Operation Kaveri: ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿ, ಸ್ಥಳಾಂತರಿರಗೊಂಡಿದ್ದ ಎರಡನೇ ತಂಡದ ಭಾರತೀಯರು ಗುರುವಾರ ಮಧ್ಯಾಹ್ನ ಮುಂಬೈ ತಲುಪಿದ್ದಾರೆ. ಇಂದು ಮುಂಜಾನೆ ಜಿದ್ದಾದಿಂದ ಟೇಕಾಫ್ ಆದ ಭಾರತೀಯ ವಾಯುಪಡೆಯ ವಿಮಾನದ ಮೂಲಕ 246 ಭಾರತೀಯರನ್ನು ಆಪರೇಷನ್ ಕಾವೇರಿ ಅಡಿಯಲ್ಲಿ ಮರಳಿ ಕರೆತರಲಾಗಿದೆ.

First published:

  • 17

    MORE
    GALLERIES

  • 27

    Operation Kaveri: ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

    ಸುದ್ದಿ ಸಂಸ್ಥೆ ANI ವರದಿಯ ಪ್ರಕಾರ, ಸುಡಾನ್‌ನಿಂದ 246 ಭಾರತೀಯರನ್ನು ಹೊತ್ತ ಮತ್ತೊಂದು ವಿಮಾನ ಮುಂಬೈ ತಲುಪಿದೆ. ನಿನ್ನೆ 360 ಭಾರತೀಯರ ಮೊದಲ ಬ್ಯಾಚ್ ನವದೆಹಲಿ ತಲುಪಿತ್ತು. ಮತ್ತೊಂದು ಆಪರೇಷನ್ ಕಾವೇರಿ ವಿಮಾನ ಮುಂಬೈಗೆ ಆಗಮಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 37

    Operation Kaveri: ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

    "ಆಪರೇಷನ್ ಕಾವೇರಿ" ಎಂಬುದು ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸರ್ಕಾರವು ಪ್ರಾರಂಭಿಸಿದ ರಕ್ಷಣಾ ಕಾರ್ಯಾಚರಣೆಯಾಗಿದೆ. ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೈನಿಕ ಗುಂಪುಗಳು ಘರ್ಷಣೆ ನಡೆಯುತ್ತಿದ್ದು, ಕರ್ನಾಟಕದವರೂ ಸೇರಿದಂತ ದೇಶದ ಸಾವಿರಾರು ಮಂದಿ ಸಿಲುಕಿದ್ದರು.

    MORE
    GALLERIES

  • 47

    Operation Kaveri: ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

    246 ಮಂದಿ ಭಾರತೀಯರಿದ್ದ ಯುದ್ಧ ವಿಮಾನ ಗುರುವಾರ ಬೆಳಿಗ್ಗೆ 11 ಗಂಟೆಗೆ ಜಿದ್ದಾದಿಂದ ಹೊರಟಿತ್ತು. ಮಧ್ಯಾಹ್ಮ 3.30ರ ವೇಳೆಗೆ ಮುಂಬೈ ತಲುಪಿದೆ ಎಂದು ಅಧಿಕಾರಿಯೊಬ್ಬರು ಎಎನ್​ಐಗೆ ತಿಳಿಸಿದ್ದಾರೆ.

    MORE
    GALLERIES

  • 57

    Operation Kaveri: ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

    ಸುಡಾನ್‌ನಲ್ಲಿ ಯುಎಸ್ ಮತ್ತು ಸೌದಿ ಅರೇಬಿಯಾ ಮಧ್ಯಸ್ಥಿಕೆಯಲ್ಲಿ 72 ಗಂಟೆಗಳ ಕದನ ವಿರಾಮ ಘೋಷಿಸಲಾಗಿದೆ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಸುಡಾನ್‌ನಿಂದ ಸ್ಥಳಾಂತರಿಸುವಲ್ಲಿ ನಿರತವಾಗಿವೆ. ಭಾರತೀಯರನ್ನು ಆಪರೇಷನ್​ ಕಾವೇರಿ ಕಾರ್ಯಾಚರಣೆ ಅಡಿ ಪೋರ್ಟ್​ ಸುಡಾನ್​ಗೆ ಬಸ್ಸುಗಳ ಮೂಲಕ ಕರೆತಂದು, ಅಲ್ಲಿಂದ ಸೌದಿ ಅರೇಬಿಯಾದ ಜಿದ್ದಾಗೆ ಯುದ್ದ ವಿಮಾನಗಳ ಮೂಲಕ ಕರೆತಂದು ರಕ್ಷಿಸಲಾಗುತ್ತದೆ.

    MORE
    GALLERIES

  • 67

    Operation Kaveri: ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

    ಸೋಮವಾರ ಆರಂಭಿಸಲಾದ 'ಆಪರೇಷನ್ ಕಾವೇರಿ' ಮಿಷನ್ ಅಡಿಯಲ್ಲಿ ಭಾರತವು ಜಿದ್ದಾದಲ್ಲಿ ಸಾರಿಗೆ ಸೌಲಭ್ಯವನ್ನು ಸ್ಥಾಪಿಸಿದೆ. ಸುಡಾನ್‌ನಿಂದ ಸ್ಥಳಾಂತರಿಸಿದ ನಂತರ ಎಲ್ಲಾ ಭಾರತೀಯರನ್ನು ಸೌದಿ ಅರೇಬಿಯಾಕ್ಕೆ ಕರೆದೊಯ್ಯಲಾಗಿದೆ.

    MORE
    GALLERIES

  • 77

    Operation Kaveri: ಮುಂಬೈ ತಲುಪಿದ ಆಪರೇಷನ್ ಕಾವೇರಿ 2ನೇ ವಿಮಾನ, ಸುಡಾನ್‌ನಿಂದ ತವರಿಗೆ ಮರಳಿದ 246 ಭಾರತೀಯರು

    ಭಾರತೀಯ ವಾಯುಪಡೆಯ (IAF) ಎರಡು ಮಿಲಿಟರಿ ಸಾರಿಗೆ ವಿಮಾನಗಳು ಸುಡಾನ್‌ನಿಂದ 500 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಿದರೆ, ನೌಕಾಪಡೆಯ ಹಡಗು ಸಂಘರ್ಷದಿಂದ ಪೀಡಿತ ಸ್ಥಳದಿಂದ  278 ನಾಗರಿಕರನ್ನು ರಕ್ಷಿಸಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಇದುವರೆಗೆ ಸುಡಾನ್‌ನಿಂದ ಸ್ಥಳಾಂತರಿಸಲ್ಪಟ್ಟ ಒಟ್ಟು ಭಾರತೀಯರ ಸಂಖ್ಯೆ ಸುಮಾರು 530 ಎಂದು ತಿಳಿದುಬಂದಿದೆ.

    MORE
    GALLERIES