Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

ಜಾಗತಿಕ ನಾಯಕರ ಅನುಮೋದನೆ ರೇಟಿಂಗ್​ನಲ್ಲಿ ಶೇಕಡಾ 78ರಷ್ಟು ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಜನಪ್ರಿಯತೆಯಲ್ಲಿ ಮೋದಿ 22 ರಾಷ್ಟ್ರಗಳ ನಾಯಕರನ್ನು ಹಿಂದಿಕ್ಕಿದ್ದಾರೆ.

First published:

  • 17

    Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

    ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾಗತಿಕ ನಾಯಕರ ಪಟ್ಟಿಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

    MORE
    GALLERIES

  • 27

    Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

    ಜಾಗತಿಕ ನಾಯಕರ ಅನುಮೋದನೆ ರೇಟಿಂಗ್​ನಲ್ಲಿ ಶೇಕಡಾ 78ರಷ್ಟು ಅಂಕಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನ ಪಡೆದಿದ್ದಾರೆ. ಜನಪ್ರಿಯತೆಯಲ್ಲಿ ಮೋದಿ 22 ರಾಷ್ಟ್ರಗಳ ನಾಯಕರನ್ನು ಹಿಂದಿಕ್ಕಿದ್ದಾರೆ.

    MORE
    GALLERIES

  • 37

    Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

    ಅಮೆರಿಕದ ಖ್ಯಾತ ಮಾರ್ನಿಂಗ್ ಕನ್ಸಲ್ಟ್​ (The Morning Consult)ಜನವರಿ 26ರಿಂದ ಜನವರಿ 31ರವರೆಗೆ ಸಮೀಕ್ಷೆ ನಡೆಸಿದೆ. ಈ ಸಂಸ್ಥೆ ಪ್ರತಿದಿನ 20,000 ಜಾಗತಿಕ ಸಂದರ್ಶನ ನಡೆಸಿದೆ. ಸಂದರ್ಶನದಲ್ಲಿ ಪಡೆದ ಉತ್ತರಗಳ ಆಧಾರದ ಮೇಲೆ ಜಾಗತಿಕ ನಾಯಕನ ಕುರಿತು ರಚಿಸಲಾದ ಡೇಟಾವನ್ನು ಸಿದ್ಧಪಡಿಸಲಾಗಿದೆ.

    MORE
    GALLERIES

  • 47

    Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

    ಭಾರತದ ಪ್ರಧಾನಿ ನರೇಂದ್ರ ಮೋದಿ ನಂತರ ಮೆಕ್ಸಿಕೋದ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುಲ್ ಲೋಪೆಜ್​ ಲೋಪೆಜ್ ಒಬ್ರಡಾರ್ ಇದ್ದಾರೆ. ಅವರು ಶೇ. 68 ಅನುಮೋದನೆ ರೇಟಿಂಗ್ ಪಡೆದುಕೊಂಡು 2ನೇ ಸ್ಥಾನ ಪಡೆದುಕೊಂಡಿದ್ದಾರೆ.

    MORE
    GALLERIES

  • 57

    Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

    ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಶೇಕಡಾ 58 ಅನುಮೋದನೆ ರೇಟಿಂಗ್​ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಲ್ಬನೀಸ್ ಆಸ್ಟ್ರೇಲಿಯಾದ ಮೊದಲ ಇಟಾಲಿಯನ್ ಮೂಲದ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು ಆಸ್ಟ್ರೇಲಿಯಾದ ಪ್ರಧಾನಿಯಾಗಿರುವ ಮೊದಲ ನಾನ್​ ಆಂಗ್ಲೋ-ಸೆಲ್ಟಿಕ್ ಸರ್​ನೇಮ್ ಹೊಂದಿರುವ ನಾಯಕನಾಗಿದ್ದಾರೆ.

    MORE
    GALLERIES

  • 67

    Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

    ಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೆಲೋನಿ ಶೇಕಡಾ 52 ರೇಟಿಂಗ್ ಹೊಂದಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಅಚ್ಚರಿಯೆಂದರೆ, ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಆರನೇ ಸ್ಥಾನದಲ್ಲಿದ್ದಾರೆ. ಅವರು ಶೇ. 40 ಅನುಮೋದನೆ ರೇಟಿಂಕ್ ಅಂಕವನ್ನು ಪಡೆದುಕೊಂಡಿದ್ದಾರೆ.

    MORE
    GALLERIES

  • 77

    Narendra Modi: ಜಾಗತಿಕ ನಾಯಕರಲ್ಲಿ ಮೋದಿಯೇ ನಂಬರ್ 1; ಬೈಡನ್, ರಿಷಿ ಸುನಕ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನಮೋ

    ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ 40 ಪ್ರತಿಶತ ರೇಟಿಂಗ್‌ನೊಂದಿಗೆ 7ನೇ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ಪಿಎಂ ಪೆಡ್ರೊ ಸ್ಯಾಂಚೆಜ್ 8, ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ 9 ನೇ ಸ್ಥಾನದಲ್ಲಿದ್ದರೆ. ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ 30 ಅಂಕಗಳೊಂದಿಗೆ 10ನೇ ಸ್ಥಾನ ಪಡೆದುಕೊಂಡಿದ್ದಾರೆ.

    MORE
    GALLERIES