ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

First published:

  • 114

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಭಾರತದಲ್ಲಿ ವಾಟ್ಸ್​ಆ್ಯಪ್ ಕರೆಗಳ ಮತ್ತು ಸಂದೇಶಗಳ ಟ್ಯಾಪಿಂಗ್ ನಡೆಯುತ್ತಿದೆ ಎಂಬ ಚರ್ಚೆಗಳಳು ಜೋರಾಗಿ ನಡೆಯುತ್ತಿದೆ. ಇದರ ನಡುವೆ ಅಗತ್ಯಬಿದ್ದರೆ ಕಾನೂನಿನ ಅಡಿಯಲ್ಲಿ ಪ್ರಾಧಿಕಾರದಿಂದ ಅನುಮತಿ ಪಡೆದು ಇಲಾಖೆಯ ಮೂಲಕ ಕರೆಗಳನ್ನು ಟ್ಯಾಪ್​ ಮಾಡಬಹುದು ಎಂದು ಭಾರತ ಸರ್ಕಾರ ತಿಳಿಸಿದೆ.

    MORE
    GALLERIES

  • 214

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

     ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರು, ದೂರವಾಣಿ ಕರೆಯಲ್ಲಿ ಯಾರನ್ನಾದರೂ ಮೇಲ್ವಿಚಾರಣೆ ಮಾಡುವ ಮೊದಲು, ಕೇಂದ್ರ ಗೃಹ ಕಾರ್ಯದರ್ಶಿಯ ಅನುಮೋದನೆ ಪಡೆಯಬೇಕು. ಇಂತಹ ಏಜೆನ್ಸಿ ಮೂಲಕ ಟ್ಯಾಪ್ ಮಾಡಲಾದ ವಿಷಯಗಳನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ವ್ಯಕ್ತಿಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಎಂದು ತಿಳಿಸಿದರು. 

    MORE
    GALLERIES

  • 314

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಅಲ್ಲದೆ ಪ್ರಸ್ತುತ  ಸರ್ಕಾರದ ಅಧೀನದಲ್ಲಿರುವ ಹತ್ತು ಇಲಾಖೆಗಳಿಗೆ ಮಾತ್ರ ಕರೆಗಳನ್ನು ಟ್ಯಾಪ್ ಮಾಡುವ ಅಧಿಕಾರವನ್ನು ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಹಾಗೆಯೇ ದೇಶದಲ್ಲಿ ಕರೆಗಳನ್ನು ಹಾಗೂ ಮಾಹಿತಿಗಳನ್ನು ಪಡೆಯುವ ಅಧಿಕಾರ ಹೊಂದಿರುವ ಸಂಸ್ಥೆಗಳನ್ನು ತಿಳಿಸಿದರು. ಅವುಗಳೆಂದರೆ...

    MORE
    GALLERIES

  • 414

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಕಂದಾಯ ಗುಪ್ತಚರ ನಿರ್ದೇಶನಾಲಯ (DRI) - ಇದು ಕಳ್ಳಸಾಗಣೆ ತಡೆಗಟ್ಟುವ ಮತ್ತು ತನಿಖೆ ನಡೆಸುವ ಜವಾಬ್ದಾರಿ ಹೊಂದಿರುವ ಭಾರತದ ಗುಪ್ತಚರ ಸಂಸ್ಥೆಯಾಗಿದೆ. ನಿರ್ದೇಶನಾಲಯವನ್ನು ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಅಧಿಕಾರಿಗಳು ನಿರ್ವಹಿಸುತ್ತಾರೆ. ಇದು ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಕಚೇರಿಗಳನ್ನು ಸಹ ಹೊಂದಿದೆ. ಇದಲ್ಲದೆ, ಈ ಏಜೆನ್ಸಿಯು ವಿದೇಶದಲ್ಲಿಯೂ ಶಾಖೆಗಳನ್ನು ಹೊಂದಿದೆ. ಇದರ ನೇತೃತ್ವವನ್ನು ಭಾರತ ಸರ್ಕಾರದ ವಿಶೇಷ ಕಾರ್ಯದರ್ಶಿ ಹುದ್ದೆಯ ಮಹಾನಿರ್ದೇಶಕರು ವಹಿಸಿದ್ದಾರೆ.

