ಅಮೆರಿಕಕ್ಕೆ ಹೊರಟ್ಟಿದ್ದ ಏರ್ ಇಂಡಿಯಾ ಪ್ರಯಾಣಿಕ ಸಾವು; ಮಾರ್ಗ ಮಧ್ಯೆಯೇ ದೆಹಲಿಗೆ ಹಿಂದಿರುಗಿದ ವಿಮಾನ
ಅಮೆರಿಕಕ್ಕೆ (US Flight) ಹೊರಟಿದ್ದ ಪ್ರಯಾಣಿಕ ಸಾವನ್ನಪ್ಪಿದ ಪರಿಣಾಮ ಮಾರ್ಗ ಮಧ್ಯೆ ಪ್ರಯಾಣವನ್ನು ಮೊಟಕುಗೊಳಿಸಿದ ಏರ್ ಇಂಡಿಯಾ (Air India) ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ. ವೈದ್ಯಕೀಯ ತುರ್ತು ಪರಿಸ್ಥಿತಿ (Medical Emergency Landing) ಅಡಿ ವಿಮಾನವನ್ನು ತಕ್ಷಣಕ್ಕೆ ನಿಲ್ಲಿಸಲಾಗಿದೆ.
AI-105 ಏರ್ ಇಂಡಿಯಾ ದೆಹಲಿ- ನ್ಯೂ ಯಾರ್ಕ್ ವಿಮಾನ ಹಾರಾಟ ನಡೆಸಿದ ಮೂರು ಗಂಟೆಗಳ ಬಳಿಕ ವಿಮಾನ ಮತ್ತೆ ದೆಹಲಿ ನಿಲ್ದಾಣಕ್ಕೆ ಹಿಂದಿರುಗಿದೆ. ಮಾರ್ಗ ಮಧ್ಯೆ ಪುರಷ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
2/ 5
ಸಾವನ್ನಪ್ಪಿದ ವ್ಯಕ್ತಿ ಅಮೆರಿಕ ಪ್ರಯಾಣಿಕರಾಗಿದ್ದು, ಅವರ ಹೆಂಡತಿ ಜೊತೆ ಪ್ರಯಾಣ ಬೆಳೆಸಿದ್ದರು. ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದ್ದಾರೆ.
3/ 5
ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನಲೆ ತಕ್ಷಣಕ್ಕೆ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದೆ, ತಕ್ಷಣಕ್ಕೆ ವೈದ್ಯರ ಸಂಪರ್ಕ ನಡೆಸಲಾಗಿದ್ದು, ಅವರು ಸಾವನ್ನಪ್ಪಿರುವ ಬಗ್ಗೆ ದೃಢೀಕರಿಸಿದ್ದಾರೆ.
4/ 5
ಇನ್ನು ಈ ತುರ್ತು ಭೂ ಸ್ಪರ್ಶದಿಂದ ತೊಂದರೆಗೆ ಒಳಗಾದ ಪ್ರಯಾಣಿಕರಿಗೆ ಏರ್ ಇಂಡಿಯಾದ ಮತ್ತೊಂದು ವಿಮಾನದಲ್ಲಿ ಹಾರಾಟದ ವ್ಯವಸ್ಥೆ ಮಾಡಲಾಗಿದೆ. ಈ ಪ್ರಕರಣ ಕುರಿತು ವಿಮಾನ ನಿಲ್ದಾಣದ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
5/ 5
ಇತರೆ ವ್ಯವಸ್ಥೆ ಮಾಡಿದ ಬಳಿಕ ಉಳಿದ ಪ್ರಯಾಣಿಕರು ಮತ್ತೊಂದು ವಿಮಾನದಲ್ಲಿ ಸುರಕ್ಷಿತ ಪ್ರಯಾಣ ನಡೆಸಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