PHOTOS: ರಷ್ಯಾ ವಿಮಾನ ದುರಂತದಲ್ಲಿ 41 ಮಂದಿ ಸಾವು; ಇಲ್ಲಿವೆ ಘಟನೆಯ ದೃಶ್ಯಗಳು
ಮಾಸ್ಕೋದಿಂದ ವರ್ಮನ್ಸ್ಕ್ ನಗರಕ್ಕೆ ಹಾರಾಟ ಪ್ರಾರಂಭಿಸಿದ್ದ ರಷ್ಯಾದ ಸುಖೋಯ್ ಸೂಪರ್ ಜೆಟ್ 100 ವಿಮಾನ ದುರಂತಕ್ಕೀಡಾಗಿದೆ. ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ತುರ್ತು ಭೂಸ್ಪರ್ಶ ಮಾಡುವ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಲ್ಲಿ ಇಬ್ಬರು ಮಕ್ಕಳು ಸೇರಿದಂತೆ 41 ಜನರು ಸಾವನ್ನಪ್ಪಿದ್ದಾರೆ. ಹಾರಾಟ ಆರಂಭಿಸಿದ್ದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಪೈಲಟ್ಗಳು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ಮುಂದಾಗಿದ್ದಾರೆ. ಈ ವೇಳೆ ರನ್ವೇಗೆ ಇಳಿಯುತ್ತಿದ್ದಂತೆ ವಿಮಾನ ನೆಲಕ್ಕೆ ಅಪ್ಪಳಿಸಿ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ವಿಮಾನದ ಮುಂಬದಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, 41 ಜನ ಮೃತಪಟ್ಟಿದ್ದಾರೆ