    MORE
    GALLERIES

  • 514

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಡ್ರಗ್ ಕಂಟ್ರೋಲ್ ಬ್ಯೂರೋ (NCB) - ಡ್ರಗ್ ಕಂಟ್ರೋಲರ್ಸ್ ಬ್ಯೂರೋ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಭಾರತದ ನೋಡಲ್ ಡ್ರಗ್ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಯಾಗಿದ್ದು, ಮಾದಕವಸ್ತು ಕಳ್ಳಸಾಗಣೆಯನ್ನು ತಡೆಗಟ್ಟುತ್ತದೆ. ಹಾಗೆಯೇ ದೇಶದಲ್ಲಿ ಅಕ್ರಮ ವಸ್ತುಗಳನ್ನು ಬಳಕೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಎನ್‌ಸಿಬಿಯ ಮಹಾನಿರ್ದೇಶಕರು ಭಾರತೀಯ ಪೊಲೀಸ್ ಸೇವೆ ಅಥವಾ ಭಾರತೀಯ ಕಂದಾಯ ಸೇವಾ ಮಟ್ಟದ ಅಧಿಕಾರಿ. ಇದನ್ನು 17 ಮಾರ್ಚ್ 1986 ರಂದು ಸ್ಥಾಪಿಸಲಾಯಿತು.

    MORE
    GALLERIES

  • 614

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಜಾರಿ ನಿರ್ದೇಶನಾಲಯ (ED) - ಜಾರಿ ನಿರ್ದೇಶನಾಲಯವು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಹಣಕಾಸು ತನಿಖಾ ಸಂಸ್ಥೆಯಾಗಿದೆ. ಇದರ ಪ್ರಧಾನ ಕಚೇರಿ ನವದೆಹಲಿಯಲ್ಲಿದೆ. ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಗಳು ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ಕೊಚ್ಚಿ, ದೆಹಲಿ, ಪಣಜಿ, ಗುವಾಹಟಿ, ಹೈದರಾಬಾದ್, ಜೈಪುರ, ಜಲಂಧರ್, ಕೋಲ್ಕತಾ, ಲಕ್ನೋ, ಮುಂಬೈ, ಪಾಟ್ನಾ ಮತ್ತು ಶ್ರೀನಗರದಲ್ಲಿವೆ. 1956 ರಲ್ಲಿ ಜಾರಿ ನಿರ್ದೇಶನಾಲಯವನ್ನು ದೆಹಲಿಯಲ್ಲಿ ಸ್ಥಾಪಿಸಲಾಯಿತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ 1999 (ಫೆಮಾ) ಮತ್ತು ಹಣ ಮಾರ್ಪಾಡು ಕಾಯ್ದೆಯಡಿ ಕೆಲವು ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಕೂಡ ಇದರ ಮೇಲಿದೆ.

    MORE
    GALLERIES

  • 714

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) - ಕೇಂದ್ರೀಯ ನೇರ ತೆರಿಗೆ ಮಂಡಳಿಯು ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಒಂದು ಭಾಗವಾಗಿದ್ದು, ಇದು 1963ರ ಕೇಂದ್ರ ಕಂದಾಯ ಮಂಡಳಿ ಕಾಯ್ದೆ, ಅಡಿಯಲ್ಲಿ ತನಿಖೆ ನಡೆಸಲು ಅಧಿಕಾರ ಹೊಂದಿದೆ. ಇದನ್ನು 1 ಜನವರಿ 1964 ರಂದು ಸಕ್ರಿಯಗೊಳಿಸಲಾಯಿತು. ಆದಾಯ ತೆರಿಗೆ ಇಲಾಖೆಯ ಮೂಲಕ ನೇರ ತೆರಿಗೆ ಕಾನೂನಿನ ಆಡಳಿತದ ಜವಾಬ್ದಾರಿಯನ್ನು ಇದು ಹೊಂದಿದೆ.

