ಬಂಗಾಳದ ಸ್ಟಾರ್ ಸಂಸದೆ ನುಸ್ರತ್ ಜಹಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಅದ್ಧೂರಿ ಮದುವೆಯಿಂದಾಗಿ ಗಮನ ಸೆಳೆದಿದ್ದ ನಟಿ ಈಗ ಆ ಮದುವೆಗೆ ಮಾನ್ಯತೆಯೇ ಇಲ್ಲ ಎಂದಿದ್ದಾರೆ. ಟೀಕೆಗಳ ಬಳಿಕವೂ ಅಂತರಧರ್ಮೀಯವಾಗಿದ್ದ ನಟಿ ಮದುವೆ ಹೀಗೆ ಮುರಿದು ಬೀಳಲು ಕಾರಣ ಏನು?
ಸಂಸದೆಯಾಗಿ ಆಯ್ಕೆಯಾಗುತ್ತಿದ್ದಂತೆ ನಟಿ ನುಸ್ರತ್ ಜಹಾನ್ ದೂರದ ಟರ್ಕಿಯಲ್ಲಿ ತಮ್ಮ ಬಹುಕಾಲದ ಗೆಳೆಯ ನಿಖಿಲ್ ಜೈನ್ನೊಂದಿಗೆ ವಿವಾಹವಾಗಿದ್ದರು
2/ 12
ಇದಾದ ಬಳಿಕ ಅದ್ದೂರಿ ಕೋಲ್ಕತ್ತಾದಲ್ಲಿ ಅದ್ಧೂರಿಯಾಗಿ ಆರತಕ್ಷತೆ ನಡೆಸುವ ಮೂಲಕ ದೇಶದ ಗಮನಸೆಳೆದಿದ್ದರು ನಟಿ ನುಸ್ರತ್ ಜಹಾನ್
3/ 12
ಮದುವೆ ಬಳಿಕ ಸಿಂಧೂರ ಇಡುವ ಮೂಲಕ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು
4/ 12
ಅನ್ಯೋನ್ಯವಾಗಿದ್ದ ಇವರ ದಾಂಪತ್ಯದಲ್ಲಿ ಕಳೆದ ನವಂಬರ್ನಲ್ಲಿಯೇ ಬಿರುಕು ಕಾಣಿಸಿಕೊಂಡಿದ್ದು, ಇದು ಈಗ ಬಹಿರಂಗವಾಗಿದೆ
5/ 12
ಉದ್ಯಮಿ ನಿಖಿಲ್ ಜೈನ್ ಮತ್ತು ನುಸ್ರತ್ ಸಂಬಂಧ ಹದಗೆಡಲು ಕಾರಣ ಹಣದ ವ್ಯವಹಾರ ಎಂಬುದು ಬಯಲಾಗಿದೆ.
6/ 12
ನುಸ್ರತ್ ಅಕ್ರಮವಾಗಿ ತನ್ನ ಖಾತೆಯ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನಿಖಿಲ್ ಆರೋಪಿಸಿದ್ದರು ಎಂದು ಸಂಸದೆ ತಿಳಿಸಿದ್ದಾರೆ
7/ 12
ಇದಕ್ಕೆ ತಿರುಗೇಟು ನೀಡಿರುವ ನಟಿ, ತಾನು ಯಾರ ಹಣವನ್ನು ಉಪಯೋಗಿಸಿಕೊಂಡು ತನ್ನ ಕುಟುಂಬ ಸಾಕುತ್ತಿಲ್ಲ. ತನ್ನ ತಂಗಿಯ ಶಿಕ್ಷಣ, ಪೋಷಕರ ಜವಾಬ್ದಾರಿಯನ್ನು ತಾನೇ ಹೊತ್ತಿರುವುದಾಗಿ ತಿಳಿಸಿದ್ದಾರೆ
8/ 12
ಅಷ್ಟೇ ಅಲ್ಲದೇ, ತಮ್ಮ ಖಾತೆಯಲ್ಲಿನ ಹಣವನ್ನು ಅಕ್ರಮ ಬಳಕೆ ಮಾಡಿದ ಕಾರಣ ಬ್ಯಾಂಕ್ ಗಳ ನೋಟಿಸ್ನ್ನು ನಾನು ಎದುರಿಸಿದ್ದೇನೆ. ಇದಕ್ಕೆ ಪುರಾವೆಗಳು ತನ್ನ ಬಳಿ ಇವೆ ಎಂದಿದ್ದಾರೆ
9/ 12
ಮದುವೆ ಸಮಯದಲ್ಲಿ ಸಿಕ್ಕ ಹಣ, ಒಡವೆ, ಬಟ್ಟೆಗಳು ಇನ್ನು ನಿಖಿಲ್ ಸುಪರ್ದಿಯಲ್ಲಿಯೇ ಇವೆ ಎಂದು ಆರೋಪಿಸಿದ್ದಾರೆ
10/ 12
ಆತ ಶ್ರೀಮಂತ ಎಂಬ ಕಾರಣಕ್ಕೆ ಮಹಿಳೆಯನ್ನು ಕಡಿಮೆ ಎಂಬಂತೆ ನೋಡಲು ಸಾಧ್ಯವಿಲ್ಲ ಎಂದಿದ್ದಾರೆ
11/ 12
ಈ ಎಲ್ಲಾ ಕಾರಣದಿಂದ ತಾವು ನಿಖಿಲ್ನಿಂದ ದೂರಾಗಿದ್ದಾಗಿ ತಿಳಿಸಿದ್ದಾರೆ
12/ 12
ಟರ್ಕಿಯ ಕಾನೂನು ಪ್ರಕಾರ ನಡೆದ ನಮ್ಮ ಮದುವೆಗೆ ಭಾರತದಲ್ಲಿ ಯಾವುದೇ ಮಾನ್ಯತೆ ಇಲ್ಲ. ಹೀಗಾಗಿ ವಿಚ್ಛೇದನದ ಪ್ರಶ್ನೆ ಇಲ್ಲ. ಆತನಿಂದ ಈಗಾಗಲೇ ನಾನು ದೂರಾಗಿದ್ದೇನೆ ಎಂದಿದ್ದಾರೆ