PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

ಕಳೆದ ಆರು ವರ್ಷಗಳಿಂದ ದೇಶದ ಯೋಧರೊಂದಿಗೆ ದೀಪಾವಳಿ (Deepavali) ಆಚರಿಸುವ ಪರಿಪಾಠ ಬೆಳೆಸಿಕೊಂಡು ಬಂದಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ಬಾರಿ ಕೂಡ ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಜೌರಿಯ ನೌಶೇರಾ ಸೆಕ್ಟರ್​ನ ಯೋಧರೊಂದಿಗೆ ದೀಪಾವಳಿ ಸಂಭ್ರಮ ಆಚರಿಸಿದ್ದಾರೆ. ದೇಶದ ಜನರು ಇಂದು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ದೇಶ ಕಾಯುತ್ತೀರುವ ಯೋಧರಿಂದ ಎಂದು ಅವರ ಕೊಡುಗೆ ಸ್ಮರಿಸಿದರು.

First published:

  • 18

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ಇಂದು ಇಲ್ಲಿ ನಮ್ಮ ಸೈನಿಕರಿಗಾಗಿ ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ನನ್ನೊಂದಿಗೆ ತಂದಿದ್ದೇನೆ. ನಾನು ಪ್ರಧಾನಿಯಾಲ್ಲ. ನಿಮ್ಮ ಕುಟುಂಬದ ಸದಸ್ಯನಾಗಿ ಇಲ್ಲಿ ಇದ್ದೇನೆ. ಇಂದು ದೇಶದ ಪ್ರತಿಯೊಬ್ಬ ನಾಗರೀಕರು ದೀಪ ಬೆಳಗಿಸುವಾಗ ನಿಮಗೆ ಶುಭ ಹಾರೈಸುತ್ತಾರೆ. ನಿಮ್ಮಿಂದಾಗಿ 130 ಕೋಟಿ ಭಾರತೀಯರು ಶಾಂತಿಯುತವಾಗಿ ಮಲಗಬಹುದಾಗಿದೆ ಎಂದರು.

    MORE
    GALLERIES

  • 28

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ನೌಶೇರ್​ ಸೆಕ್ಟರ್​ಗೆ ಆಗಮಿಸಿದ ಅವರು ಇದೇ ಸಂದರ್ಭದಲ್ಲಿ ಅಗಲಿದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಇದಾದ ಬಳಿಕ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತ ಮಾತೆಯ ಸುರಕ್ಷಾ ಕವಚ ನೀವು ಎಂದು ಹೆಮ್ಮೆ ವ್ಯಕ್ತಪಡಿಸಿದ್ದರು.

    MORE
    GALLERIES

  • 38

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ದೇಶದ ಜನರು ನೆಮ್ಮದಿಯಾಗಿ ಸಂಭ್ರಮದಿಂದ ಹಬ್ಬ ಆಚರಿಸಲು ನೀವು ಕಾರಣ. ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲಿ ಈ ಬ್ರಿಗೇಡ್ ನಿರ್ವಹಿಸಿದ ಪಾತ್ರದ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯನ್ನು ತರುತ್ತದೆ ಎಂದರು

    MORE
    GALLERIES

  • 48

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ಹಿಂದೆ, ಭದ್ರತಾ ಪಡೆಗಳಿಗೆ ರಕ್ಷಣಾ ಸಾಧನಗಳನ್ನು ಸಂಗ್ರಹಿಸಲು ವರ್ಷಗಳು ಕಾಯಬೇಕಿತ್ತು. ಆದರೆ ಇದೀಗ ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯಿಂದಾಗಿ ಹಳೆ ಪದ್ಧತಿಗಳು ಬದಲಾಗಿದೆ

    MORE
    GALLERIES

  • 58

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ದೇಶವು ತನ್ನ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಅದಕ್ಕಾಗಿ ನಾವು ಅನೇಕ ತ್ಯಾಗಗಳನ್ನು ನೀಡಿದ್ದೇವೆ. ಈಗ ನಮ್ಮ ಮುಂದೆ ಹೊಸ ಗುರಿಗಳು ಮತ್ತು ಸವಾಲುಗಳಿವೆ. ನಮ್ಮ ಸೈನಿಕರ ಶಕ್ತಿ ಮತ್ತು ದೃಢತೆಯನ್ನು ನಾನು ಅನುಭವಿಸಿದೆ. ಸರ್ಜಿಕಲ್ ಸ್ಟ್ರೈಕ್ ನಂತರ ಶಾಂತಿ ಕದಡಲು ಹಲವಾರು ಪ್ರಯತ್ನಗಳು ನಡೆದಿವೆ, ಆದರೆ ನಮ್ಮ ಯೋಧರಿಂದಾಗಿ ನಾವು ಬಲವಾಗಿ ನಿಂತಿದ್ದೇವೆ

    MORE
    GALLERIES

  • 68

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ರಾಷ್ಟ್ರದ ಭದ್ರತೆಯ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಹೊಸ ಎತ್ತರವನ್ನು ಮುಟ್ಟಲಿದೆ. ಈಗ ಸೇನೆಯಲ್ಲಿ ಮಹಿಳೆಯರಿಗೆ ಕಾಯಂ ಕಮಿಷನ್ ನೀಡಲಾಗುತ್ತಿದೆ. ಇದೀಗ ಮಹಿಳೆಯರಿಗಾಗಿ ಪ್ರಧಾನ ಸೇನಾ ಸಂಸ್ಥೆಗಳ ಬಾಗಿಲು ತೆರೆಯಲಾಗಿದೆ

    MORE
    GALLERIES

  • 78

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ಕಳೆದ ಆರು ವರ್ಷಗಳಿಂದಲೂ ಅಂದರೆ 2014ರಿಂದಲೂ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ವರ್ಷ ಕೂಡ ಆ ಸಂಪ್ರದಾಯ ಮುಂದುವರೆಸಿದ್ದಾರೆ

    MORE
    GALLERIES

  • 88

    PM Modi: ನಿಮ್ಮಿಂದಾಗಿ ದೇಶದ ಜನರು ಶಾಂತಿ-ನೆಮ್ಮದಿಯಿಂದ ಹಬ್ಬ ಆಚರಿಸುತ್ತಿದ್ದಾರೆ; ಯೋಧರ ಜೊತೆ ಪ್ರಧಾನಿ ದೀಪಾವಳಿ

    ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿರುವ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಹಬ್ಬದ ಸಂಭ್ರಮ ಆಚರಿಸಿದ್ದಾರೆ

    MORE
    GALLERIES