ರೈಲು ನಿಲ್ದಾಣದಲ್ಲಿ ನಡೆದ ಅಚಾತುರ್ಯ ಘಟನೆಯನ್ನು ದೃಢಪಡಿಸಿದ ಡಣಾಪುರ ಡಿಆರ್‌ಎಂ ಕಚೇರಿಯ ಅಧಿಕೃತ ವಕ್ತಾರ ಪ್ರಭಾತ್ ಕುಮಾರ್, ಈ ಘಟನೆಯ ತನಿಖೆ ಕೈಗೆತ್ತಿಕೊಂಡಿದ್ದೇವೆ. ಜೊತೆ ಆ ಕಂಪನಿ ಜೊತೆಗಿನ ಒಪ್ಪಂದ ರದ್ದತಿ ಪ್ರಕ್ರಿಯೆ ಆರಂಭಿಸಲಾಗಿದೆ. ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಹೇಳಿದ್ದಾರೆ.