ಮೋದಿ ಅವರು, ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಕಾರ್ಡಿನಲ್ ಜಾರ್ಜ್ ಅಲೆಂಚೇರಿ, ಸೈರೋ-ಮಲಂಕಾರ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಕಾರ್ಡಿನಲ್ ಬಸೆಲಿಯೋಸ್ ಕ್ಲೀಮಿಸ್, ಸಿರಿಯನ್ ಆರ್ಥೋಡಾಕ್ಸ್ ಚರ್ಚ್ ಮುಖ್ಯಸ್ಥ ಬಸೆಲಿಯೋಸ್ ಮಾರ್ಥೋಮಾ ಮ್ಯಾಥ್ಯೂಸ್, ಜಾಕೋಬೈಟ್ ಚರ್ಚ್‌ನ ಮೆಟ್ರೋಪಾಲಿಟನ್ ಟ್ರಸ್ಟಿ ಜೋಸೆಫ್ ಮೋರ್ ಗ್ರೆಗೋರಿಯೊಸ್ ಸೇರಿದಂತೆ 8 ಪ್ರಮುಖ ಚರ್ಚ್ ಪಾದ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್‌ನ ಹಿರಿಯ ಪಾದ್ರಿ ಆರ್ಚ್‌ಬಿಷಪ್ ಜೋಸೆಫ್ ಕಾಳತಿಪರಂಬಿಲ್, ಕ್ನಾನಾಯ ಚರ್ಚ್‌ನ ಆರ್ಚ್‌ಬಿಷಪ್ ಮ್ಯಾಥ್ಯೂ ಮೂಲಕ್ಕಾಟ್, ಕ್ನಾನಾಯಾ ಜಾಕೋಬೈಟ್ ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಕುರಿಯಾಕೋಸ್ ಮಾರ್ ಸೆವೆರಿಯೋಸ್ ಮತ್ತು ಚಾಲ್ಡಿಯನ್ ಸಿರಿಯನ್ ಚರ್ಚ್‌ನ ಮೆಟ್ರೋಪಾಲಿಟನ್ ಮಾರ್ ಆವ್ಗಿನ್ ಕುರಿಯಾಕೋಸ್ ಅವರನ್ನೂ ಕೂಡ ಭೇಟಿ ಮಾಡಿದ್ದಾರೆ.