ಕಾಶಿ ವಿಶ್ವನಾಥ ಧಾಮದ ಸಿಬ್ಬಂದಿಗಳಿಗೆ ಸೆಣಬಿನ ಪಾದರಕ್ಷೆ ಕಳುಹಿಸಿದ Modi ; ಯಾಕೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ (PM Modi) ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿನ ಕಾಶಿ ವಿಶ್ವನಾಥ ಧಾಮದಲ್ಲಿ (Kashi Vishwanath Dham) ಕೆಲಸ ಮಾಡುವವರಿಗೆ 100 ಜೊತೆಸೆಣಬಿನ ಪಾದರಕ್ಷೆಗಳನ್ನು (Jute slippers) ಕಳುಹಿಸಿದ್ದಾರೆ. ದೇವಾಲಯದ ಆವರಣದಲ್ಲಿ ಚರ್ಮ ಅಥವಾ ರಬ್ಬರ್‌ನಿಂದ ಮಾಡಿದ ಪಾದರಕ್ಷೆಗಳನ್ನು ಧರಿಸಲು ಅವಕಾಶ ಇಲ್ಲದ ಕಾರಣ, ಚಳಿಗಾಲದಲ್ಲಿನ ಅವರ ಕಾಳಜಿಗೆ ಈ ಕಾರ್ಯ ಮಾಡಿದ್ದಾರೆ

First published:

 • 15

  ಕಾಶಿ ವಿಶ್ವನಾಥ ಧಾಮದ ಸಿಬ್ಬಂದಿಗಳಿಗೆ ಸೆಣಬಿನ ಪಾದರಕ್ಷೆ ಕಳುಹಿಸಿದ Modi ; ಯಾಕೆ ಗೊತ್ತಾ?

  ಕಾಶಿಯಲ್ಲಿ ಕಾರ್ಯ ನಿರ್ವಹಿಸುವ ಮಂದಿ ಬರೀಗಾಲಲ್ಲಿ ಇರಬೇಕು ಎಂಬ ಕುರಿತು ಪ್ರಧಾನಿಗೆ ಇತ್ತೀಚೆಗೆ ತಿಳಿದು ಬಂದಿದೆ. ಚಳಿಗಾಲ ಸಂದರ್ಭದಲ್ಲಿ ಅವರ ಆರೋಗ್ಯದ ಮುನ್ನೆಚ್ಚರಿಕೆ ಅಗತ್ಯವಾಗಿದೆ ಈ ಹಿನ್ನಲೆ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಅವರು 100 ಜೊತೆ ಸೆಣಬಿನ ಪಾದರಕ್ಷೆ ಖರೀದಿಸಿದ್ದಾರೆ.

  MORE
  GALLERIES

 • 25

  ಕಾಶಿ ವಿಶ್ವನಾಥ ಧಾಮದ ಸಿಬ್ಬಂದಿಗಳಿಗೆ ಸೆಣಬಿನ ಪಾದರಕ್ಷೆ ಕಳುಹಿಸಿದ Modi ; ಯಾಕೆ ಗೊತ್ತಾ?

  ದೇವಾಲಯದ ಅರ್ಚಕರು, ಸೇವೆ ಮಾಡುವ ಜನರು, ನೈರ್ಮಲ್ಯ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ಮತ್ತು ಇತರರಿಗೆ ಅವರು ಈ ವಿಶೇಷ ಪಾದರಕ್ಷೆ ಕಳುಹಿಸಿದ್ದಾರೆ. ಇದರಿಂದಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವವರು ಚಳಿಯಲ್ಲಿ ಬರಿಗಾಲಿನಲ್ಲಿ ಇರಬೇಕಾಗಿಲ್ಲ ಎಂದು ಅವರು ಹೇಳಿದರು.

  MORE
  GALLERIES

 • 35

  ಕಾಶಿ ವಿಶ್ವನಾಥ ಧಾಮದ ಸಿಬ್ಬಂದಿಗಳಿಗೆ ಸೆಣಬಿನ ಪಾದರಕ್ಷೆ ಕಳುಹಿಸಿದ Modi ; ಯಾಕೆ ಗೊತ್ತಾ?

  ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವ ಮಂದಿ ಪ್ರಧಾನಿ ಮೋದಿ ಅವರ ಈ ಕಾರ್ಯದಿಂದ ಸಂತಸ ವ್ಯಕ್ತಪಡಿಸಿದ್ದಾರೆ. ವಾರಣಾಸಿಯಲ್ಲಿ ಅಭಿವೃದ್ಧಿ ಚಟುವಟಿಕೆಗೆ ವೇಗ ನೀಡಲಾಗಿದ್ದು, ಪ್ರಧಾನಿ ಮೋದಿ ಈ ಬಗ್ಗೆ ಖುದ್ದು ಆಸಕ್ತಿ ವಹಿಸಿದ್ದಾರೆ.

  MORE
  GALLERIES

 • 45

  ಕಾಶಿ ವಿಶ್ವನಾಥ ಧಾಮದ ಸಿಬ್ಬಂದಿಗಳಿಗೆ ಸೆಣಬಿನ ಪಾದರಕ್ಷೆ ಕಳುಹಿಸಿದ Modi ; ಯಾಕೆ ಗೊತ್ತಾ?

  ಕಾಶಿ ವಿಶ್ವನಾಥ ಧಾಮದ ಹಂತ-1 ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಉದ್ಘಾಟಿಸಲಾಯಿತು. 339 ಕೋಟಿ ವೆಚ್ಚದಲ್ಲಿ ಮರು ಅಭಿವೃದ್ಧಿ ಪಡಿಸಿದ್ದ ಯೋಜನೆ ಬಗ್ಗೆ ಪ್ರಧಾನಿ ಕನಸಿನ ಕೂಸಾಗಿದೆ ಕಾಶಿ ವಿಶ್ವನಾಥ ಧಾಮದ ಮೊದಲ ಹಂತವನ್ನು ನಿರ್ಮಿಸಲಾಗಿದೆ. ಇದು 5 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದೆ.

  MORE
  GALLERIES

 • 55

  ಕಾಶಿ ವಿಶ್ವನಾಥ ಧಾಮದ ಸಿಬ್ಬಂದಿಗಳಿಗೆ ಸೆಣಬಿನ ಪಾದರಕ್ಷೆ ಕಳುಹಿಸಿದ Modi ; ಯಾಕೆ ಗೊತ್ತಾ?

  ಪ್ರಧಾನಿ ಮೋದಿ ಅವರು ಕಳುಹಿಸಿದ್ದ ಈ ಪಾದರಕ್ಷೆಗಳನ್ನು ವಾರಣಾಸಿ ವಿಭಾಗೀಯ ಆಯುಕ್ತ ದೀಪಕ್ ಅಗರ್ವಾಲ್, ಪೊಲೀಸ್ ಆಯುಕ್ತ ಎ ಸತೀಶ್ ಗಣೇಶ್ ಮತ್ತು ಶ್ರೀ ಕಾಶಿ ವಿಶ್ವನಾಥ ಧಾಮದ ಸಿಇಒ ಡಾ ಸುನೀಲ್ ಕುಮಾರ್ ವರ್ಮಾ ಅವರು ಸಿಬ್ಬಂದಿಗೆ ವಿತರಿಸಿದರು.

  MORE
  GALLERIES