    MORE
    GALLERIES

  • 814

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ರಾಷ್ಟ್ರೀಯ ತನಿಖಾ ಸಂಸ್ಥೆ (NIA) - ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆಯ ನಿಯಂತ್ರಿಸಲು ಭಾರತ ಸರ್ಕಾರ ಸ್ಥಾಪಿಸಿರುವ ಫೆಡರಲ್ ತನಿಖಾ ಸಂಸ್ಥೆ ಇದು. ರಾಜ್ಯಗಳಿಂದ ವಿಶೇಷ ಅನುಮತಿ ಪಡೆಯದೇ ಭಯೋತ್ಪಾದನೆಗೆ ಸಂಬಂಧಿಸಿದ ಅಪರಾಧಗಳನ್ನು ಮಟ್ಟಹಾಕುವ ಅಧಿಕಾರ ಈ ಏಜೆನ್ಸಿಗೆ ಅಧಿಕಾರವಿದೆ.

    MORE
    GALLERIES

  • 914

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ರಿಸರ್ಚ್ ಅ್ಯಂಡ್ ಎನಾಲಿಸಿಸ್ ವಿಂಗ್ (RAW) - ಇದು ಭಾರತದ ಅಂತರರಾಷ್ಟ್ರೀಯ ರಹಸ್ಯ ಸಂಘಟನೆಯಾಗಿದೆ. 1965 ರ ಇಂಡೋ-ಪಾಕ್ ಯುದ್ಧದ ನಂತರ, ವಿದೇಶದಲ್ಲಿ ಗುಪ್ತಚರ ಕೆಲಸ ಮಾಡುವ ಏಜೆನ್ಸಿಯ ಅಗತ್ಯತೆ ಮಹತ್ವ ಕೊಡಲಾಯಿತು. ಅದರಂತೆ ಸೆಪ್ಟೆಂಬರ್ 1968 ರಲ್ಲಿ, ರಿಸರ್ಚ್ ಅ್ಯಂಡ್ ಎನಾಲಿಸಿಸ್ ವಿಂಗ್ (RAW)ವನ್ನು ಸ್ಥಾಪನೆ ಮಾಡಲಾಯಿತು. ಈ ಹಿಂದೆ ಇಂಟೆಲಿಜೆನ್ಸ್ ಬ್ಯೂರೋ ದೇಶ ಮತ್ತು ವಿದೇಶಗಳೊಂದಿಗೆ ಕೆಲಸ ಮಾಡುತ್ತಿತ್ತು. ಮಾಹಿತಿ ಸಂಗ್ರಹಿಸುವುದು, ಭಯೋತ್ಪಾದನೆಯನ್ನು ತಡೆಗಟ್ಟುವುದು ಮತ್ತು ರಹಸ್ಯ ಕಾರ್ಯಾಚರಣೆ ನಡೆಸುವುದು RAWನ ಮುಖ್ಯ ಕಾರ್ಯಗಳು. ಇದಲ್ಲದೆ, ಇದು ದೇಶದ ಹಿತಾಸಕ್ತಿಗಳಿಗೆ ಸಂಬಂಧಿಸಿದ ಅನೇಕ ರೀತಿಯ ಮಾಹಿತಿಗಳನ್ನು ಈ ಏಜೆನ್ಸಿ ಸಂಗ್ರಹಿಸುತ್ತದೆ.

