ಇದರ ಬೆನ್ನಲ್ಲೇ ಆಘಾತಕ್ಕೊಳಗಾದ ವೈದ್ಯೆ ಕೋಯಿಕ್ಕೋಡ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ನಿಶಾಂತ್ ಬಾಬು ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 67 ಎ (ಲೈಂಗಿಕ ದೌರ್ಜನ್ಯದ ಕೃತ್ಯದ ಅಂಶಗಳನ್ನು ವಿದ್ಯುನ್ಮಾನ ಮಾದರಿಯಲ್ಲಿ ಪ್ರಕಟಿಸಿದ ಅಥವಾ ವಿತರಿಸಿದ ಅಪರಾಧಕ್ಕೆ ಶಿಕ್ಷೆ) ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.