Earthquake: ಭಯಾನಕ ಭೂಕಂಪಕ್ಕೆ ಬೆಚ್ಚಿಬಿದ್ದ ದೆಹಲಿ! ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಬಂದು ಜೀವ ಉಳಿಸಿಕೊಂಡ ಜನರು
ನವದೆಹಲಿ: ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ ಭಯಾನಕ ಭೂಕಂಪದ ಒಂದೊಂದು ದೃಶ್ಯಗಳು ಜನರ ಕಣ್ಣಿಂದ ಇನ್ನೂ ಮರಮಾಚಿಲ್ಲ. ಟರ್ಕಿಗೆ ಆದ ಆಘಾತಕ್ಕೆ ಮರುಗಿದ ಜನ ‘ದೇವ್ರೇ ನಮ್ಮ ಊರಲ್ಲಿ ಇಂತಹ ಪ್ರಕೃತಿ ವಿಕೋಪ ನಡೆಯದಿರಲಪ್ಪಾ’ ಎಂದು ಪ್ರಾರ್ಥನೆಯನ್ನೂ ಮಾಡಿದ್ದರು. ದೇವರು ಅನ್ನೋದು ಇದ್ದರೆ ಆ ಪ್ರಾರ್ಥನೆ ಭಗವಂತನಿಗೆ ತಲುಪಿದ್ಯೋ ಇಲ್ವೋ ಗೊತ್ತಿಲ್ಲ, ಆದರೆ ಭಾರತದಲ್ಲಂತೂ ಯುಗಾದಿ ಸಂಭ್ರಮದಲ್ಲಿದ್ದ ಜನರಿಗೆ ಭೂಕಂಪ ಆತಂಕದ ಕರಿಛಾಯೆ ಮೂಡಿಸಿದೆ.
ಹೌದು.. ಉತ್ತರ ಭಾರತ ಮತ್ತು ನೆರೆಯ ಪಾಕಿಸ್ತಾನದಲ್ಲಿ ನಿನ್ನೆ (ಮಂಗಳವಾರ) ರಾತ್ರಿ ಸಂಭವಿಸಿದ 6.5 ತೀವ್ರತೆಯ ಭೂಕಂಪವು ದೆಹಲಿ ಸೇರಿದಂತೆ ಭಾರತದ ಹಲವಾರು ನಗರಗಳ ನಿವಾಸಿಗಳು ಉಟ್ಟ ಬಟ್ಟೆಯಲ್ಲೇ ತಮ್ಮ ಮನೆಯನ್ನು ಬಿಟ್ಟು ಹೊರಬರುವಂತೆ ಮಾಡಿದೆ.
2/ 7
ದೆಹಲಿ, ನೋಯ್ಡಾ, ಗಾಜಿಯಾಬಾದ್ ಸೇರಿದಂತೆ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಇದರ ತೀವ್ರತೆಗೆ ಭೀತಿಗೊಳಗಾದ ಜನರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಕಂಬಳಿಯಲ್ಲಿ ಹೊದ್ದು, ಮನೆ ಬಿಟ್ಟು ಬೀದಿಗೆ ಬಂದು ನಿಂತ ದೃಶ್ಯಗಳು ಮನಕಲಕುವಂತಿತ್ತು.
3/ 7
ಈ ಭೂಕಂಪನದ ಕೇಂದ್ರ ಬಿಂದುವನ್ನು ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಗುರುತಿಸಲಾಗಿದ್ದು, ಇದು ಪಾಕಿಸ್ತಾನ ಮತ್ತು ತಜಕಿಸ್ತಾನ್ ಗಡಿಯ ಸಮೀಪ ಇರುವ ಅಫ್ಘಾನಿಸ್ತಾನದ ಜುರ್ಮ್ ಪಟ್ಟಣದ ದಕ್ಷಿಣ-ಆಗ್ನೇಯಕ್ಕೆ 40 ಕಿಲೋಮೀಟರ್ ದೂರದಲ್ಲಿದೆ.
4/ 7
ಸುಮಾರು ಎರಡು ನಿಮಿಷಗಳ ಕಾಲ ಸಂಭವಿಸಿದ ಭೂಕಂಪನವು ಸಂತ್ರಸ್ತ ಜನರನ್ನು ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ ಭೂಕಂಪದ ಭಯಾನಕ ದೃಶ್ಯಗಳನ್ನು ನೆನೆಯುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.
5/ 7
ನೂರಾರು ಜನ ನೆಟ್ಟಿಗರು ಭೂಕಂಪದ ಸಮಯದಲ್ಲಿ ತಮ್ಮ ಮನೆಯ ಸೀಲಿಂಗ್ ಫ್ಯಾನ್‌ಗಳು ಮತ್ತು ಲೈಟ್ ಫಿಕ್ಚರ್‌ಗಳು ಅಲುಗಾಡುತ್ತಿರುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
6/ 7
ಇನ್ನು ಕಾಶ್ಮೀರ ಮತ್ತು ಜೈಪುರದಂತಹ ರಾಜ್ಯಗಳಲ್ಲೂ ಭೂಕಂಪದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಇತ್ತ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭೂಕಂಪದ ತೀವ್ರತೆಗೆ ಭಯಪಟ್ಟು ಏನು ನಡೆಯುತ್ತಿದೆ ಅನ್ನೋದು ತಿಳಿಯದೆ ಕ್ಯಾಂಪಸ್‌ನಿಂದ ಹೊರಬಂದು ಆತಂಕ ವ್ಯಕ್ತಪಡಿದ್ದಾರೆ.
7/ 7
ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರದಲ್ಲಿಯು ಭೂಕಂಪ ಸಂಭವಿಸಿರುವ ಬಗ್ಗೆ ವರದಿ ಮಾಡಿದೆ.
First published:
17