    MORE
    GALLERIES

  • 1014

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಸಿಗ್ನಲ್ ಇಂಟೆಲಿಜೆನ್ಸ್ ನಿರ್ದೇಶನಾಲಯ- ಸಿಗ್ನಲ್ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಎಂಬುದು ಭೂ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ಸಿಬ್ಬಂದಿ ನಡೆಸುವ ಜಂಟಿ ಸೇವಾ ಸಂಸ್ಥೆಯಾಗಿದೆ. ಇದು ಹೆಚ್ಚಿನ ಸಂಖ್ಯೆಯ ವೈರ್‌ಲೆಸ್ ಪ್ರಾಯೋಗಿಕ ಘಟಕಗಳನ್ನು ಹೊಂದಿದ್ದು ಅದು ಇತರ ದೇಶಗಳಿಗೆ ಮಿಲಿಟರಿ ಸಂಪರ್ಕವನ್ನು ನೋಡಿಕೊಳ್ಳುತ್ತದೆ. ಈ ಸಂಸ್ಥೆ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಡಿಸೆಂಬರ್ 2018 ರಂದು ಕೇಂದ್ರ ಸರ್ಕಾರ ಈ ಸಂಸ್ಥೆಗೆ ಫೋನ್ ಮತ್ತು ಕಂಪ್ಯೂಟರ್ ಟ್ಯಾಪಿಂಗ್‌ಗೆ ಅಧಿಕಾರ ನೀಡಿತು.

    MORE
    GALLERIES

  • 1114

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಇಂಟೆಲಿಜೆನ್ಸ್ ಬ್ಯೂರೋ (IB) - ಇದು ದೇಶದ ಆಂತರಿಕ ಗುಪ್ತಚರ ಸಂಸ್ಥೆ. ವಿಶ್ವದ ಅತ್ಯಂತ ಹಳೆಯ ಏಜೆನ್ಸಿಗಳಲ್ಲಿ ಇದು ಕೂಡ ಒಂದಾಗಿದೆ. ಇದನ್ನು 1887 ರಲ್ಲಿ ಬ್ರಿಟಿಷರು ರಚಿಸಿದರು. ಸ್ವಾತಂತ್ರ್ಯದ ನಂತರ ಇದನ್ನು 1947 ರಲ್ಲಿ ಪುನರ್ ಸಂಘಟಿಸಲಾಯಿತು.

    MORE
    GALLERIES

  • 1214

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) - ಇದು ದೇಶದ ಪ್ರಮುಖ ತನಿಖಾ ಸಂಸ್ಥೆ. ಇದು ವಿವಿಧ ಅಪರಾಧ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ತನಿಖೆ ಮಾಡುತ್ತದೆ. 1941 ರಲ್ಲಿ ಭಾರತ ಸರ್ಕಾರ ಸಿಬಿಐಯನ್ನು ಸ್ಥಾಪಿಸಿದ್ದರು. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ವಿಶೇಷ ಪೊಲೀಸ್ ಸ್ಥಾಪನೆಯಿಂದ (ಎಸ್‌ಪಿಇ) ಈ ಸಂಸ್ಥೆ ಹುಟ್ಟಿಕೊಂಡಿತು.

    MORE
    GALLERIES

  • 1314

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ದೆಹಲಿ ಪೊಲೀಸ್- 1861 ರಲ್ಲಿ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಈ ರಕ್ಷಣಾ ಪಡೆಯನ್ನು ಸ್ಥಾಪಿಸಲಾಯಿತು. ಇದನ್ನು ಫೆಬ್ರವರಿ 16, 1948 ರಂದು ಪುನರ್ ಸಂಘಟಿಸಲಾಯಿತು. ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಯಾರ ಫೋನ್ ಮತ್ತು ಕಂಪ್ಯೂಟರ್ ಅನ್ನು ಟ್ಯಾಪ್ ಮಾಡುವ ಅಧಿಕಾರ ದೆಹಲಿ ಪೊಲೀಸ್ ಆಯುಕ್ತರಿಗೆ ನೀಡಲಾಗಿದೆ.

    MORE
    GALLERIES

  • 1414

    ಸರ್ಕಾರವೇ ತಿಳಿಸಿರುವ ವಿಷಯ: ಈ 10 ಏಜೆನ್ಸಿಗಳು ನಿಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡಬಹುದು

    ಈ ಸಂಸ್ಥೆಗಳ ಮೂಲಕ ಅಗತ್ಯಬಿದ್ದರೆ ಸರ್ಕಾರ ಜನರ ಕರೆಗಳನ್ನು ಮತ್ತು ಮಾಹಿತಿಗಳನ್ನು ಸಂಗಹಿಸಬಹುದಾಗಿದೆ.

    MORE
    GALLERIES