ಅದೇ ಸಮಯದಲ್ಲಿ ಅರ್ಚನಾ ಅವರ ಪತಿ ಜಗಬಂಧು ಸೆಕೆಂಡ್ ಹ್ಯಾಂಡ್ ಕಾರುಗಳ ಶೋ ರೂಂ ನಡೆಸುತ್ತಿದ್ದರು. ಜಗಬಂಧು ಅನೇಕ ರಾಜಕಾರಣಿಗಳು, ಬಿಲ್ಡರ್ಗಳು, ಉದ್ಯಮಿಗಳು ಮತ್ತು ಹಣವಂತರ ಸಂಪರ್ಕ ಹೊಂದಿದ್ದರು. ಜಗಬಂಧು ಮತ್ತು ಅರ್ಚನಾ ಅವರು ಕೆಲವು ಶಾಸಕರು ಸೇರಿದಂತೆ ಪ್ರಭಾವಿ ವ್ಯಕ್ತಿಗಳೊಂದಿಗೆ ಇರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ರಾಜ್ಯಾದ್ಯಂತ ಕೋಲಾಹಲಕ್ಕೆ ಕಾರಣವಾಗಿವೆ.
ನಯಾಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಚಿತ್ರ ನಿರ್ಮಾಪಕರು, ಅರ್ಚನಾ ಅವರು ಇತರ ಹುಡುಗಿಯರೊಂದಿಗಿನ ಚಿತ್ರಗಳನ್ನು ತೋರಿಸಿ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಬ್ಬ ಬಾಲಕಿಯ ದೂರಿನ ಆಧಾರದ ಮೇಲೆ, ಆಕೆಯನ್ನು ಅಕ್ಟೋಬರ್ 6 ರಂದು ಬಂಧಿಸಲಾಯಿತು. ಅರ್ಚನಾ ತನ್ನನ್ನು ಸೆಕ್ಸ್ ದಂಧೆಗೆ ಬಳಸಿಕೊಂಡಿದ್ದಾಳೆ ಎಂದು ಬಾಲಕಿ ಆರೋಪಿಸಿದ್ದಳು.