ಮಾನ್ ಧನ್ ಯೋಜನೆ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತರಿಗೆ ಪಿಂಚಣಿ ಸೌಕರ್ಯದ ಈ ಯೋಜನೆ ಪರಿಚಯಿಸಿದ್ದಾರೆ
2/ 8
2. ಕಳೆದ ವರ್ಷ ಈ ಯೋಜನೆಯನ್ನು ಅವರು ಉದ್ಘಾಟಿಸಿದರು. ಈ ಪಿಂಚಣಿ ಸೇವೆಯನ್ನು ಭಾರತೀಯ ವಿಮೆ ನಿಗಮ (ಎಲ್ಐಸಿ) ನಿರ್ವಹಿಸಲಿದೆ. ಈ ಸೇವೆಗೆ ಅರ್ಜಿ ಸಲ್ಲಿಸುವ ಮೂಲಕ ರೈತರು ಪಿಂಚಣಿ ಪಡೆಯಬಹುದು.
3/ 8
3. ಈಗಾಗಲೇ ಈ ಯೋಜನೆಯಡಿ 21 ಲಕ್ಷ ರೈತರು ಹೆಸರು ನೊಂದಾಯಿಸಿಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ ರೈತರು ತಿಂಗಳಿಗೆ 3000 ದಂತೆ ವರ್ಷಕ್ಕೆ 36 ಸಾವಿರ ಪಿಂಚಣಿ ಪಡೆಯಬಹುದಾಗಿದೆ.
4/ 8
4.ಈ ಯೋಜನೆಯ ಲಾಭಾವನ್ನು ಎಲ್ಲಾ ರೈತರು ಪಡೆದುಕೊಳ್ಳಬಹುದು. ಎರಡು ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತರು ಕೂಡ ಈ ಯೋಜನೆ ಲಾಭಾ ಪಡೆಯಬಹುದು. ಈ ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಗೆ 55 ರೂ ಯಿಂದ 200 ರೂವರೆಗೆ ಪ್ರೀಮಿಯಂ ಹಣ ಕಟ್ಟಬೇಕು
5/ 8
5. 18 ವರ್ಷದಿಂದ 40 ವರ್ಷದೊಳಗಿನ ರೈತರು ಈ ಯೋಜನೆಗೆ ದಾಖಲಾಗಬಹುದು. ಅವರ ವಯೋಮಾನಕ್ಕೆ ಅನುಗುಣವಾಗಿ ಪ್ರಿಮೀಯಂ ಅನ್ನು ಪ್ರತಿ ತಿಂಗಳು ಕಟ್ಟಬೇಕು. ರೈತರು ಕಟ್ಟಿದ ಹಣದಷ್ಟೇ ಪ್ರೀಮಿಯಂ ಅನ್ನು ಸರ್ಕಾರ ಕೂಡ ಕಟ್ಟುತ್ತದೆ
6/ 8
6.ರೈತರಿಗೆ 60 ವರ್ಷವಾದ ಬಳಿಕ ರೈತರು ಪ್ರತಿ ತಿಂಗಳು ಪಿಂಚಣಿ ಪಡೆಯ ಬಹುದು. ಒಂದು ವೇಳೆ ರೈತ ಸಾವನ್ನಪ್ಪಿದ್ದರೆ, ಆತನ ಹೆಂಡತಿ ಶೇ 50 ರಷ್ಟು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ
7/ 8
7. ಈ ಯೋಜನೆಗೆ ಸೇರಬಯಸುವ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಆಧಾರ್ ನಂಬರ್ ಕಡ್ಡಾಯವಾಗಿದೆ. ಈ ಯೋಜನೆಗೆ ಸೇರಲು ಯಾವುದೇ ಶುಲ್ಕವಿಲ್ಲ. ಇದಕ್ಕೆ ರೈತರು ಕಟ್ಟುವ ಮೊತ್ತದಷ್ಟೇ ಹಣವನ್ನು ಪ್ರಧಾನಿಗಳು ಕಟ್ಟುತ್ತಾರೆ
8/ 8
8. ರೈತರು ಈಗಾಗಲೇ ರಾಷ್ಟ್ರೀಯ ಪಿಂಚಣಿ ಯೋಜನೆ, ಉದ್ಯೋಗ ರಾಜ್ಯ ವಿಮಾ ನಿಗಮ ಯೋಜನೆ, ಇಪಿಎಫ್ನಂತರ ಯೋಜನೆಗೆ ದಾಖಲಾದ ರೈತರು ಈ ಯೋಜನೆ ಲಾಭಾ ಪಡೆಯಲು ಸಾಧ್ಯವಿಲ್ಲ)