OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದೊಂದಿಗೆ ನಾವು ಹೊಸ ಜೀವನವನ್ನು ಆರಂಭಿಸಲಿದ್ದೇವೆ. ಪ್ರಧಾನಿ ನಮಗೆ ನೀಡಿದ ಆತಿಥ್ಯವನ್ನು ನಾವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮೋದಿಯವರ ಮಹಿಳಾ ಸಬಲೀಕರಣದ ದೃಷ್ಟಿಯಿಂದ ನಮ್ಮ ತಾಯಿ ಸ್ಫೂರ್ತಿ ಪಡೆದಿದ್ದಾರೆ. ಅವರು ಕೂಡ ಇದು ಮೋದಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷಪಟ್ಟಿದ್ದಾರೆ. ನಿಮ್ಮ ಅಮೂಲ್ಯ ಸಮಯವನ್ನು ನಮಗಾಗಿ ಮೀಸಲಿಟ್ಟಿದ್ದಕ್ಕಾಗಿ ಹಾಗೂ ನಮಗೆ ಶುಭ ಹಾರೈಸಿದ್ದಕ್ಕಾಗಿ ಧನ್ಯವಾದಗಳು ಎಂದು ರಿತೇಶ್​ ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

First published:

  • 17

    OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

    ದೇಶದ ಪ್ರಮುಖ ಲಾಡ್ಜಿಂಗ್ ಸಂಸ್ಥೆಯಾಗಿರುವ ಓಯೋ ಸಂಸ್ಥಾಪಕ ರಿತೇಶ್​ ಅಗರ್ವಾಲ್​ ತಮ್ಮ ವಿವಾಹಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ದೇಶದ ಲಾಡ್ಜಿಂಗ್ ದೈತ್ಯ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಫೆಬ್ರವರಿ 18 ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ವಿವಾಹಕ್ಕೆ ಆಹ್ವಾನ ನೀಡಿದ್ದಾರೆ.

    MORE
    GALLERIES

  • 27

    OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

    ಅಗರ್ವಾಲ್ ಮೋದಿಯವರನ್ನು ಭೇಟಿ ಮಾಡಿ ವಿವಾಹಕ್ಕೆ ಆಹ್ವಾನ ನೀಡಿರುವ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ತಾಯಿ ಹಾಗೂ ಭಾವಿ ಪತ್ನಿಯನ್ನು ಕೂಡ ಪ್ರಧಾನಿ ಮಂತ್ರಿಗಳನ್ನು ಆಹ್ವಾನಿಸಲು ಕರೆದುಕೊಂಡು ಹೋಗಿರುವುದನ್ನು ಚಿತ್ರದಲ್ಲಿ ಕಾಣಬಹುದುದು.

    MORE
    GALLERIES

  • 37

    OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

    ಪ್ರಧಾನ ಮಂತ್ರಿ ಮೋದಿ ಅವರ ಮನೆಗೆ ತೆರಳಿರುವ ರಿತೇಶ್​ ಹಾಗೂ ಭಾವಿ ಪತ್ನಿ ಲಗ್ನ ಪತ್ರಿಕೆಯನ್ನು ಮೋದಿಯವರಿಗೆ ನೀಡಿದ್ದಾರೆ. ಮೋದಿಯವರಿಗೆ ಶಾಲು ಹೊದಿಸಿ ನಂತರ ಅವರಿಂದ ಆಶೀರ್ವಾದ ಪಡೆದುಕೊಂಡಿದ್ದಾರೆ.

    MORE
    GALLERIES

  • 47

    OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

    ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದೊಂದಿಗೆ ನಾವು ಹೊಸ ಜೀವನವನ್ನು ಆರಂಭಿಸಲಿದ್ದೇವೆ. ಪ್ರಧಾನಿ ನಮಗೆ ನೀಡಿದ ಆತಿಥ್ಯವನ್ನು ನಾವು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮೋದಿಯವರ ಮಹಿಳಾ ಸಬಲೀಕರಣದ ದೃಷ್ಟಿಯಿಂದ ನಮ್ಮ ತಾಯಿ ಸ್ಫೂರ್ತಿ ಪಡೆದಿದ್ದಾರೆ. ಅವರು ಕೂಡ ಇದು ಮೋದಿಯವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಸಂತೋಷಪಟ್ಟಿದ್ದಾರೆ. ನಿಮ್ಮ ಅಮೂಲ್ಯ ಸಮಯವನ್ನು ನಮಗಾಗಿ ಮೀಸಲಿಟ್ಟಿದ್ದಕ್ಕಾಗಿ ಹಾಗೂ ನಮಗೆ ಶುಭ ಹಾರೈಸಿದ್ದಕ್ಕಾಗಿ ಧನ್ಯವಾದಗಳು ಎಂದು ರಿತೇಶ್​ ತಮ್ಮ ಇನ್​ಸ್ಟಾಗ್ರಾಮ್​ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

    MORE
    GALLERIES

  • 57

    OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

    ಅಗರ್ವಾಲ್  ಮಾರ್ಚ್‌ 5ರಂದು ವಿವಾಹವಾಗಲಿದ್ದಾರೆ. ವಿವಾಹ ಸಮಾರಂಭದ ನಂತರ ದೆಹಲಿಯಲ್ಲಿ ಅದ್ಧೂರಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವು ಗಣ್ಯರನ್ನು ಆಹ್ವಾನಿಸಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 67

    OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

    ರಿತೇಶ್ ಅಗರ್ವಾಲ್ ಅವರು 2013 ರಲ್ಲಿ OYO ರೂಮ್‌ ಲಾಡ್ಜ್​ ಸಂಸ್ಥೆಯನ್ನ ಸ್ಥಾಪಿಸಿದ್ದರು. ಅವರು ಮಹತ್ವಾಕಾಂಕ್ಷಿ ಉದ್ಯಮಿಗಳಿಗಾಗಿ ನೆರವು ನೀಡುವ ಜರ್ಮನ್-ಅಮೆರಿಕನ್​ ಸಂಸ್ಥೆಯಿಂದ ಒಂದು ಲಕ್ಷ ಡಾಲರ್​ ಅನುದಾನ ಪಡೆದು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು.

    MORE
    GALLERIES

  • 77

    OYO Founder Meet Modi: ಪ್ರಧಾನಿ ಮೋದಿಯವರನ್ನು ವಿವಾಹಕ್ಕೆ ಆಹ್ವಾನಿಸಿದ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್

    ಓಯೋ ಬಹುರಾಷ್ಟ್ರೀಯ ಆತಿಥ್ಯ ಸರಪಳಿಯಾಗಿ ಬೆಳೆದಿದೆ, 80 ದೇಶಗಳಲ್ಲಿ 43,000 ಬ್ರಾಂಚ್​ಗಳನ್ನು ಹೊಂದಿದೆ. 2023ರ ಆರ್ಥಿಕ ವರ್ಷದಲ್ಲಿ ಕಂಪನಿಯು $751 ಮಿಲಿಯನ್ ಆದಾಯವನ್ನು ನಿರೀಕ್ಷಿಸುತ್ತಿದೆ ಎಂದು ಅಗರ್ವಾಲ್ ಕಳೆದ ತಿಂಗಳು ತಿಳಿಸಿದ್ದರು.

    MORE
    GALLERIES