Cheetah Cub Dies: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮರಿ ಚೀತಾ ನಿಧನ! 2 ತಿಂಗಳಲ್ಲಿ ನಾಲ್ಕನೇ ಸಾವು
ಮಧ್ಯಪ್ರದೇಶ: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಕರೆತಂದಿದ್ದ ಚೀತಾಗಳ ಪೈಕಿ ಈವರೆಗೆ ಮೂರು ಚೀತಾಗಳು ಸಾವನ್ನಪ್ಪಿದ್ದವು. ಇದೀಗ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಜನಿಸಿದ್ದ ಮರಿ ಚೀತಾ ಸಾವನ್ನಪ್ಪಿದೆ. ಆ ಮೂಲಕ ಎರಡು ತಿಂಗಳ ಅವಧಿಯಲ್ಲಿ ನಾಲ್ಕು ಚೀತಾಗಳು ಸಾವನ್ನಪ್ಪಿದಂತಾಗಿದೆ.
ನಿನ್ನೆ (ಮೇ 23) ಮರಿ ಚಿರತೆ ಸಾವನ್ನಪ್ಪಿದ್ದು, ಕಳೆದ ಮಾರ್ಚ್ ತಿಂಗಳ ಕೊನೆಯ ವಾರ ಜ್ವಾಲಾ ಹೆಸರಿನ ಹೆಣ್ಣು ಚೀತಾ ಭಾರತಕ್ಕೆ ಕರೆತಂದ ಬಳಿಕ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು.
2/ 7
ಈವರೆಗೆ 2 ತಿಂಗಳ ಅವಧಿಯಲ್ಲಿ ಮೂರು ಚೀತಾಗಳು ಸಾವನ್ನಪ್ಪಿದ್ದವು. ಆದರೆ ಇದೇ ಮೊದಲ ಬಾರಿಗೆ ಮರಿ ಚಿರತೆಯೊಂದು ಸಾವನ್ನಪ್ಪಿರೋದು ಅಧಿಕಾರಿಗಳಿಗೆ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.
3/ 7
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸದ್ಯ 17 ವಯಸ್ಕ ಮತ್ತು ಅರೆ ವಯಸ್ಕ ನಮೀಬಿಯನ್ ಮತ್ತು ದಕ್ಷಿಣ ಆಫ್ರಿಕಾದ ಚೀತಾಗಳು ಇವೆ. ಜೊತೆಗೆ ಭಾರತದಲ್ಲೇ ಜನಿಸಿದ ಮೂರು ಮರಿಗಳು ಕೂಡ ಇವೆ.
4/ 7
ಮರಿ ಚಿರತೆ ಸಾವನ್ನಪ್ಪಲು ಕಾರಣ ಏನು ಅನ್ನೋದನ್ನು ತಿಳಿಯಲು ಅರಣ್ಯ ಅಧಿಕಾರಿಗಳು ಮತ್ತು ಕುನೋ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಇನ್ನಷ್ಟೇ ಬರಬೇಕಿದೆ.
5/ 7
ಅಧಿಕಾರಿಗಳು ಹೇಳುವ ಪ್ರಕಾರ ಈ ಮರಿ ಚೀತಾ ನಾಲ್ಕು ಮರಿಗಳ ಪೈಕಿ ಚಿಕ್ಕದಾಗಿದೆ. ಕಡಿಮೆ ಸಕ್ರಿಯ ಮತ್ತು ಆರೋಗ್ಯದಲ್ಲೂ ಅಷ್ಟೇನೂ ಸದೃಢವಾಗಿರಲಿಲ್ಲ. ಕಳೆದ ಕೆಲ ದಿನಗಳಿಂದ ಈ ಮರಿಯನ್ನು ಅಧಿಕಾರಿಗಳು ನಿಗಾದಲ್ಲಿರಿಸಿದ್ದರು. ಪ್ರಾಥಮಿಕ ಸಂಶೋಧನೆಗಳ ಪ್ರಕಾರ ದೌರ್ಬಲ್ಯದಿಂದ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.
6/ 7
ಕೆಲ ದಿನಗಳ ಹಿಂದಷ್ಟೇ ದಕ್ಷಾ ಎಂಬ ಚೀತಾ ಅಸುನೀಗಿತ್ತು. ಅದಕ್ಕೂ ಮೊದಲು ಎರಡು ಚೀತಾ ಸಾವನ್ನಪ್ಪಿತ್ತು. ಇದೀಗ ಮರಿ ಚೀತಾ ಸೇರಿ ಒಟ್ಟು 4 ಚೀತಾಗಳು ಅಸುನೀಗಿದಂತಾಗಿದೆ.
7/ 7
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷೆಯ ದೃಷ್ಟಿಯಿಂದ ನಮೀಬಿಯಾ ಮತ್ತು ದಕ್ಷಿಣಾ ಆಫ್ರಿಕಾದಿಂದ ಈ ವರ್ಷದ ಆರಂಭದಲ್ಲಿ ಅಳಿವನಂಚಿನಲ್ಲಿರುವ ಅಪರೂಪದ ಚೀತಾಗಳನ್ನು ಕರೆತರಲಾಗಿತ್ತು.
First published:
17