PHOTOS: ಮಹಾಬಲಿಪುರಂನಲ್ಲಿ ಮೋದಿ- ಕ್ಸಿ ಜಿನ್​ಪಿಂಗ್ ಸಭೆ; ಮೊದಲ ಬಾರಿಗೆ ಪಂಚೆಯಲ್ಲಿ ಮಿಂಚಿದ ಪ್ರಧಾನಿ

ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ- ಚೀನಾ ಅಧ್ಯಕ್ಷ ಕ್ಸಿ- ಜಿನ್​ಪಿಂಗ್ ಇಂದು ಅನೌಪಚಾರಿಕ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಎರಡೂ ದೇಶಗಳ ನಾಯಕರು ಮಹಾಬಲಿಪುರಂಗೆ ಆಗಮಿಸಿದ್ದಾರೆ. ಪ್ರತಿ ರಾಜ್ಯಗಳಿಗೆ ತೆರಳಿದಾಗಲೂ ಅಲ್ಲಿನ ಸಾಂಪ್ರದಾಯಿಕ ಉಡುಗೆ, ಪೇಟಗಳನ್ನು ತೊಟ್ಟು ಮಿಂಚುವ ಪ್ರಧಾನಿ ಮೋದಿ ಈ ಬಾರಿ ದಕ್ಷಿಣ ಭಾರತೀಯರ ಸಾಂಪ್ರದಾಯಿಕ ಉಡುಗೆಯಾದ ಪಂಚೆ-ಶರ್ಟ್​ ಧರಿಸಿ ಶಲ್ಯ ಹಾಕಿಕೊಂಡು ಕ್ಸಿ- ಜಿನ್​ಪಿಂಗ್ ಅವರನ್ನು ಸ್ವಾಗತಿಸಿರುವುದು ವಿಶೇಷ. ಸದಾ ಜುಬ್ಬ ಅಥವಾ ಕುರ್ತಾದಲ್ಲಿ ಕಂಗೊಳಿಸುತ್ತಿದ್ದ ಮೋದಿ ಮೊದಲ ಬಾರಿಗೆ ಪಂಚೆಯುಟ್ಟ ಫೋಟೋಗಳು ಟ್ವಿಟ್ಟರ್​ನಲ್ಲಿ ಟ್ರೆಂಡ್ ಸೃಷ್ಟಿಸಿವೆ.

First published: