ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!

ನಿಮ್ಮ ಆಧಾರ್​ ಸಂಖ್ಯೆ ಪ್ಯಾನ್​ನೊಂದಿಗೆ ಲಿಂಕ್ ಆಗಿದೆಯಾ ಎಂದು ತಿಳಿಯಲು ಮೇಲ್ಭಾಗದಲ್ಲಿ ಕ್ಲಿಕ್ ಇಯರ್ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ ನಿಮ್ಮ ಆಧಾರ್​-ಪ್ಯಾನ್ ಲಿಂಕ್ ಆಗಿದೆಯೇ ಎಂಬುದುನ್ನು ಪರಿಶೀಲಿಸಿಕೊಳ್ಳಬಹುದು.

 • News18
 • |
First published:

 • 15

  ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!

  ನಿಮ್ಮ ಆಧಾರ್​ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​ ಸಂಖ್ಯೆಯನ್ನು ಪರಸ್ಪರ ಲಿಂಕ್ ಮಾಡಿದ್ದೀರಾ? ಇಲ್ಲದಿದ್ದರೆ ನಿಮ್ಮ ಪ್ಯಾನ್​ ಕಾರ್ಡ್​ ಅಮಾನ್ಯವಾಗಲಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AA ಅಡಿಯಲ್ಲಿ ಆಧಾರ್​ನೊಂದಿಗೆ ಜೋಡಣೆಯಾಗದ ಪ್ಯಾನ್​ ಸಂಖ್ಯೆಯನ್ನು ಅಮಾನ್ಯ ಎಂದು ಪರಿಗಣಿಸಲಾಗುತ್ತದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ ತಿಳಿಸಿದೆ.

  MORE
  GALLERIES

 • 25

  ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!

  ಈ ಹಿಂದೆ ಆಧಾರ್​ ಮತ್ತು ಪ್ಯಾನ್​ ಸಂಖ್ಯೆಯನ್ನು ಜೋಡಣೆ ಮಾಡಲು ಜೂನ್​ 30, 2018 ರವರೆಗೆ ಸಮಯ ನೀಡಲಾಗಿತ್ತು. ಆದರೆ ಮಾಹಿತಿಯ ಕೊರತೆಯಿಂದ ಹೆಚ್ಚಿನವರು ಲಿಂಕ್  ಮಾಡಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಆಧಾರ್​ ಮತ್ತು ಪ್ಯಾನ್​ ಸಂಖ್ಯೆಯನ್ನು ಜೋಡಿಸಲು ಗಡುವು ನೀಡಲಾಗಿದ್ದು, ಮಾರ್ಚ್​ 31 ರ ಒಳಗೆ ಲಿಂಕ್​ ಮಾಡಿಕೊಳ್ಳುವಂತೆ  ಸೂಚಿಸಲಾಗಿದೆ.  ಇದರೊಳಗೆ ಪ್ಯಾನ್​ ಕಾರ್ಡ್​ ಅನ್ನು ಆಧಾರ್​ ಕಾರ್ಡ್​ ಸಂಖ್ಯೆಯೊಂದಿಗೆ ಲಿಂಕ್​ ಮಾಡಿಕೊಳ್ಳದಿದ್ದರೆ ಆ ಪ್ಯಾನ್​ ಕಾರ್ಡ್​ ಅಮಾನ್ಯವಾಗಲಿದೆ.

  MORE
  GALLERIES

 • 35

  ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!

  ಪ್ಯಾನ್​ ಕಾರ್ಡ್​ ಆಧಾರ್​ನೊಂದಿಗೆ ಲಿಂಕ್​ ಆಗದಿದ್ದರೆ, ಆನ್​ಲೈನ್​ನಲ್ಲಿ ITR ಫೈಲ್​ ಸಲ್ಲಿಸಲಾಗುವುದಿಲ್ಲ.ಇದರಿಂದ ತೆರಿಗೆ ಮರುಪಾವತಿ ಸಮಸ್ಯೆ ಉಂಟಾಗಲಿದೆ. ಹಾಗೆಯೇ ಪ್ಯಾನ್​ ಕಾರ್ಡ್​ ಇನ್​ವಾಲಿಡ್​ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

  MORE
  GALLERIES

 • 45

  ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!

  ಲಿಂಕ್ ಮಾಡಿಕೊಳ್ಳುವುದು ಹೇಗೆ: ಪ್ಯಾನ್​ ಕಾರ್ಡ್​ ಮತ್ತು ಆಧಾರ್​ ಕಾರ್ಡ್​ ಸಂಖ್ಯೆಯನ್ನು ಪರಸ್ಪರ ಲಿಂಕ್ ಮಾಡಿಕೊಳ್ಳಲು www.incometaxindiaefiling.gov.in ವೆಬ್​ಸೈಟ್​ಗೆ ಭೇಟಿ ನೀಡಿ. ಅಲ್ಲಿ ಎಡಭಾಗದಲ್ಲಿ ಆಧಾರ್ ಲಿಂಕ್​ ಎಂಬ ಕೆಂಪು ಬಣ್ಣದ ಆಯ್ಕೆ ನೀಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಆಧಾರ್​ ಸಂಖ್ಯೆ ಮತ್ತು ಪ್ಯಾನ್​ ಸಂಖ್ಯೆಯನ್ನು ನಮೂದಿಸಲು ಪೇಜ್​ ತೆರೆದುಕೊಳ್ಳುತ್ತದೆ. ಇಲ್ಲಿ ಆಧಾರ್-ಪ್ಯಾನ್​ ಸಂಖ್ಯೆಯನ್ನು ನಮೂದಿಸಿ, ಆಧಾರ್​ನಲ್ಲಿ ನೀವು ನೀಡಿರುವ ಹೆಸರನ್ನು ಬರೆಯಬೇಕು. ಬಳಿಕ ಕೆಳಗೆ ನೀಡಲಾದ ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಿ. ನಂತರ  ಲಿಂಕ್​ ಆಧಾರ್ ಕಾರ್ಡ್​ ಬಟನ್​ ಒತ್ತಿ. ಅದೇ ರೀತಿ ನಿಮ್ಮ ಆಧಾರ್​ ಸಂಖ್ಯೆ ಪ್ಯಾನ್​ನೊಂದಿಗೆ ಲಿಂಕ್ ಆಗಿದೆಯಾ ಎಂದು ತಿಳಿಯಲು ಮೇಲ್ಭಾಗದಲ್ಲಿ ಕ್ಲಿಕ್ ಇಯರ್ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ಕಿಸಿ ನಿಮ್ಮ ಆಧಾರ್​-ಪ್ಯಾನ್ ಲಿಂಕ್ ಆಗಿದೆಯೇ ಎಂಬುದುನ್ನು ಪರಿಶೀಲಿಸಿಕೊಳ್ಳಬಹುದು.

  MORE
  GALLERIES

 • 55

  ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ? ಇಲ್ಲದಿದ್ರೆ ತೊಂದರೆ ಗ್ಯಾರೆಂಟಿ!

  ಮೊಬೈಲ್ ಮೂಲಕ ಕೂಡ ಲಿಂಕ್ ಮಾಡಿ: ಆಧಾರ್​ ಸಂಖ್ಯೆಯನ್ನು ಪ್ಯಾನ್​ ಸಂಖ್ಯೆಯೊಂದಿಗೆ ಎಸ್​ಎಂಎಸ್​ ಮಾಡುವ ಮೂಲಕ ಲಿಂಕ್ ಮಾಡಬಹುದು. ಆದಾಯ ತೆರಿಗೆ ಇಲಾಖೆಯ 567678 ಅಥವಾ 56161 ನಂಬರ್​ಗೆ ಮೆಸೇಜ್​ ಕಳುಹಿಸುವ ಮೂಲಕ ಆಧಾರ್​-ಪ್ಯಾನ್​ ಅನ್ನು ಜೋಡಣೆ ಮಾಡಿಕೊಳ್ಳಬಹುದು.

  MORE
  GALLERIES