Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂಡೀಪುರ ಸಫಾರಿ ಮುಗಿಸಿಕೊಂಡು ತಮಿಳುನಾಡಿನ ಮಧುಮಲೈನಲ್ಲಿ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದು, ಆಸ್ಕರ್​ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯ ಚಿತ್ರದಲ್ಲಿ ನಟಿಸಿದ್ದ ಬೊಮ್ಮನ್​- ಬೆಳ್ಳಿ ದಂಪತಿಗೆ ಸನ್ಮಾನಿಸಿದರು.

First published:

  • 17

    Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

    ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂಡೀಪುರ ಸಫಾರಿ ಮುಗಿಸಿಕೊಂಡು ತಮಿಳುನಾಡಿನ ಮಧುಮಲೈನಲ್ಲಿ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದರು.

    MORE
    GALLERIES

  • 27

    Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

    ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ಆಸ್ಕರ್ ಪ್ರಶಸ್ತಿ ಪಡೆದಿದ್ದ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದಲ್ಲಿರುವ ಮಾವುತ ದಂಪತಿಗಳಾದ ಬೊಮ್ಮನ್-ಬೆಳ್ಳಿ ಅವರನ್ನು ಭೇಟಿ ಮಾಡಿ ಆತ್ಮೀಯವಾಗಿ ಮಾತನಾಡಿದರು.

    MORE
    GALLERIES

  • 37

    Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

    ಬೊಮ್ಮನ್ ದಂಪತಿಯನ್ನು ಪ್ರಧಾನಿ ಭೇಟಿ ಮಾಡಿದ ಮೋದಿ ಅವರು, ಆಸ್ಕರ್ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 47

    Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

    95ನೇ ಅಕಾಡೆಮಿ ಅವಾರ್ಡ್‌ ಕಾರ್ಯಕ್ರಮದಲ್ಲಿ ದಿ ಎಲಿಫೆಂಟ್​ ವಿಸ್ಪರರ್ಸ್ ಸಾಕ್ಷ್ಯಚಿತ್ರಕ್ಕೆ ಆಸ್ಕರ್‌ ಮುಡಿಗೇರಿಸಿಕೊಂಡಿತ್ತು. ಈ ಚಿತ್ರವನ್ನು ಕಾರ್ತಿಕಿ ಗೊನ್ಸಾಲ್ವೇಸ್‌ ನಿರ್ದೇಶನ ಮಾಡಿದ್ದರು.

    MORE
    GALLERIES

  • 57

    Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

    ಬೆಳ್ಳಿ -ಬೊಮ್ಮನ್ ದಂಪತಿಯನ್ನು ಜೊತೆ ಆನೆ‌ ಮರಿಗಳನ್ನು‌ ಸಾಕುವ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ತಾವೂ ದೆಹಲಿಗೆ ಬರುವಂತೆ ಹೇಳಿದ್ದರೂ ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.

    MORE
    GALLERIES

  • 67

    Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

    ಇನ್ನು ಆನೆ ಶಿಬಿರಕ್ಕೂ ಭೇಟಿ ನೀಡಿದ ಮೋದಿ ಅವರು ಗಜಪಡೆಗೆ ಕಬ್ಬು ತಿನ್ನಿಸಿ ಗಮನ ಸೆಳೆದರು. ರಾಣಿ ಎಂಬ ಹೆಸರಿನ ಆನೆಗೆ ಕಬ್ಬು ತಿನ್ನಿಸಿ ಸೊಂಡಿಲು ಸವರಿದರು. ಆನೆ ಪಾಲಕರಾದ ಕಿರುಮಾರನ್, ಕುಳ್ಳನ್ ಮತ್ತು ದೇವನ್ ಎಂಬುವವರ ಜೊತೆ ಆನೆಗಳನ್ನು ಪಾಲನೆ ಮಾಡುವ ಬಗ್ಗೆ ಮಾಹಿತಿ ಪಡೆದರು.

    MORE
    GALLERIES

  • 77

    Narendra Modi: ಬೊಮ್ಮನ್-ಬೆಳ್ಳಿ ದಂಪತಿಗೆ ಮೋದಿ ಸನ್ಮಾನ, ಗಜಪಡೆಗೆ ಕಬ್ಬು ತಿನ್ನಿಸಿದ ಪ್ರಧಾನಿ

    ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆ ಪ್ರಧಾನಿ ಮೋದಿಯವರು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಒಂದೂವರೆ ಗಂಟೆ ಸುಮಾರು 20 ಕಿ.ಮೀ ಕಾಡಿನಲ್ಲಿ ಸಂಚಾರ ನಡೆಸಿದರೂ ಪ್ರಧಾನಿ ಮೋದಿಯವರಿಗೆ ಒಂದು ಹುಲಿಯೂ ಕಣ್ಣಿಗೆ ಬಿದ್ದಿಲ್ಲ ಎಂದು ತಿಳಿದುಬಂದಿದೆ.

    MORE
    GALLERIES