ಮೋದಿ ಟ್ವೀಟ್​ಗೆ ಜನ-ಸ್ಪಂದನೆ; ಹಳೆಯ ಫೋಟೋಗಳನ್ನು ಮೆಲುಕು ಹಾಕಿದ ಪ್ರಧಾನಿಯ ಗೆಳೆಯರು

ಇತ್ತೀಚೆಗೆ 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಖಾಸಗಿ ಟ್ವೀಟರ್ ಖಾತೆಯಲ್ಲಿ ಹಳೆಯ ಪೋಟೊಗಳನ್ನು ಪ್ರಕಟಿಸುವ ಮೂಲಕ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಜನರು ಸಹ ತಮ್ಮ ವೆಬ್​ಸೈಟಿನಲ್ಲಿ ಹಳೆಯ ನೆನಪುಗಳನ್ನು ಹಂಚಿಕೊಳ್ಳಲು ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಕುರಿತು ಟ್ವೀಟರ್​ನಲ್ಲಿ ಬರೆದುಕೊಂಡಿರುವ ಅವರು, “ಬದುಕಿನ ವಿಶೇಷ ನೆನಪುಗಳು ಅಮೂಲ್ಯ ಕ್ಷಣಗಳನ್ನು ಪುನರುಜ್ಜೀವನಗೊಳಿಸುತ್ತದೆ. ನಾನು ನನ್ನ ಹಲವಾರು ಹಳೆಯ ಪೋಟೊಗಳನ್ನು ಸ್ನೇಹಿತರಿಂದ ಸ್ವೀಕರಿಸಿದ್ದೇನೆ. ಇಂತಹ ಪೋಟೋಗಳನ್ನು ಸ್ನೇಹಿತರ ವಿನಂತಿಯ ಮೇರೆಗೆ ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಿಮಗೂ ಸಹ ಇಂತಹ ಹಳೆಯ ನೆನಪುಗಳಿದ್ದರೆ ಅದನ್ನು ನನ್ನೊಂದಿಗೆ ಹಂಚಿಕೊಳ್ಳಿ” ಎಂದು ತಿಳಿಸಿದ್ದಾರೆ. ಅಲ್ಲದೆ, ಜನಸಾಮಾನ್ಯರು ಸಹ ತಮ್ಮ ಪೋಟೊಗಳನ್ನು ಹಂಚಿಕೊಳ್ಳುವ ಲಿಂಕ್​ ಅನ್ನು ನೀಡಿದ್ದಾರೆ. ಅನೇಕರು ಮೋದಿ ಜೊತೆಗೆ ಹಳೆಯ ತೆಗೆಸಿಕೊಂಡ ಫೋಟೋಗಳನ್ನು ಶೇರ್​ ಮಾಡಿದ್ದಾರೆ.

First published: