Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

ಕರಾಚಿ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿರುವ ಹಿಂದೂ ಧರ್ಮದ ಹಲವಾರು ಮಂದಿ (ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹಗಳ ಬೆದರಿಕೆ) ಬಲವಂತದ ಮತಾಂತರದ ವಿರುದ್ಧ ಗಮನ ಸೆಳೆಯಲು ಪ್ರತಿಭಟನಾ ಮೆರವಣಿಗೆ ಆಯೋಜಿಸಿದರು.

First published:

  • 17

    Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

    ಹಿಂದೂ ಸಂಘಟನೆಯಾದ ಪಾಕಿಸ್ತಾನ್ ದಾರಾವರ್ ಇತ್ತೆಹಾದ್ ಮುಂದಾಳತ್ವದಲ್ಲಿ ಪಾಕಿಸ್ತಾನದ ಪ್ರಮುಖ ನಗರವಾಗಿರುವ ಕರಾಚಿ ಪ್ರೆಸ್ ಕ್ಲಬ್‌ನ ಹೊರಗೆ ಮತ್ತು ಸಿಂಧ್ ಅಸೆಂಬ್ಲಿ ಕಟ್ಟಡದ ಪ್ರವೇಶದ್ವಾರದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

    MORE
    GALLERIES

  • 27

    Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

    ಪ್ರತಿಭಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರು ನಿಂತಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಧರಣಿ ಶಾಂತಿಯುತವಾಗಿ ನಡೆಯಿತು.

    MORE
    GALLERIES

  • 37

    Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

    ಪ್ರತಿಭಟನಾಕಾರರು ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಬಲವಂತದ ಮತಾಂತರದ ವಿರುದ್ಧ ಸ್ಥಗಿತಗೊಂಡಿರುವ ಮಸೂದೆಯನ್ನು ಅಂಗೀಕರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಫಲಕಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು ಘೋಷಣೆ ಕೂಗಿದರು.

    MORE
    GALLERIES

  • 47

    Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

    ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಯುವತಿಯರನ್ನು, 12 ಮತ್ತು 13 ವರ್ಷ ವಯಸ್ಸಿನ ಹುಡುಗಿಯರನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತದೆ. ನಂತರ ವಯಸ್ಸಾದ ಮುಸ್ಲಿಂ ಪುರುಷರೊಂದಿಗೆ ಮದುವೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 57

    Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

    ಹೀಗಾಗಿ ನಾವು ಸಿಂಧ್ ಪ್ರದೇಶದಲ್ಲಿ ಹಿಂದೂಗಳು ಎದುರಿಸುತ್ತಿರುವ ಮತಾಂತರದಂತಹ ದೊಡ್ಡ ಸಮಸ್ಯೆಯನ್ನು ಹೈಲೈಟ್ ಮಾಡಿ ಅದರ ವಿರುದ್ಧ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರು ಹೇಳಿದ್ದಾರೆ.

    MORE
    GALLERIES

  • 67

    Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

    ಇತ್ತೀಚಿನ ಕೆಲ ಸಮಯದಿಂದ ಸಿಂಧ್‌ನಲ್ಲಿ ಮತಾಂತರ, ಹಿಂದೂ ಹೆಣ್ಮಕ್ಕಳ ಮೇಲೆ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಸಂಬಂಧ ಕೋರ್ಟ್‌ ಮೆಟ್ಟಿಲೇರಿದ್ದರೂ ತ್ವರಿತಗತಿಯಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ ಎನ್ನಲಾಗಿದೆ.

    MORE
    GALLERIES

  • 77

    Protest Against Conversion: ಬಲವಂತದ ಮತಾಂತರ, ಹೆಣ್ಮಕ್ಕಳ ದೌರ್ಜನ್ಯದ ವಿರುದ್ಧ ಪಾಕಿಸ್ತಾನದಲ್ಲಿ ಬೀದಿಗಿಳಿದ ಹಿಂದೂಗಳು!

    2019ರಲ್ಲಿ, ಸಿಂಧ್ ಪ್ರಾಂತ್ಯದ ವಿವಿಧ ಜಿಲ್ಲೆಗಳಲ್ಲಿ ಹಿಂದೂ ಹುಡುಗಿಯರ ಅಪಹರಣ ಮತ್ತು ಬಲವಂತದ ಮತಾಂತರದ ವಿರುದ್ಧ ಮಸೂದೆಯನ್ನು ಸಿಂಧ್ ಅಸೆಂಬ್ಲಿಯಲ್ಲಿ ಮಂಡಿಸಲಾಗಿತ್ತು. ಆದರೆ, ಬಲವಂತದ ಧಾರ್ಮಿಕ ಮತಾಂತರವನ್ನು ಅಪರಾಧವೆಂದು ಪರಿಗಣಿಸುವ ಮಸೂದೆಯನ್ನು ನಂತರ ವಿಧಾನಸಭೆಯಲ್ಲಿ ತಿರಸ್ಕರಿಸಲಾಗಿತ್ತು.

    MORE
    GALLERIES