ಭಾರತದ ಮೊದಲ ಎಂಜಿನ್ ರಹಿತ “ವಂದೇ ಭಾರತ್ ಎಕ್ಸ್ಪ್ರೆಸ್” ರೈಲು ಹೇಗಿದೆ ಗೊತ್ತಾ..!
ದೇಶದ ಮೊದಲ ಎಂಜಿನ್ ರಹಿತ ಮಧ್ಯಮ ವೇಗದ ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್ಪ್ರೆಸ್ ಅಥವಾ ಟ್ರೈನ್ 18 ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ದೆಹಲಿ-ವಾರಣಾಸಿ ನಡುವೆ ಈ ರೈಲು ಪಯಣಿಸಲಿದ್ದು ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸಲಿದೆ. 16 ಕೋಚ್ಗಳ ಈ ರೈಲನ್ನು 97 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 1,128 ಜನರು ಪ್ರಯಾಣಿಸುವ ಈ ರೈಲಿನ ದರ ಶತಾಬ್ದಿ ರೈಲು ದರಕ್ಕಿಂತ 1.5ರಷ್ಟು ಹೆಚ್ಚಿದೆ. ದೆಹಲಿಯಿಂದ ವಾರಾಣಸಿಗೆ 8 ಗಂಟೆಗಳಲ್ಲಿ ತಲುಪಲಿದೆ. ಕಾನ್ಪುರ ಮತ್ತು ಪ್ರಯಾಗ್ರಾಜ್ನಲ್ಲಿ ಮಾತ್ರ ನಿಲುಗಡೆ ಇರಲಿದೆ.ಈ ಸೆಮಿ ಹೈ ಸ್ಪೀಡ್ ರೈಲಿನಲ್ಲಿ ಎರಡು ವಿಭಾಗದಲ್ಲಿ ಪ್ರಯಾಣಿಕರು ಟಿಕೆಟ್ ಪಡೆದು ಪಯಣಿಸಬಹುದು. ಎಕ್ಸಿಕ್ಯೂಟೀವ್ ಹಾಗೂ ಚೇರ್ ಕಾರ್ ಪ್ರಯಾಣಿಕರಿಗೆ ಹೆಚ್ಚು ಕೊಠಡಿ ಒಳಗೊಂಡ ಐಷಾರಾಮಿ ಸೌಲಭ್ಯವನ್ನು ಇದು ಹೊಂದಿದೆ. ರೈಲಿನ ಪೊಟೋಗಳು ನ್ಯೂಸ್ 18 ಕನ್ನಡದಲ್ಲಿ