ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಲು ವೈದ್ಯರು, ಇಂಜಿನಿಯರ್‌ಗಳು, ಶಿಕ್ಷಕರು ಮತ್ತು ಸಮಾಜ ಸೇವಕರು ಹಾಗೂ ಈ ಕಾರ್ಯಕ್ರಮವನ್ನು ಆಲಿಸುವ ಸಮಾಜದ ಇತರ ಎಲ್ಲಾ ವರ್ಗದ ಜನರ ಗುಂಪುಗಳನ್ನು ರಚಿಸಲಾಗುವುದು. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 100 ಜನರು ಕುಳಿತುಕೊಳ್ಳಬಹುದಾದ 100 ಸ್ಥಳಗಳಲ್ಲಿ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಗೌರವಾನ್ವಿತರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ದುಷ್ಯಂತ್ ಗೌತಮ್ ಮತ್ತು ವಿನೋದ್ ತಾವ್ಡೆ ಅವರು 'ಮನ್ ಕಿ ಬಾತ್' ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ, ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಎಲ್ಲಾ ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಇದಕ್ಕಾಗಿ ಬಿಜೆಪಿ ಕೂಡ ಸಂಪೂರ್ಣ ತಂಡವನ್ನು ಸಿದ್ಧಪಡಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮವು ಅಕ್ಟೋಬರ್ 3, 2014 ರಂದು ಆರಂಭವಾಗಿತ್ತು. ಮನ್ ಕಿ ಬಾತ್‌ನ 100ನೇ ಸಂಚಿಕೆ ಏಪ್ರಿಲ್ 30 ರಂದು ಪ್ರಸಾರವಾಗಲಿದೆ. 100ನೇ ಸಂಚಿಕೆ ಏಪ್ರಿಲ್ 30 ರಂದು ಪ್ರಸಾರವಾಗಲಿದೆ, ವಿಶೇಷವಾದ 100ನೇ ಸಂಚಿಕೆ ಯಶಸ್ವಿಗೊಳಿಸಲು ಬಿಜೆಪಿ ಒಂದು ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ಪ್ರಸಾರ ಮಾಡಲು ಸಿದ್ಧತೆ ನಡೆಸುತ್ತಿದೆ.