PHOTO: ಮಹಿಳಾ ದಿನಾಚರಣೆಗೆ ಗೂಗಲ್ ಗೌರವ; ವಿಶ್ವದ 13 ಮಹಿಳೆಯರ ಸ್ಪೂತಿದಾಯಕ ನುಡಿ
ಮಹಿಳಾ ದಿನಾಚರಣೆ ವಿಶೇಷವಾಗಿ ಗೂಗಲ್ ಡೂಡಲ್ ವಿಭಿನ್ನ ರೀತಿಯಲ್ಲಿ ತನ್ನ ಗೌರವವನ್ನು ಸೂಚಿಸಿದೆ. ಜಗತ್ತಿನ ನಾನಾ ಭಾಗಗಳ 13 ಪ್ರಸಿದ್ಧ ಮಹಿಳೆಯರ ಸ್ಫೂರ್ತಿದಾಯಕ ಕೋಟ್ಗಳನ್ನು ಪ್ರಕಟಿಸುವ ಮೂಲಕ ಇಂದಿನ ದಿನವನ್ನು ಆಚರಿಸುತ್ತಿದೆ.
ಭಾರತದ ಮೇರಿ ಕೋಮ್ರಿಂದ ಹಿಡಿದು ಜಪಾನ್ನ ಕಲಾವಿದೆ ಮತ್ತು ಚಿತ್ರಸಾಹಿತಿ ಯೋಕೋ ಓನೋ ಅವರವರೆಗೆ ಪ್ರಸಿದ್ಧ ಮಹಿಳೆಯರ ಕೋಟ್ಗಳನ್ನು ಡೂಡಲ್ನಲ್ಲಿ ಪ್ರಕಟಿಸಲಾಗಿದೆ.