Awas Yojana: ಅಮೆರಿಕ ಸ್ಟೈಲ್ ಮನೆಗಳು ಚೆನ್ನೈನಲ್ಲಿ! ಮೋದಿ ಉದ್ಘಾಟನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರದ ಅಡಿಯಲ್ಲಿ 116 ಕೋಟಿ ರೂಪಾಯಿ ವೆಚ್ಚದಲ್ಲಿ 'ಲೈಟ್ ಹೌಸ್ ಪ್ರಾಜೆಕ್ಟ್-ಚೆನ್ನೈ' ಅಡಿಯಲ್ಲಿ ನಿರ್ಮಿಸಲಾದ 1,152 ಮನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಯುಎಸ್ ಮತ್ತು ಫಿನ್‌ಲ್ಯಾಂಡ್‌ನಲ್ಲಿ ಮಾಡಿದಂತೆ ಈ ಯೋಜನೆಯು ಪೂರ್ವನಿರ್ಮಿತ ಕಾಂಕ್ರೀಟ್ ನಿರ್ಮಾಣ ವ್ಯವಸ್ಥೆಯನ್ನು ಬಳಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿಯೇ ಮೊದಲ ಬಾರಿಗೆ ಹೊಸ ಯುಗದ ಜಾಗತಿಕ ತಂತ್ರಜ್ಞಾನಗಳು, ಸಾಮಗ್ರಿಗಳು ಮತ್ತು ಪ್ರಕ್ರಿಯೆಗಳನ್ನು ನಿರ್ಮಾಣ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಉತ್ತಮವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳಿದರು.

First published: