ದೇಶದ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸುವ ಆತ್ಮೀಯ ಮಾತುಕತೆಯ ಕಾರ್ಯಕ್ರಮ ಮನ್ ಕಿ ಬಾತ್. ಪ್ರತಿ ತಿಂಗಳು ಆಲ್ ಇಂಡಿಯಾ ರೆಡೀಯೋದಲ್ಲಿ ಪ್ರಧಾನಿಗಳು ದೇಶದ ಜನರನ್ನು ಉದ್ದೇಶಿಸಿ, ಪ್ರಮುಖ ವಿಷಯಗಳು, ಪ್ರಚಲಿತ ಘಟನೆಗಳ ಕುರಿತು ಚರ್ಚೆ ಮಾತನಾಡುತ್ತಾರೆ.
2/ 8
ಅತ್ಯಂತ ಜನಪ್ರಿಯ ಪಡೆದಿರುವ ಪ್ರಧಾನಿಗಳ ಮನ್ ಕಿಬಾತ್ ಕಾರ್ಯಕ್ರಮ ಈಗಾಗಲೇ ಯಶಸ್ವಿಯಾಗಿ 88 ಕಂತುಗಳು ಪ್ರಸಾರಗೊಂಡಿದೆ. ಈ ಬಾರಿಯ ಮನ್ ಕಿ ಬಾತ್ ಕೊಂಚ ವಿಶೇಷವಾಗಿರಲಿದೆ.
3/ 8
ಹೌದು, ಮೇ 29ರಂದು ಪ್ರಸಾರವಾಗಲಿರುವ ಈ ಬಾರಿಯ 89ನೇ ಕಂತಿನ ಮನ್ ಕಿ ಬಾತ್ನಲ್ಲಿ ಮಾತನಾಡಲು ಐಡಿಯಾ ನೀಡುವಂತೆ ಪ್ರಧಾನಿಗಳು ದೇಶದ ಜನರಿಗೆ ವಿಶೇಷ ಆಹ್ವಾನ ನೀಡಿದ್ದಾರೆ.
4/ 8
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಬಹುದಾದ ಜನರು ನಿರೀಕ್ಷಿಸುವ ವಿಚಾರಗಳ ಬಗ್ಗೆ ಸಲಹೆಯನ್ನು ಕೇಳಲಾಗಿದ್ದು, ಇವುಗಳನ್ನು ದೇಶದ ಜನರು ಶಿಫಾರಸು ಮಾಡಬಹುದಾಗಿದೆ.
5/ 8
NaMo App and MyGov ಅಲ್ಲಿ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವ ವಿಷಯದ ಕುರಿತು ಸಲಹೆ ನೀಡಬಹುದಾಗಿದೆ.
6/ 8
ಅಷ್ಟೇ ಅಲ್ಲದೇ, 1800-11-7800ನಲ್ಲಿ ತಮ್ಮ ಸಲಹೆಗಳನ್ನು ರೆಕಾರ್ಡ್ ಮಾಡಿ ಸಂದೇಶ ನೀಡಬಹುದಾಗಿದೆ. ಜೊತೆಗೆ 1922ಗೆ ಮಿಸ್ ಕಾಲ್ ನೀಡಬಹುದಾಗಿದೆ.
7/ 8
ಈ ಹಿಂದೆ ಕೂಡ ಕಳೆದ ಫೆಬ್ರವರಿಯಲ್ಲಿ ನಡೆದ ಮನ್ ಕಿ ಬಾತ್ ಕಾರ್ಯಕ್ರಮಕ್ಕೂ ಜನರಿಂದ ಸಲಹೆಯನ್ನು ಆಹ್ವಾನಿಸಿದ್ದರು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.
8/ 8
ಇನ್ನು ಈ ಮನ್ ಕಿಬಾತ್ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಅಂದರೆ 2014ರಲ್ಲಿ ಪ್ರಾರಂಭಿಸಿದ್ದರು.