ವಿಶೇಷವೆಂದರೆ ಸೂರ್ಯಾಸ್ತದ ನಂತರ ದೇಶಕ್ಕೆ ಭೇಟಿ ನೀಡುವ ಯಾವುದೇ ನಾಯಕರಿಗೆ ಪಪುವಾ ನ್ಯೂಗಿನಿಯಾ ಸಾಮಾನ್ಯವಾಗಿ ವಿಧ್ಯುಕ್ತ ಸ್ವಾಗತವನ್ನು ನೀಡುವುದಿಲ್ಲ, ಆದರೆ ಮೋದಿ ಅವರಿಗೆ ವಿನಾಯಿತಿ ನೀಡಿರುವು ವಿಶೇಷವಾಗಿತ್ತು. ಮೋದಿ ಸ್ಥಳೀಯ ಕಾಲಮಾನ ರಾತ್ರಿ 10 ಗಂಟೆಯ ನಂತರ ಪೆಸಿಫಿಕ್ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದರು. ಈ ರಾಷ್ಟ್ರಕ್ಕೆ ಬೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಪ್ರಧಾನಿ ಮೋದಿ ಅವರಾಗಿದ್ದಾರೆ.
ಇನ್ನು ಮೋದಿ ಅವರನ್ನ ಭೇಟಿ ಮಾಡಿದ ನಂತರ ಜೇಮ್ಸ್ ಮರಾಪೆ ಅವರು ಕಾಲಿಗೆ ಬೀಳುತ್ತಿದ್ದಂತೆ ಮೋದಿ ತಡೆಯಲು ಪ್ರಯತ್ನಿಸಿದರಾದರೂ ಮರಾಪೆ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ನಂತರ ಇಬ್ಬರು ನಾಯಕರು ಅಪ್ಪುಗೆ ಮೂಲಕ ಶುಭಾಶಯ ಕೋರಿದರು. ಬಳಿಕ ಪ್ರಧಾನಿ ಮೋದಿಯನ್ನು ಇತರ ಅಧಿಕಾರಿಗಳಿಗೆ ಪರಿಚಯಿಸಲಾಯಿತು. ಭಾರತೀಯ ಡಯಾಸ್ಪೊರಾ ಸದಸ್ಯರು ಅವರನ್ನು ಬಹಳ ಉತ್ಸಾಹದಿಂದ ಸ್ವಾಗತಿಸಿದರು.
ಪಪುವಾ ನ್ಯೂ ಗಿನಿಯಾ ತಲುಪಿದ್ದೇನೆ. ವಿಮಾನ ನಿಲ್ದಾಣಕ್ಕೆ ಬಂದು ನನ್ನನ್ನು ಸ್ವಾಗತಿಸಿದ್ದಕ್ಕಾಗಿ ನಾನು ಪ್ರಧಾನಿ ಜೇಮ್ಸ್ ಮರಪೆ ಅವರಿಗೆ ಕೃತಜ್ಞನಾಗಿದ್ದೇನೆ. ಇದು ನಾನು ನೆನಪಿನಲ್ಲಿಟ್ಟುಕೊಳ್ಳಬಹುದಾದದ ಬಹಳ ವಿಶೇಷ ಗೆಶ್ಚರ್ ಆಗಿದೆ. ನನ್ನ ಭೇಟಿಯ ಸಮಯದಲ್ಲಿ ಈ ಮಹಾನ್ ರಾಷ್ಟ್ರದೊಂದಿಗೆ ಭಾರತದ ಸಂಬಂಧವನ್ನು ವೃದ್ಧಿಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.