ಆಗಸ್ಟ್ 15 ರಾಷ್ಟ್ರಹಬ್ಬ ಸ್ವಾತಂತ್ರ್ಯ ದಿನಾಚರಣೆ. ದೇಶದಾದ್ಯಂತ ಹಬ್ಬದ ಸಂಭ್ರಮ ಮನೆಮಾಡಿರುತ್ತದೆ. ಆಗಸ್ಟ್ 15 ರ ಬುಧವಾರ ನಡೆಯಲಿರುವ 72 ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ನವದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆಗಳು ಸಂಪೂರ್ಣ ವಸ್ತ್ರಧಾರಿಗಳಾಗಿ ತಾಲೀಮು ನಡೆಸುತ್ತಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಬಹಳ ಜಾಗರೂಕತೆಯಿಂದ ನಾಳಿನ ಆಚರಣೆಗೆ ಸಕಲ ಸಿದ್ದತೆ ನಡೆಸುತ್ತಿದ್ದಾರೆ. ನಾಳಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಶಾಲಾ ಮಕ್ಕಳು ಸಹ ತಾಲೀಮು ನಡೆಸುತ್ತಿರುವ ದೃಶ್ಯ ಕಂಡುಬಂದಿತು. ದೆಹಲಿ ಪೊಲೀಸ್ ಕಮೀಷನರ್ ಅಮುಲ್ಯ ಪಟ್ನಾಯಕ್ ನಾಳಿನ ಸಿದ್ದತೆಯ ರೂಪುರೇಷೆಗಳನ್ನು ಪರಿಶೀಲಿಸಿದರು. ಬಿಡಿಎಸ್ ಅಧಿಕಾರಿಗಳು ಬಾಂಬು-ಪತ್ತೆ ಸಾಧನದೊಂದಿಗೆ ಒಂದು ಕೈಗಡಿಯಾರವನ್ನು ಇಟ್ಟುಕೊಂಡಿರುವ ದೃಶ್ಯವೂ ಕಂಡುಬಂದಿತು.