Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

ದೆಹಲಿಯಿಂದ ಜೈಪುರಕ್ಕೆ ಪ್ರಯಾಣದ ಸಮಯವನ್ನು ಐದು ಗಂಟೆಯಿಂದ ಸುಮಾರು ಮೂರೂವರೆ ಗಂಟೆಗೆ ಈ ಮಾರ್ಗ ಇಳಿಸಲಿದೆ. ಪ್ರಧಾನಿ ಮೋದಿ ದೆಹಲಿ-ದೌಸಾ-ಲಾಲ್ಸೋಟ್ಸ್​ ವಿಭಾಗದ ರಸ್ತೆಯನ್ನು ಭಾನುವಾರ ವರ್ಚುವಲ್ ಆಗಿ ಉದ್ಘಾಟನೆ ಮಾಡಿದ್ದಾರೆ.

First published:

 • 18

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ದೇಶದ ಅತ್ಯಂತ ಉದ್ದದ ರಾಷ್ಟ್ರೀಯ ಹೆದ್ದಾರಿಯಾದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ.

  MORE
  GALLERIES

 • 28

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ದೆಹಲಿಯಿಂದ ಜೈಪುರಕ್ಕೆ ಪ್ರಯಾಣದ ಸಮಯವನ್ನು ಐದು ಗಂಟೆಯಿಂದ ಸುಮಾರು ಮೂರೂವರೆ ಗಂಟೆಗೆ ಈ ಮಾರ್ಗ ಇಳಿಸಲಿದೆ. ಪ್ರಧಾನಿ ಮೋದಿ ದೆಹಲಿ-ದೌಸಾ-ಲಾಲ್ಸೋಟ್ಸ್​ ವಿಭಾಗದ ರಸ್ತೆಯನ್ನು ಭಾನುವಾರ ವರ್ಚುವಲ್ ಆಗಿ ಉದ್ಘಾಟನೆ ಮಾಡಿದ್ದಾರೆ.

  MORE
  GALLERIES

 • 38

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ಈ ರಸ್ತೆಯನ್ನು ಸುಮಾರು 12,150 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹೆದ್ದಾರಿ 1,386 ಕಿಮೀ ಉದ್ದವಿದ್ದು, ದೇಶದ ಅತಿ ಉದ್ದದ ಎಕ್ಸ್​ಪ್ರೆಸ್​ ವೇ ಆಗಿದೆ. ವಿಶೇಷತೆ ಎಂದರೆ ದೆಹಲಿ-ಮುಂಬೈ ನಡುವಿನ ಪ್ರಯಾಣದ ದೂರವನ್ನು ಇದು 1424 ಕಿಮೀ ನಿಂದ 1,242 ಕಿಮೀಗೆ ಕಡಿತಗೊಳಿಸಿದೆ.

  MORE
  GALLERIES

 • 48

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ದೂರವನ್ನು ಶೇಕಡಾ 12ರಷ್ಟು ಕಡಿಮೆ ಮಾಡಿದರೆ, ಪ್ರಯಾಣದ ಅಂತರವನ್ನು ಕೂಡ 24 ಗಂಟೆಗಳಿಂದ 12 ಗಂಟೆಗೆ ಇಳಿಸಲಿದೆ. ಈ ಹೆದ್ದಾರಿ ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ್​, ಗುಜರಾತ್​ ಮತ್ತು ಮಹಾರಾಷ್ಟ್ರಗಳ ಮೂಲಕ ಹಾದು ಹೋಗುತ್ತದೆ.

  MORE
  GALLERIES

 • 58

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ಜರ್ಮನ್ ತಂತ್ರಜ್ಞಾನದಿಂದ ತಯಾರಾದ ಈ ಎಕ್ಸ್ ಪ್ರೆಸ್ ವೇಯಲ್ಲಿ ವಾಹನಗಳು ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಸಂಚರಿಸಬಹುದು. ಮಾರ್ಚ್ 2024 ರ ವೇಳೆಗೆ ದೆಹಲಿಯಿಂದ ಮುಂಬೈಗೆ ಸಂಪೂರ್ಣ ಎಕ್ಸ್‌ಪ್ರೆಸ್‌ವೇ ಪ್ರಾರಂಭವಾಗಲಿದೆ.

  MORE
  GALLERIES

 • 68

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ಈ ಎಕ್ಸ್‌ಪ್ರೆಸ್‌ವೇನಲ್ಲಿ ಎಲೆಕ್ಟ್ರಿಕ್ ಲೇನ್ ಕೂಡ ಇರಲಿದ್ದು, ಇದರಲ್ಲಿ ಎಲೆಕ್ಟ್ರಿಕ್ ಟ್ರಕ್‌ಗಳು ಮತ್ತು ಬಸ್‌ಗಳು ಮಾತ್ರ ಅದರಲ್ಲಿ ಓಡಾಡಲಿವೆ. ಇನ್ನು ವಿವಿಧೆಡೆ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

  MORE
  GALLERIES

 • 78

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ಈ ವಿಭಾಗವು ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಉತ್ತೇಜನವನ್ನು ನೀಡಲು ಸಿದ್ಧವಾಗಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (PMO)ತಿಳಿಸಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಎಂಟು ಪಥದ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಆಗಿದ್ದು, ಭವಿಷ್ಯದಲ್ಲಿ ಇದನ್ನು 12 ಲೇನ್‌ಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ.

  MORE
  GALLERIES

 • 88

  Delhi-Mumbai Expressway: ದೇಶದ ಅತಿ ಉದ್ದದ ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಉದ್ಘಾಟಿಸಿದ ಮೋದಿ, ಇದರ ವಿಶೇಷತೆಗಳೇನು?

  ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೆದ್ದಾರಿ ಯೋಜನೆಗಳು, ಬಂದರುಗಳು, ರೈಲ್ವೆ ಆಪ್ಟಿಕಲ್​ ಫೈಬರ್​, ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಸರ್ಕಾರ ಹೂಡಿಕೆ ಮಾಡಿದರೆ ಅದು, ವ್ಯಾಪಾರಿಗಳು, ಸಣ್ಣ ಅಂಗಡಿಯವರಿಗೆ ಮತ್ತು ಕೈಗಾರಿಕೆಗಳಿಗೆ ಬಲ ತಂದುಕೊಡುತ್ತದೆ. ಮೂಲಸೌಕರ್ಯಗಳ ಮೇಲಿನ ಹೂಡಿಕೆಯೂ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸುತ್ತದೆ ಎಂದು ತಿಳಿಸಿದ್ದಾರೆ.

  MORE
  GALLERIES