ನಿಮ್ಮದೇ ಫೋಟೋದಲ್ಲಿ ಸಿದ್ಧಗೊಳ್ಳುತ್ತೆ ಮಾಸ್ಕ್; ಮುಖ ಕಾಣೊಲ್ಲ ಅನ್ನೋ ಸಮಸ್ಯೆಗೆ ಸಿಕ್ತು ಪರಿಹಾರ!
ಕೊರೋನಾ ಇರುವುದರಿಂದ ಜನರು ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಹೀಗಾಗಿ ಜನರ ಮುಖ ಕಾಣುವುದೇ ಇಲ್ಲ. ಇದಕ್ಕೆ ಫೋಟೋ ಸ್ಟುಡಿಯೋ ಒಂದು ಪರಿಹಾರ ಕಂಡು ಹಿಡಿದಿದೆ. (ಚಿತ್ರ ಕೃಪೆ: ಜಿ ಶ್ರೀಜಿತ್ ನ್ಯೂಸ್18 ಕೇರಳ)
ಕೊರೋನಾ ನಿಯಂತ್ರಂಕ್ಕೆ ಮಾಸ್ಕ್ ಧರಿಸುವಂತೆ ಸರ್ಕಾರ ಆದೇಶ ನೀಡಿದೆ. ಆದರೆ, ಮಾಸ್ಕ್ ಧರಿಸುವುದುರಿಂದ ಮುಖ ಪರಿಚಯ ಸಿಗೋದು ತುಂಬಾನೇ ಕಷ್ಟ ಆಗುತ್ತಿದೆ.
2/ 10
ಈಗ ಇದಕ್ಕೆ ಕೇರಳ ಮೂಲದ ಸ್ಟುಡಿಯೋ ಒಂದು ಪರಿಹಾರ ಕಂಡು ಹಿಡಿದಿದೆ. ಅದೇನೆಂದರೆ ನಿಮ್ಮದೇ ಮುಖವನ್ನು ಮಾಸ್ಕ್ ಮೇಲೆ ಪ್ರಿಂಟ್ ಹಾಕುವ ಕೆಲಸ ಮಾಡುತ್ತಿದೆ.
3/ 10
ಕೊಟ್ಟಯ್ಯಂನಲ್ಲಿರುವ ಸ್ಟುಡಿಯೋ ಒಂದು ಈ ರೀತಿ ಪ್ರಯೋಗಕ್ಕೆ ಮುಂದಾಗಿದೆ. ಈ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ.
4/ 10
ಈ ಸ್ಟುಡಿಯೋದವರು ಗ್ರಾಹಕರ ಪಾಸ್ಪೋರ್ಟ್ ಫೋಟೋವನ್ನು ತೆಗೆದುಕೊಳ್ಳುತ್ತಾರೆ. ನಂತರ ಮಾಸ್ಕ್ಮೇಲೆ ಫೋಟೋವನ್ನು ಪ್ರಿಂಟ್ ಹಾಕುತ್ತಾರೆ. ಈ ಕೆಲಸಕ್ಕೆ ಬೇಕಿರುವುದು ಗರಿಷ್ಠ 20 ನಿಮಿಷ ಮಾತ್ರ.
5/ 10
ಈ ಆವಿಷ್ಕಾರವನ್ನು ಜನರು ಮೆಚ್ಚಿಕೊಂಡಿದ್ದು, ಮುಗಿಬಿದ್ದು ಮಾಸ್ಕ್ ಕೊಳ್ಳುತ್ತಿದ್ದಾರೆ. ಒಂದು ಮಾಸ್ಕ್ಗೆ 50-60 ರೂಪಾಯಿ ವೆಚ್ಚ ಆಗಲಿದೆ
6/ 10
ಸದ್ಯ ಸಾಕಷ್ಟು ಜನರು ಈ ಸ್ಟೋಡಿಯೋ ಮುಂದೆ ಮಾಸ್ಕ್ಗಾಗಿ ಹಾಜರು ಹಾಕಿದ್ದಾರೆ.
7/ 10
ಮಾಸ್ಕ್ ಸಿದ್ಧಪಡಿಸುತ್ತಿರುವ ಸ್ಟುಡಿಯೋ
8/ 10
ಮಹಿಳೆಯ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಸ್ಟುಡಿಯೋ
9/ 10
ಮಹಿಳೆಯ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಸ್ಟುಡಿಯೋ
10/ 10
ಮಹಿಳೆಯ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ಸ್ಟುಡಿಯೋ
First published:
110