PM Modi: ತಮಿಳುನಾಡಿನಲ್ಲಿಇಂದು 11 ಮೆಡಿಕಲ್ ಕಾಲೇಜುಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ತಮಿಳುನಾಡಿನಲ್ಲಿ(Tamil Nadu) 11 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ(CICT) ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ತಮಿಳುನಾಡಿನಲ್ಲಿ(Tamil Nadu) 11 ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳಿನ(CICT) ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಲಿದ್ದಾರೆ.
2/ 12
ತಮಿಳುನಾಡಿನಾದ್ಯಂತ ಇಂದು 11 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಲಾಗುವುದು ಮತ್ತು ಕೇಂದ್ರೀಯ ಸಂಸ್ಥೆಯ ಹೊಸ ಕ್ಯಾಂಪಸ್ನ್ನು ರಾಜಧಾನಿ ಚೆನ್ನೈನಲ್ಲಿ ತೆರೆಯಲಾಗುವುದು.
3/ 12
ಉದ್ಘಾಟನಾ ಕಾರ್ಯಕ್ರಮವು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ (PMO) ತಿಳಿಸಿದೆ.
4/ 12
ಮಂಗಳವಾರ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ‘‘ಹೊಸ ವೈದ್ಯಕೀಯ ಕಾಲೇಜುಗಳು ಆರೋಗ್ಯ ಮೂಲ ಸೌಕರ್ಯವನ್ನು ಹೆಚ್ಚಿಸುತ್ತವೆ ಮತ್ತು ತಮಿಳುನಾಡಿನ ಜನರಿಗೆ ಕೈಗೆಟುಕುವ ಆರೋಗ್ಯ ಸೌಲಭ್ಯಗಳನ್ನು ನೀಡುತ್ತವೆ" ಎಂದು ಹೇಳಿದ್ದಾರೆ.
5/ 12
ಅಂದಾಜು ₹ 4,000 ಕೋಟಿ ವೆಚ್ಚದಲ್ಲಿ ಕಾಲೇಜುಗಳನ್ನು ನಿರ್ಮಿಸಲಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ ₹ 2,415 ಕೋಟಿ ನೀಡಿದ್ದು, ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ನೀಡಿದೆ.
6/ 12
ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿರುವ 11 ಜಿಲ್ಲೆಗಳೆಂದರೆ ನೀಲಗಿರಿ, ತಿರುವಳ್ಳೂರು, ನಾಗಪಟ್ಟಣಂ, ನಾಮಕ್ಕಲ್, ದಿಂಡಿಗಲ್, ಕಲ್ಲಕುರಿಚಿ, ಅರಿಯಲೂರ್, ರಾಮನಾಥಪುರಂ, ಕೃಷ್ಣಗಿರಿ, ತಿರುಪ್ಪೂರ್ ಮತ್ತು ವಿರುದುನಗರ. 11 ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 1,450 ಸೀಟುಗಳ ಸಾಮರ್ಥ್ಯವಿರುತ್ತದೆ.
7/ 12
ಈ ವೈದ್ಯಕೀಯ ಕಾಲೇಜುಗಳನ್ನು ಕೇಂದ್ರ ಸರ್ಕಾರದ ಜಿಲ್ಲೆ/ರೆಫರೆಲ್ ಆಸ್ಪತ್ರೆ ಸ್ಕೀಮ್ನಲ್ಲಿ ನಿರ್ಮಿಸಲಾಗಿದೆ. ಇದರ ಅಡಿಯಲ್ಲಿ, ಸರ್ಕಾರಿ ಅಥವಾ ಖಾಸಗಿ ವೈದ್ಯಕೀಯ ಕಾಲೇಜು ಇಲ್ಲದಿರುವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
8/ 12
ಏತನ್ಮಧ್ಯೆ, ಸಿಐಸಿಟಿಯ ಹೊಸ ಕ್ಯಾಂಪಸ್ಗೆ ಕೇಂದ್ರ ಸರ್ಕಾರವು ಸಂಪೂರ್ಣ ಅನುದಾನ ನೀಡಿದೆ. ಒಟ್ಟು ₹ 24 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
9/ 12
ಇದು ಮೂರು ಮಹಡಿಗಳನ್ನು ಹೊಂದಿದೆ ಮತ್ತು ವಿಶಾಲವಾದ ಗ್ರಂಥಾಲಯ, ಸೆಮಿನಾರ್ ಹಾಲ್ಗಳು, ಮಲ್ಟಿಮೀಡಿಯಾ ಹಾಲ್ ಮತ್ತು ಇ-ಲೈಬ್ರರಿಯನ್ನು ಹೊಂದಿದೆ.
10/ 12
ಹೊಸ ಕ್ಯಾಂಪಸ್ ಅನ್ನು ಭಾರತೀಯ ಪರಂಪರೆಯನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಮತ್ತು ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ನಿರ್ಮಿಸಲಾಗಿದೆ ಎಂದು ಪಿಎಂಒ ಹೇಳಿದೆ.
11/ 12
ಈ ಸಿಐಸಿಟಿಯು ತಮಿಳು ಭಾಷೆಯ ಪ್ರಾಚೀನತೆ, ಅನನ್ಯತೆಯ ಬಗ್ಗೆ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತದೆ.
12/ 12
ಇಲ್ಲಿ 45 ಸಾವಿರಕ್ಕೂ ಅಧಿಕ ಪ್ರಾಚೀನ ತಮಿಳು ಪುಸ್ತಕಗಳ ಸಂಗ್ರಹವಿದೆ. ಇದು ವಿದ್ಯಾರ್ಥಿಗಳಿಗೆ ಫೆಲೋಶಿಪ್ ಕೂಡ ನೀಡುತ್ತದೆ.